ಗುಡ್ಡಾಪುರ ದಾನಮ್ಮ ದೇವಿಯ ತೊಟ್ಟಿಲ

ಕಲಬುರಗಿ: ಶಿವಯೋಗ ಸಾಧನೆ, ದಾಸೋಹ, ಕಾಯಕ ನಿಷ್ಠೆ, ಸತ್ಯ- ಧರ್ಮ-ನ್ಯಾಯ ಮೊದಲಾದ ಅಷ್ಟಗುಣಗಳನ್ನು ಅಳವಡಿಸಿಕೊಂಡು ಬದುಕಿದ ಶರಣೆ ಗುಡ್ಡಾಪೂರ ದಾನಮ್ಮ. 12 ನೇ ಶತಮಾನದಲ್ಲಿ ಧರ್ಮಜಾಗೃತಿಗಾಗಿ ದೇಶಸಂಚಾರ ಮಾಡುತ್ತ ಲೋಕಕಲ್ಯಾಣಕ್ಕಾಗಿ ಪಾರಮಾರ್ಥದ ಹಾದಿ ನಡೆದವಳು ಗುಡ್ಡಾಪುರ ದಾನಮ್ಮ ಎಂದು ಪುರಾಣ ಕೀರ್ತನ ಕಾರ್ಯರಾದ ಸುಂಟನೂರ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಬಂಡಯ್ಯ ಸ್ವಾಮೀಜಿ ಅವರು ನುಡಿದರು.

ಕಮಲಾಪುರ ತಾಲೂಕಿನ ಓಕುಳಿ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ಜರುಗುತ್ತಿರುವ ಗುಡ್ಡಾಪುರ ದಾನಮ್ಮ ತಾಯಿಯ ಪುರಾಣ ಪ್ರವಚನದಲ್ಲಿ ಕಾರ್ಯಕ್ರಮದಲ್ಲಿ ತೊಟ್ಟಿಲು ಕಾರ್ಯಕ್ರಮದ ಕುರಿತು ದಾನಮ್ಮದೇವಿ ಹುಟ್ಟಿದ್ದು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಎಂಬ ಗ್ರಾಮದಲ್ಲಿ. ಉಮರಾಣಿಯ ಅಕ್ಕಸಾಲಿಗ ಮನೆತನದ ಅನಂತರಾಯ ಮತ್ತು ಶಿರಸಮ್ಮ ದಂಪತಿಗಳಿಗೆ ಬಹಳ ಕಾಲ ಮಕ್ಕಳಾಗಿರಲಿಲ್ಲ.

ಈ ಕುರಿತಾಗಿ ದಂಪತಿಗಳು ವೀರಮಲ್ಲಯ್ಯನ ದೇವಸ್ಥಾನಕ್ಕೆ ಹೋಗಿ ಶೃದ್ಧಾಭಕ್ತಿಗಳಿಂದ ಬೇಡಿಕೊಳ್ಳುವರು. ಅವರ ಕನಸಿನಲ್ಲಿ ಬಂದ ಮಲ್ಲಯ್ಯ “ನಿಮಗೆ ಸಾಕ್ಷಾತ್ ಪಾರ್ವತಿಯಂಥ ಮಗು ಜನಿಸುವುದು. ಅವಳು ಸಾಮಾನ್ಯ ಮಕ್ಕಳಂತೆ ಅಳುವುದಿಲ್ಲ ಹಾಗೂ ಲಿಂಗಧಾರಣೆಯಾಗುವವರೆಗೂ ಹಾಲನ್ನಾಗಲಿ ನೀರನ್ನಾಗಲಿ ಸೇವಿಸುವುದಿಲ್ಲ” ಎಂದು ಹೇಳಿದಂತೆ ಕನಸು ಕಾಣಲು ಮುಂದೆ ಕ್ರಿ.ಶ.1146 ರಲ್ಲಿ ತಮಗೆ ಜನಿಸಿದ ಹೆಣ್ಣುಮಗು ವೀರಮಲ್ಲಯ್ಯನ ಮಾತಿನಂತೆ ನಡೆಯತೊಡಗಿತು. ಆಗ ಆ ಮಗುವಿಗೆ ಲಿಂಗಧಾರಣೆ ಮಾಡಿಸುವರು. ಸಂಗಮೇಶ ಗುರುಗಳಿಂದ “ಲಿಂಗಮ್ಮ”ಎಂದು ಹೆಸರನ್ನು ಇಟ್ಟರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಖ್ಯಾತ ಸಂಗೀತ ಕಲಾವಿದರಾದ ಮಲ್ಲಿಕಾರ್ಜುನ ಸ್ವಾಮಿ ಬೀದರ್ ತಬಲ ವಾದಕರಾದ ಮಲ್ಲಿಕಾರ್ಜುನ್ ವರನಾಳ ಸಂಗೀತ ಸೇವೆ ಸಲ್ಲಿಸಿದರು, ಓಕುಳಿ ಗ್ರಾಮದ ತಾಯಿ ಬಳಗ ಜೋಗುಳ ಗೀತೆಗಳನ್ನು ಹಾಡಿದರು, ಗ್ರಾಮದ ಅನೇಕ ಸದ್ಭಕ್ತ ಪುರಾಣದೊಳಗ ಭಾಗವಹಿಸಿದ್ದರು ಎಂದು ಸಮಿತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

10 mins ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

18 mins ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

2 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

2 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

3 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

3 hours ago