ಶಹಾಬಾದ: ಅದ್ದೂರಿಯಿಂದ ಜರುಗಿದ ಬನ್ನಿ ಮುರಿಯುವ ಕಾರ್ಯಕ್ರಮ

ಶಹಾಬಾದ: ನಗರದಲ್ಲಿ ವಿಜಯ ದಶಮಿ ಹಬ್ಬವನ್ನು ವಿಶ್ವಹಿಂದು ಪರಿಷತ್ ವತಿಯಿಂದ ಮಂಗಳವಾರದಂದು ಬನ್ನಿ ಮುರಿಯುವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು.

ಸಾಯಂಕಾಲ ಜಗದಂಬಾ ಮಂದಿರದಿಂದ ಶರಣಬಸವೇಶ್ವರ ದೇಸ್ಥಾನದವರೆಗೆ ಎಲ್ಲಾ ಕಾರ್ಯಕರ್ತರು ಹೋಗಿ ಬನ್ನಿಯನ್ನು ಮುರಿದರು.ನಂತರ ನಾಡದೇವಿ ಭಾವಚಿತ್ರದ ಮೆವಣಿಗೆಗೆ ಚಾಲನೆ ನೀಡಿ ನೆಹರು ವೃತ್ತ, ರೇಲ್ವೆ ನಿಲ್ದಾಣ, ಮಜ್ಜಿದ್ ಚೌಕ್, ತ್ರೀಶೂಲ ಚೌಕ್,ಶ್ರೀರಾಮ ವೃತ್ತ, ಶಾಸ್ತ್ರಿ ವೃತ್ತ , ಚೌಕ್, ಸುಭಾಷ ಮೂಲಕ ಭಾರತ್ ಚೌಕನ ಸಮಾವೇಶ ಸ್ಥಳಕ್ಕೆ ಬಂದು ತಲುಪಿತು.

ನಗರದ ಮುಖ್ಯ ರಸ್ತೆಗಳಲ್ಲಿ ಯುವಕರ ಕುಣಿತ ಮೆರವಣಿಗೆಗೆ ರಂಗು ತಂದು ಕೊಟ್ಟಿತು. ಸಾವಿರಾರು ಸಂಖ್ಯೆಯಲ್ಲಿ ಹಿಂದು ಸಮಾಜದ ಬಾಂಧವರು, ಸಂಘಟನೆಗಳ ಮುಖಂಡರು, ಯುವಜನರು, ಮಕ್ಕಳು ಮೆರವಣಿಗೆಗೆ ಕಳೆ ತಂದರು. ನಾಡದೇವಿಯ ಬೃಹತ್ ಮೆರವಣಿಗೆಯಲ್ಲಿ ಖಡ್ಗಧಾರಿ ಯುವಕರು ಗಮನ ಸೆಳೆದರು. ಧರ್ಮಾಭಿಮಾನ, ದೇಶಪ್ರೇಮ ಸಾರುವಂತಹ ಹಾಡುಗಳಿಗೆ ಕುಣಿಯುತ್ತ, ಬಣ್ಣವನ್ನು ಎರಚುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದವರು ಹೆಜ್ಜೆ ಹಾಕುತ್ತಾ, ಜಯ ಘೋಷಣೆಗಳನ್ನು ಮೊಳಗಿಸುತ್ತಾ ಮುಂದೆ ಹೆಜ್ಜೆ ಹಾಕುತ್ತಿದ್ದರು.

ನಗರದ ಎಲ್ಲಾ ರಸ್ತೆಗಳಲ್ಲಿ ಧ್ವಜಗಳಿಂದ ಶೃಂಗರಿಸಲಾಗಿತ್ತು. ನಂತರ ಮಾತನಾಡಿದ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಶಾಂತಿ, ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು. ಮೆರವಣಿಗೆಯಲ್ಲಿ ಎಲ್ಲಿಯೂ ಯಾರಿಂದಲೂ ಅಪಸ್ವರ ಬಾರದಂತೆ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದಲ್ಲದೇ,ದಸರಾ ಮಹೋತ್ಸವ ನಾಡಿನ ಜನತೆಗೆ ಸುಖ,ಶಾಂತಿ ಮತ್ತು ಸಮೃದ್ಧಿ ತರಲಿ ಎಂದು ನುಡಿದರು.

ಗಣ್ಯರಾದ ನರೇಂದ್ರ ವರ್ಮಾ, ವಿಹಿಂಪ ಮಾಜಿ ಅಧ್ಯಕ್ಷ ಬಸವರಾಜ ಸಾತ್ಯಾಳ, ಗೌರವಾಧ್ಯಕ್ಷ ಚಂದ್ರಕಾಂತ ಗೊಬ್ಬೂರಕರ್, ಭೀಮರಾವ ಸಾಳುಂಕೆ, ಸುಭಾಷ ಜಾಪೂರ,ಶರಣಬಸಪ್ಪ ಕೋಬಾಳ, ಶಿವಾನಂದ ಪಾಟೀಲ, ಶರಣು ವಸ್ತ್ರದ್,ವಿರೇಶ ಬಂದೆಳ್ಳಿ,ಬಾನುದಾಸ ತುರೆ, ರಾಮು ಕುಸಾಳೆ, ನಿಂಗಣ್ಣ ಹುಳಗೋಳಕರ್, ಸೂರ್ಯಕಾಂತ ವಾರದ, ಯಲ್ಲಪ್ಪ ದಂಡಗುಲಕರ್,ಭೀಮಯ್ಯ ಗುತ್ತೆದಾರ,ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಬಾಪೂಜಿ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ವಿಶೇಷ ಗಾಂಧಿಜಿ ಶಾಸ್ತ್ರೀಜಿ ಜಯಂತಿ ಆಚರಣೆ

ಸುರಪುರ: ಬಾಪೂಜಿ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಿಂದ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ವಿಶೇಷವಾಗಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್…

44 mins ago

ಜನಪದ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ. ಶೋಭಾದೇವಿ ಚೆಕ್ಕಿ ಆಯ್ಕೆ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನವೆಂಬರ್ ಮೊದಲ ವಾರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ…

47 mins ago

ರೈತರಿಗೆ ಪಲ್ಸ್ ಮ್ಯಾಜಿಕ್ ವಿತರಣೆ

ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿಯಲ್ಲಿ ಪಿಎಮ್ ಕಿಸಾನ್ ಸಮ್ಮಾನ್ ನಿಧಿ 18ನೇ ಕಂತು ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರದ…

4 hours ago

ಗುಡ್ಡಾಪುರ ದಾನಮ್ಮ ದೇವಿಯ ತೊಟ್ಟಿಲ

ಕಲಬುರಗಿ: ಶಿವಯೋಗ ಸಾಧನೆ, ದಾಸೋಹ, ಕಾಯಕ ನಿಷ್ಠೆ, ಸತ್ಯ- ಧರ್ಮ-ನ್ಯಾಯ ಮೊದಲಾದ ಅಷ್ಟಗುಣಗಳನ್ನು ಅಳವಡಿಸಿಕೊಂಡು ಬದುಕಿದ ಶರಣೆ ಗುಡ್ಡಾಪೂರ ದಾನಮ್ಮ. 12…

4 hours ago

ಅ.8 ರಂದು ದಸರಾ ಕಾವ್ಯ ಸಂಭ್ರಮ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅ.8 ರಂದು ಇಳಿಹೊತ್ತು 4.15 ಕ್ಕೆ ನಗರದ ಕನ್ನಡ ಭವನದ ಸಾಹಿತ್ಯ…

4 hours ago

ಕೃಷಿ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಲಬುರಗಿ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ 16ನೇ ಸಂಸ್ಥಾಪನಾ ದಿನಾಚರಣೆಯನ್ನು 22ನೇ ನವೆಂಬರ್ 2024 ರಂದು ರಾಯಚೂರು ಮುಖ್ಯ ಆವರಣದಲ್ಲಿ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420