ಕಲಬುರಗಿ; ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಸೇಡಂ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕವಾಗಿ ಹಮ್ಮಿಕೊಂಡ ಭಾರತ ಮಾತೆಯ ಹೆಮ್ಮೆಯ ಪುತ್ರ ಕ್ರಾಂತಿ ಕಾರಿ ಭಗತ್ ಸಿಂಗ್ ರವರ ಜಯಂತಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮವು ಲಿಂಗರಾಜ್ ಸ್ವಾಮಿ ನೇತೃತ್ವದಲ್ಲಿ ಜರುಗಿದ್ದು, ಭಗತ್ ಸಿಂಗ ರವರ ಪ್ರತಿಮೆಯನ್ನು ಸುಲೇಪೇಟ ಪಿಎಸ್ಐ ನಂದಿನಿ ರವರು ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಗತ್ ಸಿಂಗ್ ರವರ ಪ್ರತಿಮೆಯನ್ನು ಮಣ್ಣಿನಲ್ಲಿ ಆಕಾರ ಮಾಡಿದ ಕಲಾವಿದ ತಿಪ್ಪಣ್ಣ ಪೂಜಾರಿಗೆ ಸನ್ಮಾನಿಸಿದರು.
ನಂತರ ಮಾತನಾಡಿ ಪಿಎಸ್ಐ ನಂದಿನಿ ಸ್ವಾತಂತ್ರ ಸಮಯಯದಲ್ಲಿ ಭಗತ್ ಸಿಂಗ್ ನಡೆ ಇಂದಿಗೂ ನಮ್ಮ ಜೀವನದಲ್ಲಿ ಸ್ಫೂರ್ತಿಯಾಗಿದೆ,ಅವರ ದಿಟ್ಟತನ ಹಾಗೂ ದೇಶಕೋಸ್ಕರ ತಮ್ಮ ಜೀವನವೇ ಪಣಕಿಟ್ಟ ಕ್ರಾಂತಿ ಕಾರಿ ಭಗತ್ ಸಿಂಗ್ ಚಿಕ್ಕ ವಯಸಿನಲ್ಲೇ ದೇಶದ ಸ್ವಾತಂತ್ರ ಸಲವಾಗಿ ಹೋರಾಡಿ ಪ್ರಾಣವನ್ನೇ ಅರ್ಪಿಸಿದ ಭಗತ್ ಸಿಂಗ್ ಅವರನ್ನು ನಾವೆಲ್ಲರೂ ನೆನೆಯೋಣ ಎಂದು ಕರೆ ನೀಡಿದರು.
ನಂತರ ಮಣಿಕರಾವ್ ಗುಲಗುಂಜಿ, ರಜಾಕ್ ಪಟೇಲ್, ಲಿಂಗರಾಜ ಸ್ವಾಮಿ, ಮಾತನಾಡಿದರು. ಈ ವೇಳೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಸಂತೋಷ ರಾಠೋಡ್, ಮಾಣಿಕ್ ರಾವ್ ಗುಲಗುಂಜಿ,ರೇವನಸಿದ್ದಯ್ಯ ಸ್ವಾಮಿ ದಾಸ್ತಾಪುರ್, ರಜಾಕ್ ಪಟೇಲ್,ನಾಗುರಾವ್ ಬಸುದೇ, ಮೊಯಿನ್ ಮೊಮಿನ್,ಸುಭಾಷ್ ನಿಡಗುಂದಿ, ಅಂಬರೀಷ್ ಸುಂಕದ, ಮಹಾಂತೇಶ್ ಸಾಲಿ ,ತೊಫಿಕ್ ,ವಿನಯ್ ಮೇದಾರ್,ಚೇತನ್,ಶಾಂತಕುಮಾರ್,ವಿರೇಶ್,ಭೀಮು ಹಾಗು ನಿರೂಪಣೆ ರುದ್ರಮುನಿ ರಾಮತೀರ್ಥಕರ್ ನೆರವೇರಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…