ರಾಯಚೂರು: ಕಳೆದ ಹತ್ತು ವರ್ಷದಿಂದ ಮೋದಿ ಮನ್ ಕೀ ಬಾತ್ ಕೇಳಿ ಮನೆ ಹಾಳಾಯ್ತು ದೇಶ ಹಾಳಾಯ್ತು ಮೋದಿ ಬೇಡ ಮೋದಿ ಸುಳ್ಳುಗಳು ಬೇಡ ಎಂಬ ಧ್ಯೆಯ ವಾಕ್ಯದಡಿ ರೇಡಿಯೋ ಪ್ರಸಾರ ಭಾರತಿ ವಿರೋಧಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ ಜಿಲ್ಲಾ ಘಟಕದ ವತಿಯಿಂದ ಕೇಂದ್ರ ಸರ್ಕಾರ ಬಹಿಷ್ಕಾರ ಚಳುವಳಿ ನಡೆಯಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಪದಾಧಿಕಾರಿಗಳು ರೇಡಿಯೋ ಒಡೆಯುವ ಮೂಲಕ ಪ್ರಸಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ ಮೋದಿ ಸರ್ಕಾರ ಕಳೆದ 9 ವರ್ಷಗಳಿಂದ ಮನ್ ಕಿ ಬಾತ್ ಹೇಳ್ತಿದೆ ಜನರ ಮಾತು ಕೇಳುತ್ತಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ ಮಾಡದೇ ದಿನಬಳಕೆಯ ವಸ್ತುಗಳ ಬೆಲೆ ಕಡಿಮೆ ಮಾಡದೇ ಜನ ವಿರೋಧಿನೀತಿ ಅನುಸರಿಸುತ್ತಿದೆ. ದೇಶದ ನಾಗರಿಕರ ಸಮಸ್ಯೆ ಆಲಿಸದೇ ಅಂತರರಾಷ್ಟ್ರೀಯ ಮಟ್ಟದ ವಿಷಯದ ಬಗ್ಗೆ ಕಣ್ಣೀರು ಸುರಿಸುತ್ತಿದೆ. ದೇಶದ ನಾಗರಿಕರ ಜೀವಕ್ಕಿಂತ ಪದ ದೇಶದ ಚಿಂತೆ ಪ್ರಧಾನಿ ಮೋದಿಗೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನಾನಿರತ ಸಿಪಿಐಎಲ್‌ರೆಡ್ ಸ್ಟಾರ್ ರಾಜ್ಯ ಸಮಿತಿಯ ಸದಸ್ಯ ಜಿ.ಅಮರೇಶ ಮಾತನಾಡಿ, ಪ್ರಧಾನಿ ಮೋದಿ ಕೇಂದ್ರಸರ್ಕಾರ ದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ 150 ಕೋಟಿ ಬದುಕು ದುಸ್ತರವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡದೇ ಕೇವಲ ಮನ್ ಕಿಬಾತ್ ಹೇಳುತ್ತಿದೆ ನಮಗೆ ಮನ್ ಕಿಬಾತ್ ಬೇಕಾಗಿಲ್ಲ. ಕಾಮ್ ಕಿ ಬಾತ್( ಕೆಲಸದ ಮಾತು) ಬೇಕು. ಯುವಕರಿಗೆ ಉದ್ಯೋಗ ಬೇಕು.
15 ಲಕ್ಷ ಹಾಕುತ್ತೆನೆಂದು ಹೇಳಿ ಒಂದುನಯಾ ಪೈಸಾನೂ ಹಾಕಿಲ್ಲ. ಕೇವಲಸುಳ್ಳುನ ಭರವಸೆ ನೀಡುತ್ತಿದೆ. ಆರ್ ಎಸ್ ಎಸ್ ಅಣತಿಯಂತೆ ಮೋದಿ ಸರ್ಕಾರ ನಡೆಯುತ್ತಿದೆ. ದೇಶದ ಅಲ್ಪಸಂಖ್ಯಾತರ, ದಲಿತರ ರಕ್ಷಣೆ ಮಾಡುತ್ತಿಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಸರ್ಕಾರ ವನ್ನು ಸೋಲಿಸಲು ಎಲ್ಲಾ ಪ್ರಗತಿಪರ ಸಂಘಟನೆಗಳು, ಜಾತ್ಯಾತೀತ, ಅಲ್ಪಸಂಖ್ಯಾತರ,ದಲಿತರ ಧ್ಯೆಯ ಹೊಂದಿರುವ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕು ಎಂದು ಮಾನವಿ ಮಾಡಿದರು.
ಪ್ರತಿಭಟನೆಯಲ್ಲಿ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಆರ್ ಹುಚ್ಚ ರೆಡ್ಡಿ, ಪಕ್ಷದ ಪದಾಧಿಕಾರಿಗಳಾದ ಅಜೀಜ್ ಜಾಗೀರದಾರ್ , ಮಲ್ಲಯ್ಯ ಕಟ್ಟಿಮನಿ,ಆದೇಶ ನಗನೂರು, ಜಿ ಅಡವಿರಾವ್, ವೆಂಕಟೇಶ ಚಿಲ್ಕರಾಗಿ, ನಿರಂಜನ ಕುಮಾರ, ನಿಸರ್ಗ, ಹನೀಫ್ ಅಬಕಾರಿ, ಲಕ್ಷ್ಮಣ,ನಾರಾಯಣ ಇದ್ದರು.