ಬಿಸಿ ಬಿಸಿ ಸುದ್ದಿ

ವಿಶ್ವರಾಧ್ಯರ ಪುರಾಣ ಮಂಗಲೋತ್ಸವ

ಕಲಬುರಗಿ; ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಿರುವ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ತಿಂಗಳ ಪರ್ಯಂತ ನಡೆಸಿಕೊಂಡು ಬಂದಿರುವ ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ದಸಂಸ್ಥಾನ ಮಠದ ಶ್ರೀ ವಿಶ್ವರಾಧ್ಯರ ಪುರಾಣ ಪ್ರವಚನ ಮಂಗಲೋತ್ಸವ ಕಾರ್ಯಕ್ರಮ ಜರುಗಲಿದೆ.

ಸೋಮವಾರ ಬೆಳಿಗ್ಗೆ 10:00ಗಂಟೆಗೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿರುವ ಅಬ್ಬೆತುಮಕೂರಿನ ಸಿದ್ದಸಂಸ್ಥಾನ ಮಠದ ಪರಮು ಪೂಜ್ಯ ಶ್ರೀ ಗಂಗಾಧರ ಮಹಾಸ್ವಾಮಿಗಳವರಿಗೆ ವಿದ್ಯಾನಗರ ಕಾಲೋನಿಯ ಮುಖ್ಯಧ್ವಾರದಿಂದ ಸುಮಂಗಲೆಯರ ಕುಂಬ-ಕಳಸ, ಬಾಜಾ ಬಜಂತ್ರಿಗಳೊಂದಿಗೆ ಸಾರೋಟಿನಲ್ಲಿ ದೇವಸ್ಥಾನದವರೆಗೆ ಮೆರವಣಿಗೆ ಜರುಗಲಿದೆ. ಬೆಂಗಳೂರಿನ ಮಾಜಿ ಕ್ರೆಡಲ್ ಅಧ್ಯಕ್ಷರಾದ ಶ್ರಿ ಚಂದು ಬಿ. ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಎಂ.ಬಿ. ನಗರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷರಾದ ಚಂದ್ರಶೇಖರ ತಿಗಡಿ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಪುರಾಣ ಪ್ರವಚನಕಾರರಾದ ವೇ|| ಮೂ|| ಮಲ್ಲಿಕಾರ್ಜುನ ಶಾಸ್ತ್ರಿ ಅವರು ಕಾರ್ಯಕ್ರಮದ ನೇತ್ರತ್ವ ವಹಿಸಲಿದ್ದಾರೆ. ವಿದ್ಯಾನಗರ ವೆಲ್‍ಫೇರ್ ಸೊಸೈಟಿ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ.

ಸೊಸೈಟಿಯ ಉಪಾಧ್ಯಕ್ಷ ಉಮೇಶಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ, ಮಲ್ಲಿಕಾರ್ಜುನ ತರುಣ ಸಂಘದ ವಿರೇಶ ನಾಗಶೆಟ್ಟಿ, ಕರಣ ಆಂದೋಲಾ ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ ರತ್ನಾಬಾಯಿ ನಿಂಬೂರ, ವಿಜಯಲಕ್ಷ್ಮಿ ರಟಕಲ್ ಹಾಗು ಪದಾಧಿಕಾರಿಗಳು ಉಪಸ್ಥಿತರಿರುವರು.

ಭೂಸನೂರಿನ ವೇ|| ಮೂ|| ಗುರುಶಾಂತಯ್ಯ ಸ್ಥಾವರಮಠ ಹಾಗು ವೀರಭದ್ರಯ್ಯ ಸ್ಥಾವರಮಠ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

“ನಗೆ ಹಬ್ಬ” ಅಂದು ಬೆಳಿಗ್ಗೆ 11:00ಗಂಟೆಗೆ ಕಲ್ಯಾಣ ಕರ್ನಾಟಕದ ಬಿ.ಚಿ ಎಂದೇ ಪ್ರಖ್ಯಾತಿ ಪಡೆದ ಖ್ಯಾತ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹರಸೂರ ಅವರಿಂದ ಹಾಸ್ಯ ಕಾರ್ಯಕ್ರಮ. ತೊಟ್ಟಿಲು ಹಾಗು ಇನ್ನಿತರ ಸಲಕರಣೆಗಳ ಹರಾಜು ನಂತರ ಪೂಜ್ಯಶ್ರೀಗಳಿಂದ ಆಶೀರ್ವಚನ ನಂತರ ಪ್ರಸಾದ ವ್ಯವಸ್ಥೆ ಇರುತ್ತದೆ. ಸಕಲ ಭಕ್ತರು ಆಶೀರ್ವಚನ ಕೇಳಿ ಪ್ರಸಾದ ಸ್ವೀಕರಿಸಬೇಕೆಂದು ವಿದ್ಯಾನಗರ ವೆಲ್‍ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

6 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

6 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

6 hours ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

6 hours ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

6 hours ago

ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿ ಪ್ರಿಯಾಂಕ್ ಖರ್ಗೆ

ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…

6 hours ago