ಬಿಸಿ ಬಿಸಿ ಸುದ್ದಿ

ಮೋದಿ ಮನ್ ಕೀ ಬಾತ್ ವಿರೋಧಿಸಿ ರೇಡಿಯೋ ಒಡೆದು ಪ್ರತಿಭಟನೆ

ರಾಯಚೂರು: ಕಳೆದ ಹತ್ತು ವರ್ಷದಿಂದ ಮೋದಿ ಮನ್ ಕೀ ಬಾತ್ ಕೇಳಿ ಮನೆ ಹಾಳಾಯ್ತು ದೇಶ ಹಾಳಾಯ್ತು ಮೋದಿ ಬೇಡ ಮೋದಿ ಸುಳ್ಳುಗಳು ಬೇಡ ಎಂಬ ಧ್ಯೆಯ ವಾಕ್ಯದಡಿ ರೇಡಿಯೋ ಪ್ರಸಾರ ಭಾರತಿ ವಿರೋಧಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ ಜಿಲ್ಲಾ ಘಟಕದ ವತಿಯಿಂದ ಕೇಂದ್ರ ಸರ್ಕಾರ ಬಹಿಷ್ಕಾರ ಚಳುವಳಿ ನಡೆಯಿತು.

ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಪದಾಧಿಕಾರಿಗಳು ರೇಡಿಯೋ ಒಡೆಯುವ ಮೂಲಕ ಪ್ರಸಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಹಾಗೂ‌ ಕೇಂದ್ರ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ಮೋದಿ ಸರ್ಕಾರ ಕಳೆದ 9 ವರ್ಷಗಳಿಂದ ಮನ್ ಕಿ ಬಾತ್ ಹೇಳ್ತಿದೆ ಜನರ ಮಾತು ಕೇಳುತ್ತಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ ಮಾಡದೇ ದಿನಬಳಕೆಯ ವಸ್ತುಗಳ ಬೆಲೆ ಕಡಿಮೆ ಮಾಡದೇ ಜನ ವಿರೋಧಿ‌ನೀತಿ ಅನುಸರಿಸುತ್ತಿದೆ. ದೇಶದ ನಾಗರಿಕರ ಸಮಸ್ಯೆ ಆಲಿಸದೇ ಅಂತರರಾಷ್ಟ್ರೀಯ ಮಟ್ಟದ ವಿಷಯದ ಬಗ್ಗೆ ಕಣ್ಣೀರು ಸುರಿಸುತ್ತಿದೆ. ದೇಶದ ನಾಗರಿಕರ ಜೀವಕ್ಕಿಂತ ಪದ ದೇಶದ ಚಿಂತೆ ಪ್ರಧಾನಿ ಮೋದಿಗೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನಾನಿರತ ಸಿಪಿಐಎಲ್‌ರೆಡ್ ಸ್ಟಾರ್ ರಾಜ್ಯ ಸಮಿತಿಯ ಸದಸ್ಯ ಜಿ.ಅಮರೇಶ ಮಾತನಾಡಿ, ಪ್ರಧಾನಿ ಮೋದಿ ಕೇಂದ್ರ‌ಸರ್ಕಾರ ದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ 150 ಕೋಟಿ ಬದುಕು ದುಸ್ತರವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡದೇ ಕೇವಲ ಮನ್ ಕಿ‌ಬಾತ್ ಹೇಳುತ್ತಿದೆ ನಮಗೆ ಮನ್ ಕಿ‌ಬಾತ್ ಬೇಕಾಗಿಲ್ಲ. ಕಾಮ್ ಕಿ ಬಾತ್( ಕೆಲಸದ ಮಾತು) ಬೇಕು. ಯುವಕರಿಗೆ ಉದ್ಯೋಗ ಬೇಕು.

15 ಲಕ್ಷ ಹಾಕುತ್ತೆನೆಂದು ಹೇಳಿ ಒಂದು‌ನಯಾ ಪೈಸಾನೂ ಹಾಕಿಲ್ಲ. ಕೇವಲ‌ಸುಳ್ಳುನ ಭರವಸೆ ನೀಡುತ್ತಿದೆ. ಆರ್ ಎಸ್ ಎಸ್ ಅಣತಿಯಂತೆ ಮೋದಿ ಸರ್ಕಾರ ನಡೆಯುತ್ತಿದೆ. ದೇಶದ ಅಲ್ಪಸಂಖ್ಯಾತರ, ದಲಿತರ ರಕ್ಷಣೆ ಮಾಡುತ್ತಿಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಸರ್ಕಾರ ವನ್ನು ಸೋಲಿಸಲು ಎಲ್ಲಾ ಪ್ರಗತಿಪರ ಸಂಘಟನೆಗಳು, ಜಾತ್ಯಾತೀತ, ಅಲ್ಪಸಂಖ್ಯಾತರ,ದಲಿತರ ಧ್ಯೆಯ ಹೊಂದಿರುವ ಎಲ್ಲಾ ರಾಜಕೀಯ ಪಕ್ಷಗಳು‌ ಒಂದಾಗಬೇಕು ಎಂದು ಮಾನವಿ ಮಾಡಿದರು.

ಪ್ರತಿಭಟನೆಯಲ್ಲಿ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಆರ್ ಹುಚ್ಚ ರೆಡ್ಡಿ, ಪಕ್ಷದ‌ ಪದಾಧಿಕಾರಿಗಳಾದ ಅಜೀಜ್ ಜಾಗೀರದಾರ್ , ಮಲ್ಲಯ್ಯ ಕಟ್ಟಿಮನಿ,‌ಆದೇಶ‌ ನಗನೂರು, ಜಿ ಅಡವಿರಾವ್, ವೆಂಕಟೇಶ ಚಿಲ್ಕರಾಗಿ, ನಿರಂಜನ ಕುಮಾರ, ನಿಸರ್ಗ, ಹನೀಫ್ ಅಬಕಾರಿ, ಲಕ್ಷ್ಮಣ,ನಾರಾಯಣ ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

20 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago