ಬಿಸಿ ಬಿಸಿ ಸುದ್ದಿ

ವಿಟಿಯುನಲ್ಲಿ ಬೌದ್ಧಿಕ ಆಸ್ತಿಯ ಹಕ್ಕು ಕೇಂದ್ರ ಉದ್ಘಾಟನೆ

  • ಶಿಕ್ಷಣದ ಜತೆಗೆ ಅರೋಗ್ಯ, ಕೃಷಿ, ಪರಿಸರ-ಉದ್ಯೋಗಕ್ಕೂ ಆದ್ಯತೆ: ಡಾ. ಅಜಯಸಿಂಗ್

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ (ಕೆಕೆಆರ್‌ಡಿಬಿ) ಮಂಡಳಿಯಿಂದ ಪ್ರಸಕ್ತ ೨೦೨೩-೨೪ ನ್ನು ಶಿಕ್ಷಣದ ವರ್ಷ ಎಂದು ಘೋಷಿಸಿದ್ದು, ತಮ್ಮ ಅವಧಿಯಲ್ಲಿ ಕಕ ಭಾಗದ ಸರ್ವಾಂಗೀಣ ಅಭಿವೃದ್ದಿ ನಿಟ್ಟಿನಲ್ಲಿ ಆರೋಗ್ಯ, ಶಿಕ್ಷಣ, ಕೈಷಿ, ಪರಿಸರ ಮತ್ತು ಉದ್ಯೋಗಕ್ಕೆ ಆದ್ಯತೆ ಕೊಡುವುದಾಗಿ ಮಂಡಳಿ ಅಧ್ಯಕ್ಷರಾದ ಡಾ. ಅಜಯಸಿಂಗ್ ತಿಳಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇಲ್ಲಿನ ಪ್ರಾದೇಶಿಕ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ (ಕೆಎಸ್‌ಸಿಎಸ್ಟಿ) ಸಹಯೋಗದಲ್ಲಿ ಆರಂಭಿಸಲಾದ ಬೌದ್ಧಿಕ ಆಸ್ತಿ ಹಕ್ಕು ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಾವು ಅಧಿಕಾರ ವಹಿಸಿಕೊಂಡ ಎರಡು ತಿಂಗಳಲ್ಲಿ ಶೇ. ೮೭ರಷ್ಟು ಅನುದಾನ ಕಕ ಭಾಗದ ಎಲ್ಲ ಜಿಲ್ಲೆಗಳಿಗೆ ಸಮರ್ಪಕವಾಗಿ ಬಿಡುಗಡೆ ಮಾಡಲಾಗಿದೆ ಎಂದರು.

ವಿಟಿಯುಗೆ ಬಂದು ನೋಡಲಿ: ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕಲಬುರಗಿಯ ಪ್ರಾದೇಶಿಕ ಕೇಂದ್ರ ಅತ್ಯುತ್ತಮವಗಿದ್ದು, ಕಕ ಭಾಗದ ಎಲ್ಲ ಶಾಸಕರು ಬಂದು ನೋಡಿ ತಮ್ಮ ಅನುದಾನ ನೀಡುವಂತಾಗಬೇಕು ಎಂದ ಡಾ. ಅಜಯಂಗ್, ವಿಟಿಯುನ ಕಲಬುರಗಿ ಪ್ರಾದೇಶಿಕ ಕೇಂದ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಮುಖವಾಗಿ ಸಂಶೋಧನೆ ಮತ್ತು ಮೂಲಸೌಕರ್ಯಗಳಿಗೆ ಕೆಕೆಆರ್‌ಡಿಬಿಯಿಂದ ಸೂಕ್ತ ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಕಾರ್ಯನಿರ್ವಾಹಕ ಕಾರ್ಯದರ್ಶಿ ಯು.ಟಿ. ವಿಜಂiÀi ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಈ ಭಾಗದ ನಾವಿನ್ಯತೆ ಮತ್ತು ಅವಿಷ್ಕಾರ ಗಳನ್ನು ಗುರುತಿಸಿ ಅದನ್ನು ರಕ್ಷಿಸಲು ಸಹಾಯ ಮಾಡುವುದಾಗಿ ತಿಳಿಸಿದರಲ್ಲದೇ ಈ ಭಾಗದ ಅನೇಕ ಸ್ಥಳೀಯ ಬೆಳೆಗಳು ಮತು ್ತ ಇನ್ನಿತರ ವಸ್ತುಗಳಿಗೆ ಜಿ ಟ್ಯಾಗ್ ಪಡೆಯಲು ಪ್ರಯತ್ನಿಸುವುದಾಗಿ ಹೇಳಿದರು.

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ಅತಿ ಕಡಿಮೆ ಸಮಯದಲ್ಲಿ ವಿಟಿಯು ಸ್ನಾತಕೋತ್ತರ ಕೇಂದ್ರ ಮತ್ತು ಪ್ರಾದೇಶಿಕ ಕೇಂದ್ರ ತುಂಬಾ ಸಾಧನೆ ಮಾಡಿದೆ. ಇದು ಹೀಗೆ ಮುಂದುವರೆಯಲಿ ಎಂದು ಹೇಳಿದರು.

ವಿಟಿಯುನ ಪ್ರಾದೇಶಿಕ ನಿರ್ದೇಶಕರಾದ ಡಾ. ಬಸವರಾಜ ಗಾದಗಿ ಮಾತನಾಡಿ, ವಿಟಿಯು ಇರುವ ಸೌಲಭ್ಯಗಳು ಹಾಗೂ ಅನುದಾನದಲ್ಲಿ ಹೆಚ್ಚಿನ ಸಾಧನೆ ಮಾಡಲಾಗಿದೆ. ಈಗ ಪ್ರಾರಂಭವಾಗಿರುವ ಕೇಂದ್ರದ ಈ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಪೂರಕವಾಗಲಿದೆ. ಒಟ್ಟಾರೆ ರಾಜ್ಯದ ೨೨೫ ಇಂಜನೀಯರಿಂಗ್ ಕಾಲೇಜುಗಳಲ್ಲಿ ತಮ್ಮ ಪ್ರಾದೇಶಿಕ ಕೇಂದ್ರ ೧೦ರೊಳಗೆ ಸಾಧನೆ ಮಾಡಿದೆ. ಪ್ರಮುಖವಾಗಿ ರ‍್ಯಾಂಕ್‌ಗಳಲ್ಲಿ ಅಗ್ರಗಣ್ಯ ಸಾಧನೆ ತಮ್ಮ ಕೇಂದ್ರಕ್ಕಿದೆ ಎಂದು ವಿವರಣೆ ನೀಡಿದರು.

ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಗುಲ್ಬರ್ಗ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ, ಸರ್. ಎಂ. ವಿಶ್ವೇಶ್ವರಯ್ಯ ವಿಜ್ಞಾನಿ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಎಸ್. ಜೋಗದ, ಈಗಾಗಲೇ ಕೆಎಸ್‌ಸಿಎಸ್ಟಿಯಿಂದ ಶರಣಬಸವ ವಿವಿ ಹಾಗೂ ಕೃಷಿ ವಿವಿ ರಾಯಚೂರಲ್ಲಿ ಬೌದ್ಧಿಕ ಆಸ್ತಿ ಹಕ್ಕು ಕೇಂದ್ರ ಪ್ರಾರಂಭಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿತಾವಿಯ ಬೋಧಕ ಮತು ್ತ ಬೋಧಕೇತರ ಸಿಬ್ಬಂದಿ ಮತ್ತು ವಿಧ್ಯಾರ್ಥಿಗಳು ಹಾಗೂ ವಿವಿಧ ತಾಂತ್ರಿಕ ವಿದ್ಯಾಲಯಗಳ ಪ್ರಾಂಶುಪಾಲರು ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಚಾಲಕರಾದ ಡಾ. ಶುಭಾಂಗಿ. ಡಿ.ಸಿ ಮತು ್ತ ಪ್ರೋ. ಅಂಬ್ರೇಶ ಭದ್ರಶೆಟ್ಟಿ ಹಾಗೂ ಡಾ. ಬಿ. ಶಂಭುಲಿಂಗಪ್ಪ ನಿರೂಪಿಸಿದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

8 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

8 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

8 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

8 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

8 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

8 hours ago