ಬಿಸಿ ಬಿಸಿ ಸುದ್ದಿ

ಹೆಣ್ಣಿನ ಸ್ವಾತಂತ್ರ್ಯ, ಗೌರವ, ಆತ್ಮ ಸಾಧನೆಗೆ ಪ್ರತೀಕ

ಕಲಬುರಗಿ: 12ನೇ ಶತಮಾನದ ಅಕ್ಕಮಹಾದೇವಿ ಅಧ್ಯಾತ್ಮದ ಮೇರು ಪರ್ವತ. ಹೆಣ್ಣಿನ ಸ್ವಾತಂತ್ರ್ಯ, ಗೌರವ, ಆತ್ಮ ಸಾಧನೆಗೆ ಪ್ರತೀಕವಾಗಿದ್ದಾರೆ ಎಂದು ಡಾ. ಚಿತ್ಕಳಾ ಮಠಪತಿ ಅಭಿಪ್ರಾಯಪಟ್ಟರು.

ಡಾ. ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಬಸವ ಸಮಿತಿ ಆಶ್ರಯದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ಜರುಗಿದ ಮಹಾದೇವಿಯಕ್ಕಗಳ ಸಮ್ಮೇಳನದ ಮಂಗಲದ ಹರಹು ಕಾರ್ಯಕ್ರಮದಲ್ಲಿ
ಸಮಾರೋಪ ನುಡಿಗಳನ್ನಾಡಿದ ಅವರು, ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನ ನರ ಜನ್ಮದಿಂದ ಹರ ಜನ್ಮದ ಕಡೆ ಹೋಗುವ ಸನ್ಮಾರ್ಗಕ್ಕೆ ದಾರಿ ತೋರಿಸಿತು ಎಂದರು.

ಮಹಿಳೆ ಮನಸ್ಸು ಮಾಡಿದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದಕ್ಕೆ ಈ ಸಮ್ಮೇಳನ ಸಾಕ್ಷಿಯಾಗಿತ್ತು. ನುಡಿ ಕಲಾವಿದೆಯರು, ಕಂಠ ಕಲಾವಿದೆಯರು ಇಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮರೆದರು. ಅಕ್ಕನ ಬದುಕು ನೆಮ್ಮದಿ ನೀಡುತ್ತದೆ ಎಂಬುದಕ್ಕೆ ಸಮ್ಮೇಳನ ಸಾಕ್ಷಿಯಾಯಿತು ಎಂದು ತಿಳಿಸಿದರು.

ನಂತರ ಡಾ. ಬಿ.ಡಿ. ಜತ್ತಿ ವೈರಾಗ್ಯ ನಿಧಿ ಅಕ್ಕ ಪ್ರಶಸ್ತಿ- 2023 ಡಾ. ದಾಕ್ಷಾಯಣಿ ಎಸ್. ಅಪ್ಪ ಅವರಿಗೆ ಪ್ರದಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವ ಅವರು, ಅಕ್ಕನ ಹೆಸರಿನ, ಭಾರತದ ಮಾಜಿ ರಾಷ್ಟಪತಿ ಜತ್ತಿಯವರ ಹೆಸರಿನ ಈ ಪ್ರಶಸ್ತಿ ನೀಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಈ ಪ್ರಶಸ್ತಿಯಿಂದ ಹೆಚ್ಚಿನ ಸೇವೆ ಮಾಡುವ ಅವಕಾಶ ದೊರೆತಿದೆ. ಈ ಪ್ರಶಸ್ತಿ ಕೇವಲ ನಮ್ಮೊಬ್ಬರಿಗೆ ಬಂದಿಲ್ಲ. ಎಲ್ಲ ಮಹಿಳೆಯರಿಗೆ ಸಂದಿರುವುದು ಎಂದು ಮನದುಂಬಿ ಮಾತನಾಡಿದರು. ಮುತ್ತು ನೀರಲ್ಲಾಯಿತು ಎನ್ನುವ ಅಕ್ಕನ ವಚನದಂತೆ ನೀರಲ್ಲಿ ಕರಗದೆ ಮುತ್ತಿನಂತೆ ಬದುಕು ನಡೆಸಬೇಕು ಎಂದು ತಿಳಿಸಿದರು.

ಶರಣಬಸವೇಶ್ವರ ಮಹಾಸಂಸ್ಥಾನ ಗಂಡನ ಮನೆಯಾದರೆ, ಬಸವ ಸಮಿತಿ ನನಗೆ ತವರುಮನೆ ಇದ್ದ ಹಾಗೆ ಎಂದು ಸ್ಮರಿಸಿಕೊಂಡರು.

ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ, ಅಕ್ಕನ ಹೆಸರಿನಲ್ಲಿ ಕಳೆದ 13 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಮಹಾದೇವಿಯಕ್ಕಗಳ ಸಮ್ಮೇಳನ ವಿಶ್ವಕ್ಕೆ ಮಾದರಿಯಾಗಿದೆ ಎಂದು ನುಡಿದರು.

ಬಸವತತ್ವ ಅನುಷ್ಠಾನದ ಅವಲೋಕನ ಮಾಡಿಕೊಳ್ಳುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ವಚನ ಸಾಹಿತ್ಯವನ್ನು ಮತ್ತೆ ಸಮಾಜದಲ್ಲಿ ಬಿತ್ತುವ ಕಾರ್ಯ ಅಗತ್ಯವಿದ್ದು, ಬಸವತತ್ವದ ಗಟ್ಟಿ ಬೀಜಗಳು ನಾವಾಗಬೇಕು ಎಂದರು.

ಇದೇವೇಳೆಯಲ್ಲಿ ಗಿರಿಜಕ್ಕ ಧರ್ಮರಡ್ಡಿ ಅವರು ರಚಿಸಿದ ಶರಣರು ಕಂಡ ಅನಾದಿ ಬಸವಣ್ಣ ಗ್ರಂಥವನ್ನು ಡಾ. ದಾಕ್ಷಾಯಣಿ ಅವ್ವ ಅನಾವರಣಗೊಳಿಸಿದರು.

ಡಾ. ವಿಲಾಸವತಿ ಖೂಬಾ, ಡಾ. ಜಯಶ್ರೀ ದಂಡೆ, ಶಾರದಾ ಜತ್ತಿ, ಅನಸೂಯಾ ನಡಕಟ್ಟಿ, ಶರಣಮ್ಮ ಕಲಬುರ್ಗಿ ವೇದಿಕೆಯಲ್ಲಿದ್ದರು.

ಡಾ. ಸುಜಾತಾ ಪಾಟೀಲ ನಿರೂಪಿಸಿದರು. ಡಾ. ಶ್ಯಾಮಲಾ ಸ್ವಾಮಿ ಸ್ವಾಗತಿಸಿದರು. ಅನಿತಾ ಭಕರೆ ವಂದಿಸಿದರು. ನಂತರ ಕಲಬುರಗಿ ಅಮರ ಕಲಾವೃಂದದ ಅಮರಪ್ರಿಯ ಹಿರೇಮಠ ನಿರ್ದೇಶನದ ನೀಲ ತಾವರೆ ರೂಪಕ ಪ್ರಸ್ತುತಪಡಿಸಲಾಯಿತು.

ಡಾ. ವೀರಣ್ಣ ದಂಡೆ, ರವೀಂದ್ರ ಶಾಬಾದಿ, ಎಚ್.ಕೆ. ಉದ್ದಂಡಯ್ಯ, ಬಸವರಾಜ ಧೂಳಾಗುಂಡಿ, ಶಿವಕುಮಾರ ರೇಶ್ಮಿ ಇತರರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago