ಶ್ರೀನಿವಾಸ ಸರಡಗಿ ಮಹಾಲಕ್ಷ್ಮೀ ಶಕ್ತಿ ಪೀಠದಲ್ಲಿ ಅದ್ಧೂರಿ 11ನೇ ದಸರಾ ದರ್ಬಾರ

ಕಲಬುರಗಿ: ತಾಲೂಕಿನ ಶ್ರೀನಿವಾಸ್ ಸರಡಗಿ ಗ್ರಾಮದ ಮಹಾಕ್ಷ್ಮೀ ಶಕ್ತಿ ಪೀಠದ 11ನೇ ದಸರಾ ದರ್ಬಾರದ ಪ್ರಯುಕ್ತ 2ನೇ ಮೈಸೂರು ಮಾದರಿಯಲ್ಲಿ ಜಂಬೂ ಸವಾರಿ ಭವ್ಯ ಮೆರವಣಿಗೆ ಹಾಗೂ ತುಲಾಭಾರ, ಭಾವೈಕ್ಯ ಧರ್ಮಸಭೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಉದ್ಘಾಟಿಸಿದರು.

ಶಕ್ತಿಪೀಠಾಧಿಪತಿಗಳಾದ ಡಾ. ಅಪ್ಪಾರಾವ ದೇವಿ ಮುತ್ಯಾ ಇವರ ಅಪ್ಪಣೆಯ ಮೇರೆಗೆ ಜರುಗಿತು. ವಿಜಯದಶಮಿ ಮಂಗಳವಾರ ಬೆಳಗ್ಗೆ 6 ಗಂಟೆಗೆ ದೇವಿಯ ಮಹಾಭಿಷೇಕ ಮಹಾಅಲಂಕಾರ, ಮಹಾನೈವಿದ್ಯ ಮಧ್ಯಾಹ್ನ 12.30 ಗಂಟೆಗೆ ಜಂಬೂ ಸವಾರಿ ಭವ್ಯ ಮೆರವಣಿಗೆಯನ್ನು ಗ್ರಾಮೀಣ ವಿಭಾಗದ ಡಿ.ವಾಯ್.ಎಸ್.ಪಿ ಉಮೇಶ ಚಿಕ್ಮಠ ಹಾಗೂ ವಿಶ್ವವಿದ್ಯಾಲಯ ಪೆÇಲೀಸ್ ಠಾಣೆಯ ಪೆÇಲೀಸ್ ಸರ್ಕಲ್ ಇನ್ಸಪೆಕ್ಟರ್ ಸುಶೀಲಕುಮಾರ ಉದ್ಘಾಟಿಸಿದರು.

ನಂತರ ಮೈಸೂರು ಮಾದರಿಯಲ್ಲಿ ಗ್ರಾಮದ ಪ್ರಮುಖ ರಾಜ ಬೀದಿಯಿಂದ ಶ್ರೀ ದೇವಿಯ ಶಕ್ತಿಪೀಠದವರೆಗೆ ಆನೆ ಅಂಬಾರಿ ಮೇಲೆ ಜಂಬೂ ಸವಾರಿ ಹಾಗೂ ಈ ನಾಡಿನ ಅನೇಕ ನುರಿತ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.

ಪರೇಡ್ ಕವಾಯತ್ ಮುಖಾಂತರ ಬನ್ನಿ ಮುಡಿಯುವ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಶ್ರಮಿಸಿದ ಗಣ್ಯರಿಗೆ ಸುಕ್ಷೇತ್ರ ಶ್ರೀನಿವಾಸ ಸರಡಗಿ ಶ್ರೀ ಶಕ್ತಿಪೀಠದ ವತಿಯಿಂದ ಪ್ರಶಸ್ತಿ ಪ್ರದಾನದೊಂದಿಗೆ ಗೌರವಿಸಲಾಯಿತು. ಪೂಜ್ಯರಿಗೆ ತುಲಾಭಾರ ಸೇವೆ ಜರುಗಿತು.

ಶ್ರೀ ಸರಡಗಿ ಅನ್ನಪೂರ್ಣೇಶ್ವರಿ ಬಸವಕಲ್ಯಾಣ ಸಂಸ್ಥಾನ ಮಕ್ಕಳಿಂದ ಹಾಗೂ ಶ್ರೀ ಸರಡಗಿ ಶಕ್ತಿ ಇಂಗ್ಲೀಷ್ ಮಿಡಿಯಮ್ ಸ್ಕೂಲ್ ಕಲಬುರಗಿ ರೂಪಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಮುಗಳನಾಗಾಂವ ಕಟ್ಟಮನಿ ಹಿರೇಮಠದ ಶ್ರೀ ಷ.ಬ್ರ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಇವರು ಸಾನಿಧ್ಯ ವಹಿಸಿದರು.

ಭರತನೂರ ವಿರಕ್ತಮಠದ ಶ್ರೀ ಮ.ನಿ.ಪ್ರ. ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಪೂಜ್ಯ ಶ್ರೀ ಶರಣಯ್ಯ ಸ್ವಾಮಿಗಳು, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಬಿಜೆಪಿ ಮುಖಂಡ ವಿನೋದ ಪಾಟೀಲ, ಮಾಜಿ ವಿ.ಪಕ್ಷದ ನಾಯಕ ಆರ್.ಎಸ್.ಪಾಟೀಲ, ಸುನೀಲ ಅಣ್ಣಾರಾವ ಪಾಟೀಲ, ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಬೆನೂರ, ಸೇರಿದಂತೆ ವಿವಿಧ ರಾಕೀಯ ಮುಖಂಡರು ಆಗಮಿಸಿದರು. ಶಿವಶಂಕರ ಬಿರಾದಾರ ಕೋಟನೂರ ನಿರೂಪಿಸಿದು. ನಂತರ ಮದ್ದು ಸುಡುವ ಕಾರ್ಯಕ್ರಮವನ್ನು ಸೋಲಾಪೂರ ಸದ್ಭಕ್ತರಿಂದ ಜರುಗಿತು. ದೇವಿಯ ಪವಿತ್ರ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಗ್ರಾಮಸ್ಥರು, ಸಕಲ ಸದ್ಭಕ್ತರು ಆಗಮಿಸಿದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

8 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

8 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

8 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

8 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

8 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420