ಬಿಸಿ ಬಿಸಿ ಸುದ್ದಿ

ಗ್ರಂಥಪಾಲಕರಿಗೆ ಗುರುತಿನ ಚೀಟಿ ವಿತರಣೆ

ಚಿತ್ತಾಪುರ: ಗ್ರಾಮೀಣ ಓದುಗರನ್ನು ಸೆಳೆಯಲ್ಲೆಂದೇ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ. ಗ್ರಂಥಪಾಲಕರು ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಮತ್ತು ಸಾಹಿತ್ಯಾಸಕ್ತರನ್ನು ಸೆಳೆಯಬೇಕು ಎಂದು ಚಿತ್ತಾಪುರ ತಾಪಂ ಸಹಾಯಕ ನಿರ್ದೇಶಕ ಶ್ರೀಮಂತ ಸಿಂಧೆ ಹೇಳಿದರು.

ಸೋಮವಾರ ಪಟ್ಟಣದ ತಾಪಂ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಕನಿಷ್ಟವೇತನಕ್ಕೆ ಭಾಜನರಾದ ಗ್ರಾಮೀಣ ಗ್ರಂಥಪಾಲಕರಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಗೌರವ ಧನ ಪಡೆದು ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದವರ ಶ್ರಮವನ್ನು ಗುರುತಿಸಿ ಸರ್ಕಾರ ಕನಿಷ್ಟ ವೇತನ ಜಾರಿಗೊಳಿಸಿದೆ. ಆ ಮೂಲಕ ಗ್ರಂಥಪಲಾಕರ ಆರ್ಥಿಕ ಭವಿಷ್ಯ ಕಾಪಾಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ಮುಂದುವರೆಸಬೇಕು. ಹೆಚ್ಚೆಚ್ಚು ಓದುಗರನ್ನು ಗ್ರಂಥಾಲಯಗಳಿಗೆ ಸೆಳೆಯುವ ಕೆಲಸ ಮಾಡಬೇಕು ಎಂದರು.

ಗ್ರಂಥಾಲಯಗಳಿಗೆ ಪೂರೈಕೆ ಮಾಡಲಾಗಿರುವ ಕಂಪ್ಯೂಟರ್, ಲ್ಯಾಪ್‍ಟಾಪ್, ಮೋಬಾಯಿಲ್ ಫೋನ್‍ಗಳು ಸೇರಿದಂತೆ ಮಕ್ಕಳ ಆಟಿಕೆಗಳು ಸದ್ಬಳಕೆಯಾಗಬೇಕು. ಓದುವ ಹವ್ಯಾಸದಿಂದ ವಿಮುಖರಾಗುವ ಮೂಲಕ ಮೋಬಾಯಿಲ್ ದಾಸರು ಪುನಹ ಗ್ರಂಥಾಲಯಗಳಿಗೆ ಬರುವಂತಾಗಬೇಕು. ಸಾಹಿತ್ಯ ಜ್ಞಾನ ಭಂಡಾರದ ಕಣಜಗಳಾಗಿರುವ ಗ್ರಂಥಾಲಯಗಳು ಜನರ ಜೀವನ ಶೈಲಿಯನ್ನೇ ಬದಲಿಸುವ ತಾಕತ್ತು ಹೊಂದಿವೆ. ಇದನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಗ್ರಂಥಪಾಲಕರು ಕ್ರೀಯಾಶೀಲತೆಯಿಂದ ಶ್ರಮಿಸಬೇಕು ಎಂದು ಹೇಳಿದರು.

ತಾಪಂ ಅಧಿಕಾರಿ ಮುಬಶೀರ್ ಅಲಿ, ವಿವಿಧ ಗ್ರಾಮಗಳ ಗ್ರಂಥಪಾಲಕರಾದ ಸಿದ್ರಾಮಪ್ಪ ಆರಿ, ಪ್ರಕಾಶ ಚಂದನಕೇರಿ, ಕಾಶೀಂ ಗುಡೆಸಾಬ, ಸುರೇಶ ಪಾಟೀಲ, ಗೋಪಾಲ ಪವಾರ, ದೇವಿಂದ್ರ ಚನ್ನಬಾ, ವಿಜಯಕುಮಾರ ಏರಿ, ಮಹೇಶ ಸಾತನೂರ, ಸುಮಂಗಲಾ ಭೀಮನಳ್ಳಿ, ಶಿವುಕುಮಾರ ಅನವಾರ, ದೇವಮ್ಮಾ ಪೂಜಾರಿ, ಸುಮಂಗಲಾ ಕಮರವಾಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago