ಬಿಸಿ ಬಿಸಿ ಸುದ್ದಿ

ಅಸ್ಪøಶ್ಯತೆ-ಮೌಢ್ಯಾಚಾರಣೆಗೆ ವಿಜ್ಞಾನವೇ ದೀವಿಗೆ: ಲಂಡನಕರ್

ವಾಡಿ: ಮಾನವನ ಐಕ್ಯತೆ ಒಡೆದು ಹಾಕುತ್ತಿರುವ ಜಾತಿ ಮತ್ತು ಧರ್ಮಗಳಿಂದ ಈ ಸಮಾಜದಲ್ಲಿ ಅಸಮಾನತೆ, ಅಸ್ಪøಶ್ಯತೆ ಹಾಗೂ ಮೌಢ್ಯಾಚರಣೆ ಮಿತಿಮೀರಿದೆ. ವೈಜ್ಞಾನಿಕ ಮತ್ತು ಧರ್ಮನಿರಪೇಕ್ಷ ಶಿಕ್ಷಣ ಜಾರಿಯಿಂದ ಮಾತ್ರ ಮಾನವೀಯ ಮೌಲ್ಯಗಳು ಉಳಿಯಲು ಸಾಧ್ಯ ಎಂದು ಗುಲಬರ್ಗಾ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ರಮೇಶ ಲಂಡನಕರ್ ಹೇಳಿದರು.

ನವೋದಯದ ಹರಿಕಾರ ಈಶ್ವರಚಂದ್ರ ವಿದ್ಯಾಸಾಗರ್ ಅವರ 203ನೇ ಜನ್ಮದಿನ ಪ್ರಯುಕ್ತ್ತ ಗುರುವಾರ ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‍ಇಸಿ) ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆ ಜಂಟಿಯಾಗಿ ಏರ್ಪಡಿಸಿದ್ದ ವಿಶ್ವಮಾನ ಚಿಂತನಾಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಜಾತ್ಯಾತೀತ ಸಂವಿಧಾನ ಜಾರಿಯಲ್ಲಿದ್ದರೂ ಮನುಸ್ಮøತಿಯ ಆಚರಣೆಗಳು ಹೆಡೆಯಾಡುತ್ತಿವೆ. ಸಂಸತ್ ಭವನದ ಆಡಳಿತದಿಂದ ಒಂದು ಧರ್ಮಕ್ಕೆ ಸೇರಿದ ಸಾಂಪ್ರದಾಯಿಕ ಚಿಂತನೆಗಳು ಆಚರಣೆಗೆ ಬರುತ್ತಿವೆ. ಬಹುಧರ್ಮ ಸಂಸ್ಕøತಿಯ ಭಾರತದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆಯುಂಟಾಗುವ ಕಾರ್ಯಗಳು ಘಟಿಸುತ್ತಿವೆ ಎಂದು ವಿಷಾಧಿಸಿದರು.

ಸಮಾಜವನ್ನು ವಿಶ್ವಮಾನವ ಚಿಂತನೆಯಡೆಗೆ ಸಾಗಿಸಲು ಮಹಾನ್ ಮಾನವತಾವಾದಿಗಳಾದ ರಾಜಾರಾಮ ಮೋಹನರಾಯ, ಈಶ್ವರಚಂದ್ರ ವಿದ್ಯಾಸಾಗರ್, ಕುವೆಂಪು ಸೇರಿದಂತೆ ಹಲವು ಚಿಂತಕರು ವೈಚಾರಿಕ ನೀತಿಗಳನ್ನು ಬಿತ್ತಿದ್ದಾರೆ. ಇವರ ವಿಚಾರಗಳನ್ನು ಆದರ್ಶವಾಗಿ ಸ್ವೀಕರಿಸುವ ಮೂಲಕ ನನ್ನಲ್ಲಿ ಯಾವ ಮೌಲ್ಯಗಳಿಗೆ ಕೊರೆತೆಯುಂಟಾಗಿದೆ ಎಂದು ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಂಡು ಬದಲಾದಾಗ ಮಾತ್ರ ನಾವು ಮಾನವರಾಗಲು ಸಾಧ್ಯ. ಮಹಾನ್ ನಾಯಕರುಗಳ ಜನ್ಮದಿನಗಳು ಆಚರಣೆಗೆ ಸೀಮಿತವಾಗದೆ, ಅವರ ಕನಸುಗಳ ಸಾಕಾರಕ್ಕೆ ಸಂಘಟಿತರಾಗಬೇಕು. ಸಮಾಜ ಪ್ರಗತಿಯತ್ತ ಸಾಗಲು ವೈಜ್ಞಾನಿಕ ಚಿಂತನೆಗಳ ವಿಕಾಸವಾಗಬೇಕು ಎಂದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಕಾರ್ಯದರ್ಶಿ ಮಹೇಶ ಎಸ್.ಜಿ ಮಾತನಾಡಿ, ವಿಧವಾ ವಿವಾಹ ಬೆಂಬಲಿಸಿ ಹೋರಾಡಿದ ಈಶ್ವರಚಂದ್ರ ವಿದ್ಯಾಸಾಗರ್ ಅವರು ಸ್ವತಹಃ ತಮ್ಮ ಮಗನಿಗೆ ವಿಧವೆಯೊಂದಿಗೆ ವಿವಾಹ ಮಾಡಿಸುವ ಮೂಲಕ ತಾವು ನಂಬಿದ ಚಿಂತನೆಗಳನ್ನು ಎತ್ತಿಹಿಡಿದರು. ಮುಂದೆ ಅವರ ಮಗ ವಿಧವೆಯೊಂದಿಗೆ ಆದ ಮದುವೆಯನ್ನು ಧಿಕ್ಕರಿಸಿ ಪತ್ನಿಯನ್ನು ತೊರೆಯುತ್ತಾನೆ.

ಇದರಿಂದ ರೊಚ್ಚಿಗೆದ್ದ ವಿದ್ಯಾಸಾಗರರು ಈತ ನನ್ನ ಮಗನೇ ಅಲ್ಲ ಎಂದು ಘೋಷಿಸಿ ತಮ್ಮೆಲ್ಲಾ ಆಸ್ತಿಯನ್ನು ಸೊಸೆಗೆ ಮಗಳ ಸ್ಥಾನದಲ್ಲಿಟ್ಟು ಬರೆದುಕೊಡುತ್ತಾರೆ. ಹೀಗೆ ಮೌಢ್ಯ ಕಂದಾಚಾರಗಳನ್ನು ಹೊತ್ತ ಅಸಮಾನತೆಯ ಸಮಾಜದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಠಿಸುತ್ತಾರೆ. ಬದಲಾವಣೆ ಎಂಬುದು ಸರಳವಾಗಿ ಬರುವಂತದ್ದಲ್ಲ. ಅಲ್ಲಿ ನೋವಿದೆ ಎಂಬುದನ್ನು ಅರಿತು ಹೆಜ್ಜೆಯಿಡಬೇಕು. ಪ್ರಪಂಚನ್ನು ಬದಲಾಯಿಸಲು ಹೊರಡುವ ಮುಂಚೆ ನಮ್ಮನ್ನು ನಾವೇ ಬದಲಿಸಿಕೊಳ್ಳಬೇಕು. ಜಾತಿ, ಧರ್ಮ ಹಾಗೂ ಸಿದ್ಧಾಂತಗಳನ್ನು ಕುರುಡಾಗಿ ಅಥವ ಭಾವನಾತ್ಮಕವಾಗಿ ನಂಬದೇ ಇಂದಿನ ಜನಗಳಿಗೆ ಇದು ಅವಶ್ಯಕವೇ? ಎಂದು ಅರಿಯಬೇಕು. ಅದು ಅವಶ್ಯಕವಿಲ್ಲ ಎಂದನಿಸಿದರೆ ತಕ್ಷಣವೇ ಅದನ್ನು ತೆಗೆದು ಕಸದ ಬುಟ್ಟಿಗೆ ಎಸೆಯಬೇಕು ಎಂದು ಕರೆ ನೀಡಿದರು.

ಎಐಎಸ್‍ಇಸಿ ಸಂಘಟನಾಕಾರ್ತಿ ಪದ್ಮರೇಖಾ ಆರ್.ಕೆ ಮಾತನಾಡಿದರು. ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆಯ ಜಿಲ್ಲಾ ಸಂಘಟನಾಕಾರ ಮಡಿವಾಳಪ್ಪ ಹೇರೂರ ಅಧ್ಯಕ್ಷತೆ ವಹಿಸಿದ್ದರು. ವೀರಭದ್ರಪ್ಪಾ ಆರ್.ಕೆ, ಶರಣುಕುಮಾರ ದೋಶೆಟ್ಟಿ, ರಮೇಶ ಮಾಶಾಳಕರ, ಯೇಸಪ್ಪ ಕೇದಾರ, ವಿ.ಕೆ.ಕೇದಿಲಾಯ, ಬಾಬುಮಿಯ್ಯಾ, ಭೀಮಶಾ ಜಿರೊಳ್ಳಿ, ಜಯದೇವ ಜೋಗಿಕಲಮಠ, ಶಿವಪ್ಪ ಮುಂಡರಗಿ, ನಾಗೇಂದ್ರ ಜೈಗಂಗಾ, ಮಲ್ಲಿಕಾರ್ಜುನ ತಳವಾರ, ಶ್ರೀದೇವಿ ಮಲಕಂಡಿ, ಶಿವಲೀಲಾ ಮಾಶಾಳಕರ, ಗೋದಾವರಿ ಕಾಂಬಳೆ, ವೀರಣ್ಣ ಯಾರಿ, ಸಂತೋಷ ಜೋಗೂರ, ರವಿ ಕೋಳಕೂರ, ಶ್ರೀನಾಥ ಇರಗೊಂಡ, ಚಂದ್ರು ಕರಣಿಕ, ಸಿದ್ದಯ್ಯಶಾಸ್ತ್ರೀ ನಂದೂರಮಠ, ಶ್ರವಣಕುಮಾರ ಮೊಸಲಗಿ, ಶ್ರೀಶರಣ ಹೊಸಮನಿ, ವಿಜಯಕುಮಾರ ಯಲಸತ್ತಿ, ಲೋಕಪ್ಪ ಹೊಸಮನಿ ಸೇರಿದಂತೆ ಹಲವು ಪಾಲ್ಗೊಂಡಿದ್ದರು. ಸಾಯಬಣ್ಣ ನಾಟೇಕರ ನಿರೂಪಿಸಿ, ವಂದಿಸಿದರು. ಇದೇ ವೇಳೆ ಜನಕಲಾ ಸಮಿತಿಯ ಶೋಭಾ ನಿಂಬರ್ಗಾ ತಂಡದವರು ಪ್ರಗತಿಪರ ಗೀತೆಗಳನ್ನು ಹಾಡಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago