ಕಲಬುರಗಿ: ಬಹುತೇಕ ಕಾರ್ಯಾಗಾರಗಳಲ್ಲಿ ಉನ್ನತ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಬಂದು ಕಾರ್ಯಾಗಾರವನ್ನು ನಡೆಯಿಸಿಕೊಡುವುದು ಸರ್ವೇಸಾಮಾನ್ಯ ಅದರೆ ತಾಂತ್ರಿಕತೆಯಲ್ಲಿ ನುರಿತ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ನಡೆಯಿಸಿಕೊಡುವುದು ಇದೇ ಮೊದಲಬಾರಿ. ಈ ತರಹದ ಕಾರ್ಯಾಗಾರ ನಮ್ಮ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವುದು ಮೊದಲಬಾರಿಗೆ. ಇಂತಹ ಕಾರ್ಯಾಗಾರದಿಂದ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಸಾಮರ್ಥ್ಯ ಹೆಚ್ಚುವುದಲ್ಲದೆ ವಿಶ್ವಾಸವೂ ಮೂಡುವುದು ಎಂದು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್.ಹೆಬ್ಬಾಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾವು ಎರ್ಪಡಿಸಿದ ಟೆಕ್ಯೂಪ – ೩ ಪ್ರಾಯೋಜಿತ ಐದು ದಿನಗಳ ರೋಬೋಟಿಕ್ಸ ಮತ್ತು ಆರ್ಡಿನೋ ಕಾರ್ಯಾಗಾರಕ್ಕೆ ಚಾಲನೆ ನೀಡಿ ತಮ್ಮ ಅದ್ಯಕ್ಷೀಯ ಭಾಷಣದಲ್ಲಿ ತಮ್ಮ ಅಭಿಮತ ವ್ಯಕ್ತಪಡಿಸಿದರು.
ವಿಭಾಗದ ಹಿರಿಯ ವಿದ್ಯಾರ್ಥಿಗಳು ಆರ್ಡಿನೋ ತರಬೇತಿಯನ್ನು ಹೊಂದಿ ಪರಿಣಿತಿಯನ್ನು ಪಡೆದುಕೊಂಡು ಅದನ್ನು ತಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಕೊಡುವ ನಿಟ್ಟಿನಲ್ಲಿ ಸುಮಾರು ಮೂರು ತಿಂಗಳುಗಳ ಕಾಲ ವಿಭಾಗದ ಉಪಪ್ರಾಧ್ಯಾಪಕರಾದ ಪದ್ಮಪ್ರೀಯಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ವಿವಿಧ ರೀತಿಯ ಪ್ರೋಜೆಕ್ಟಗಳನ್ನು ಮಾಡಿ ನೂತನ ರೀತಿಯ ಕಾರ್ಯಾಗಾರಕ್ಕೆ ಅಣಿಯಾಗಿದ್ದಾರೆ ಅವರ ಈ ಶ್ರಮಕ್ಕೆ ಫಲದೊರಕಲಿ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಟೆಕ್ಯೂಪ್ ಸಂಚಾಲಕರಾದ ಪ್ರೊ. ಶರಣ ಪಡಶೆಟ್ಟಿ ವಿದ್ಯಾರ್ಥಿಗಳ ಶ್ರಮಕ್ಕೆ ಶ್ಲಾಘನೆ ಮಾಡಿದರು.
ವಿಭಾಗದ ಮುಖ್ಯಸ್ಥರಾದ ಡಾ. ರಾಜು ಯಾನಮಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳಿಗೆ ಬೇಕಾಗುವ ಸಕಲ ತಾಂತ್ರಿಕ ಸೌಕರ್ಯ ಒದಗಿಲಾಗಿದ್ದು ವಿದ್ಯಾರ್ಥಿಗಳು ಇದರ ಪೂರ್ಣ ಸದುಪಯೋಗ ಪಡೆದುಕೊಂಡು ಪರಿಣಿತಿಯನ್ನು ಪಡೆದುಕೊಂಡು ಇಂದು ತಾವೇ ಸಂಪನ್ಮೂಲ ವ್ಯಕ್ತಗಳಾಗಿ ಕಿರಿಯ ವಿದ್ಯಾರ್ಥಿಗಳಿಗೆ ಕಾರ್ಯಗಾರವನ್ನು ನಡೆಯಿಸಿಕೊಡುತ್ತಿದ್ದಾರೆ, ಇವರ ಈ ಮನೋಬಲ, ತಾಂತ್ರಿಕ ಸಾಮಥ್ಯ ಇತರರಿಗೆ ಮಾದರಿಯಾಗಬೇಕೆಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಐದು ದಿನಗಳ ಈ ಕಾರ್ಯಾಗಾರದಲ್ಲಿ ಮೊದಲ ಎರಡು ದಿನಗಳು ರೋಬೋಟಿಕ್ಸ್‌ಗಾಗಿ ಮೀಸಲಿಡಲಾಗಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ವಿಭಾದ ಪ್ರೊ. ಶ್ರೀಧರ ಕೆ. ಮತ್ತು ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರೊ. ಶರಣಕುಮಾರ ಹುಲಿ ತಮ್ಮ ಕಾರ್ಯವನ್ನು ನಿರ್ವಹಿಸಲಿದ್ದಾರೆ.
ಮುಂದಿನ ಮೂರು ದಿನಗಳು ಆರ್ಡಿನೋ ಕಾರ್ಯಾಗಾರಕ್ಕೆ ಮೀಸಿಲಾಗಿದ್ದು ಇದರಲ್ಲಿ ಎರಡು ದಿನಗಳು ’ಬೂಟ್ ಕ್ಯಾಂಪ್ ನಡೆಯಲಿದ್ದು ಅದರಲ್ಲಿ ಸತತವಾಗಿ ಕಿರಿಯ ವಿದ್ಯಾರ್ಥಿಗಳಿಗೆ ಪರಿಣಿತಿಯನ್ನು ಕೊಡಲಾಗುವುದು. ಕೊನೆಯ ದಿನದಂದು ವಿದ್ಯಾರ್ಥಿಗಳಿಗೆ ಹೆಕಾಥಾನ ಸ್ಪರ್ಧೇಯನ್ನು ಎರ್ಪಡಿಸಿ ಅವರ ತಾಂತ್ರಿಕ ಜ್ಞಾನವನ್ನು ಅಳಿಯಲಾಗುವುದು ಎಂದು ಈ ಕಾರ್ಯಾಗಾರದ ಸಂಯೋಜಕಾರದ ಡಾ. ರಾಜು ಯಾನಮಶೆಟ್ಟಿ ತಿಳಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ. ರಾಜು ಯಾನಮಶೆಟ್ಟಿ ಈ ಕಾರ್ಯಾಗಾರದ ಸಂಯೋಜಕರಾಗಿದ್ದು, ಪ್ರೊ. ಶ್ರೀಧರ ಕೆ. ಮತ್ತು ಪ್ರೊ. ಪದ್ಮಪ್ರೀಯಾ ಪಾಟೀಲ ಇವರು ಸಂಚಾಲಕರಾಗಿ ಕಾರ್ಯನಿರ್ವಹಿಸುವರು. ವಿಭಾಗದ ಪ್ರಾಧ್ಯಾಪಕರು, ಉಪ ಪ್ರಾಧ್ಯಾಪಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…