ಕಲಬುರಗಿ: ಶೂದ್ರ ನೆಲದ ಮಾತು ಪ್ರತಿಷ್ಠಾನದ 2023 ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಕನ್ನಡ ಸಾಹಿತ್ಯ ಸಂಸ್ಕೃತಿಗೆ ಕೊಟ್ಟಿರುವ ಒಟ್ಟು ಕೊಡುಗೆಯನ್ನು ಗಮನಿಸಿ ಕೊಡುವ, ಕಿ ರಂ ನಾಗರಾಜ್ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಪ್ರೊ ಜಿ.ಎಸ್. ಸಿದ್ಧಲಿಂಗಯ್ಯ ಅವರಿಗೆ, ಅತ್ತ್ಯಮ ಪ್ರಯೋಗಶೀಲ ರೈತರಿಗೆ ಕೊಡುವ, ಪ್ರಯೋಗಶೀಲ ರೈತರಾಗಿದ್ದ ನಂಜಪ್ಪರೆಡ್ಡಿ ಪ್ರಶಸ್ತಿಯನ್ನು ಜಿ. ಸುಶೀಲ್ ಅವರಿಗೆ ಅತ್ಯುತ್ತಮ ರಂಗನಟರಿಗೆ ನೀಡುವ ಡಾ ಕೆ ಮರುಳಸಿದ್ದಪ್ಪ ಅತ್ಯುತ್ತಮ ರಂಗ ನಟ ಪ್ರಶಸ್ತಿಯನ್ನು, ಪ್ರಸನ್ನ ಅವರಿಗೆ, ನೀಡಲಾಗುವುದು.
2022 ನೇ ಸಾಲಿನಲ್ಲಿ ಪ್ರಕಟವಾದ ಅತ್ಯುತ್ತಮ ಕವನ ಸಂಕಲನಕ್ಕೆ ನೀಡುವ ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿಯನ್ನು, ರೇಣುಕಾ ರಮಾನಂದ ಅವರ ‘ಸಂಬಾರ ಬಟ್ಟಲ ಕೊಡಿಸು’ ಕವನ ಸಂಕಲನಕ್ಕೆ ಮತ್ತು ವೈಚಾರಿಕ ಸಾಹಿತ್ಯಕ್ಕೆ ನೀಡುವ ಕವಿ ಡಾ ಸಿದ್ಧಲಿಂಗಯ್ಯ ಪ್ರಶಸ್ತಿಯನ್ನು ಪ್ರೊ ಎಚ್ ಟಿ ಪೋತೆಯವರ ‘ಅಂಬೇಡ್ಕರ್ ಮತ್ತು’ ಕೃತಿಗಳಿಗೆ ನೀಡಲಾಗುವುದು.
ಒಟ್ಟು ಸಾಹಿತ್ಯ ಸಾಧನೆಗೆ ನೀಡುವ ಕಿರಂ ನಾಗರಾಜ ಪ್ರಶಸ್ತಿ ಮತ್ತು ನಂಜಪ್ಪರೆಡ್ಡಿ ಪ್ರಗತಿಪರ ರೈತ ಪ್ರಶಸ್ತಿಗೆ ತಲಾ ಇಪ್ಪತ್ತು ಸಾವಿರ, ಜಿ ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಡಾ. ಕೆ. ಮರುಳ ಸಿದ್ದಪ್ಪ ಉತ್ತಮ ರಂಗ ನಟ ಪ್ರಶಸ್ತಿ ಮತ್ತು ಡಾ. ಸಿದ್ಧಲಿಂಗಯ್ಯ ಉತ್ತಮ ವೈಚಾರಿಕ ಸಾಹಿತ್ಯ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂಪಾಯಿಗಳು,ಫಲಕ, ಸನ್ಮಾನ ಪತ್ರಗಳನ್ನು ಒಳಗೊಂಡಿರುತ್ತವೆ.
ಪ್ರತಿಷ್ಠಾನದ ಅಧ್ಯಕ್ಷರಾದ ಎಚ್ ದಂಡಪ್ಪನವರ ಅಧ್ಯಕ್ಷತೆಯಲ್ಲಿ,ಸದಸ್ಯರು ಮತ್ತು ತೀರ್ಪುಗಾರರು ಸೇರಿದ್ದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಡಿಸೆಂಬರ್ ನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಪ್ರತಿಷ್ಠಾನದ ಕಾರ್ಯದರ್ಶಿ ಯಶವಂತ ಪ್ರೀತಿ ರೆಡ್ಡಿ ತಿಳಿಸಿದ್ದಾರೆ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…