ಬೌದ್ಧ ಭಂತೇಜಿಗಳ ಪಿಂಡಪಾತ್ರೆಯೊಂದಿಗೆ ಭವ್ಯ ಮೆರವಣಿಗೆ

ಸುರಪೂರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ವರ್ಷವಾಸ ಕಾರ್ಯಾಕ್ರಮ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಈ ನಿಮಿತ್ಯ ಮೊದಲಿಗೆ ನಗರದ ಬಸ್ಸ್ ನಿಲ್ದಾಣ ಹತ್ತಿರವಿರುವ ಬೊಧಿಸತ್ವ ಡಾ.ಅಂಬೇಡ್ಕರ್ ವೃತ್ತದಲ್ಲಿ ಮಾಲಾರ್ಪಣೆಮಾಡಿ ಪುಷ್ಫವಂದನೆಯನ್ನು ಸಲ್ಲಿಸಲಾಯಿತು. ನಂತರ ಪೂಜ್ಯ ವರಜ್ಯೋತಿ ಭಂತೇಜಿಯರ ಮಾರ್ಗದರ್ಶನದಲ್ಲಿ ಸುರಪುರ ಇತಿಹಾಸದಲ್ಲಿಯೆ ಒಂದು ಚಾರಿತ್ರಿಕ ಬೌದ್ಧ ಧಮ್ಮ ಸಂಸ್ಖಾರದ ಚಾರಿಕ ಯಾತ್ರೆಯನ್ನು ಕೈಗೊಂಡು ಭಗವಾನ್ ಬುದ್ದನ ತತ್ವದಂತೆ ಪಿಂಡಪಾತ್ರೆಯನ್ನು ಹಿಡಿದುಕೊಂಡು ಡಾ.ಅಂಬೇಡ್ಕರ್ ವೃತ್ತದಿಂದ ಯಾತ್ರೆ ಪ್ರಾರಂಭಿಸಿ ಗಾಂಧಿಜಿ ಸರ್ಕಲ್ ಮಾರ್ಗವಾಗಿ ಬುದ್ದಂ ಶರಣಂ ಘಚ್ಛಾಮಿ, ದಮ್ಮಂ ಶರಣಂ ಘಚ್ಛಾಮಿ, ಸಂಘಂ ಶರಣಂ ಘಚ್ಛಾಮಿ ಎಂದು 8 ಜನ ಬಿಕ್ಕು ಸಂಘದವರು ನಾಡಿನ ಶಾಂತಿಗಾಗಿ ಮತ್ತು ಬುದ್ಧ ಧಮ್ಮವೂ ಜಿಲ್ಲೆಯಲ್ಲಿ ಪಸರಿಸಲೂ ಹೊರಟಿರುವದು ವಿಶಿಷ್ಠವಾಗಿತ್ತು. ಇದಕ್ಕೆ ಬೌದ್ಧ ಉಪಾಸಕರೆಲ್ಲರು ಸಾಧು, ಸಾದೂ, ಸಾದೂ ಎಂದು ನುಡಿಯುತ್ತ ಬಾಬಾಸಾಹೇಬ್ ಅಂಬೇಡ್ಕರ್ ಕಂಡಿರುವ ಬೌದ್ಧ ಭಾರತ ಕನಸು ನನಸು ಮಾಡಲೂ ಬುದ್ದ ಭೀಮ ಮಾರ್ಗದಲ್ಲಿ ಮುನ್ನೆಡದರೆ ಮಾತ್ರ ಸಾದ್ಯವೆಂದು ಸಾರಲಾಯಿತು.

ನಂತರ ವಿಹಾರದಲ್ಲಿ ಬಿಕ್ಕು ನಿವಾಸದಿಂದ ತಪ್ಪಲಿನ ಮಡಿಲಲ್ಲಿರುವ ಬುದ್ದ ವಿಹಾರಕ್ಕೆ ಹೂರಾಶಿಗಳಿಂದ ಹರಡಿದ ದಾರಿಯುದ್ದಕ್ಕು ಬಿಕ್ಕುಗಳನ್ನು ಸ್ವಾಗತಿಸುತ್ತಾ ಮಹಿಳಾ ಉಪಾಸಿಕಾ ರವರು ಮಕ್ಕಳು ಪಂಚಶೀಲ ಮತ್ತು ನೀಲಿ ದ್ವಜದೊಂದಿಗೆ ಕಂಗೊಳಿಸಿದರು, ಬುದ್ಧವಂದನೇ ವಿಶೇಷಪೂಜೆಯನ್ನು ಸಲ್ಲಿಸಿ ಟ್ರಸ್ಟ್ ಆಡಳಿತ ಮಂಡಳಿಯವರು ಅತ್ಯವಶ್ಯಕತೆ ಧಾರಿಯೊಂದನ್ನು ಇವತ್ತು ತುಳಿದರು ಎಂದು ಪ್ರಾಸ್ತವಿಕವಾಗಿ ಬುದ್ಧಘೋಷ್ ದೇವೇಂದ್ರ ಹೆಗ್ಗಡೆ ಯವರು ಮಾತನಾಡಿದರು 89 ದಿನಗಳ ಬೌದ್ಧ ಬಿಕ್ಕುಸಂಘದವರಿಗೆ ಬೋಜನಧಾನ ನೇರವೇರಿಸಿದ 89 ಕುಟುಂಬದವರನ್ನು ಟ್ರಸ್ಟ್ ವತಿಯಿಂದ ಸತ್ಕರಿಸಿ ಧಮ್ಮ ಸೇವಾ ಪತ್ರವನ್ನು ಮತ್ತು ಬೌದ್ಧ ಧಮ್ಮದ ಪುಸ್ತಗಳನ್ನು ಸಾಂಕೇತಿಕವಾಗಿ ನೀಡಿ ಗೌರವಿಸಲಾಯಿತು.

ನಾಗಣ್ಣ ಕಲ್ಲದೆವನಹಳ್ಳಿ, ಭಿಮರಾಯ ಸಿಂದಗೇರಿ, ರಾಹುಲ್ ಹುಲಿಮನಿ, ಆದಪ್ಪ ಹೊಸಮನಿ, ವೆಂಕಟೇಶ್ವರ್ ಸುರಪುರ್, ಮಾಳಪ್ಪ ಕಿರದಳ್ಳಿ, ಮಂಜುಳಾ ಸುರಪುರ್, , ಹಣಮಂತ ಭದ್ರಾವತಿ. ಮಲ್ಲಪ್ಪ ತಳವಾರಗೇರಾ, ಮರೆಪ್ಪ ತೇಲ್ಕರ ,ಜಗಧೀಶ ಶಾಖನವರ, ಗೋಪಾಲ್ ವಜ್ಜಲ್, ರಾಜು ದೊಡ್ಡಮನಿ, ಮಲ್ಲಿಕಾರ್ಜುನ್ ವಾಗಣಗೇರಾ, ಶರಣು ಹಸನಾಪೂರ, ಪರಶುರಾಮ್ ನಾಟೇಕಾರ, ಚಂದಪ್ಪ ಪಂಚಮ್, ವಿಶ್ವನಾಥ ಹೊಸಮನಿ, ನಿಂಗಣ್ಣ ಗೋನಾಲ್ ,ಮಲ್ಲು ಮುಷ್ಠಳ್ಳಿ,ಪ್ರಕಾಶ,ಮಂಜುನಾಥ ಹೊಸಮನಿ,ಇತರರು 500 ಕ್ಕು ಹೆಚ್ಚು ಜನ ಉಪಾಸಕ ಉಪಾಸಕಿಯರು ಭಾಗವಹಿಸಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

8 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

10 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

11 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420