ಬಿಸಿ ಬಿಸಿ ಸುದ್ದಿ

ಶರಣಬಸವರು ಇಂದಿಗೂ ಲೀಲೆಗೈಯುತ್ತಿದ್ದಾರೆ

ಮಹಾದಾಸೋಹಿ ಶರಣಬಸವೇಶ್ವರರು ಇಂದಿಗೂ ಅನೇಕ ಲೀಲೆಗಳನ್ನು ಮಾಡುತ್ತಾ ಎಲ್ಲಾ ಜಾತಿಯವರ ಆರಾಧ್ಯ ದೇವರಾಗಿದ್ದಾರೆ ಎಂದು ಶರಣಬಸವೇಶ್ವರ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಪ್ರೊ. ಜಗದೇವಿ ಗುಳೇದ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

ಶರಣಬಸವರ ಸಾನಿಧ್ಯದಲ್ಲಿ ಮಾದೇವನೆಂಬ ಭಕ್ತನಿದ್ದ. ಶರಣರ ಮಾತುಗಳೇ ಅವನಿಗೆ ವೇದವಾಕ್ಯ. ಅವನನ್ನು ಕೆಲವು ಕಿಡಿಗೇಡಿಗಳು ಆಗಾಗ ಅವಮಾನ ಮಾಡುತ್ತಿದ್ದರು. ಶರಣರಿಗೆ ಇದು ಗೊತ್ತಾಗಿ ಅವರನ್ನು ಕರೆದು ಬುದ್ಧಿ ಹೇಳುತ್ತಾರೆ. ಬುದ್ಧಿ ಹೇಳಿದರೂ ಅವರು ಹಾಗೇ ಮಾಡುತ್ತಾರೆ. ಒಂದು ದಿನ ಅವಮಾನುಸುತ್ತಿದ್ದಾಗ ಅವರ ಕಣ್ಣು ಬಾಯಿ ಎರಡು ಕಳೆದುಕೊಳ್ಳುತ್ತಾರೆ. ಈಗ ಮಾದೇವನಿಗೆ ನೋಡುವಂತಿಲ್ಲ, ಬಾಯಿಂದ ಬೈಯುವಂತಿಲ್ಲ. ಆಗ ಅವರು ಅಳುವದನ್ನು ನೋಡಲಾರದೆ ಮಾದೇವನೆ ಅವರ ಕೈ ಹಿಡಿದು ಶರಣರಲ್ಲಿಗೆ ಕರೆದುಕೊಂಡು ಬರುತ್ತಾನೆ. ಶರಣರು ಅವರಿಗೆ ಬುದ್ಧಿ ಹೇಳಿ ವಿಭೂತಿ ತಂದು ಹಣೆಗೆ ಹಚ್ಚುತ್ತಾರೆ. ತಕ್ಷಣ ಕಣ್ಣು ಬಾಯಿ ಪಡೆದ ಅವರು ಶರಣರ ಪಾದಕ್ಕೆರಗುತ್ತಾರೆ.

ಒಂದು ಸಲ ಜೈನಯತಿಯೊಬ್ಬ ಶರಣರಲ್ಲಿಗೆ ಬಂದು ಲಿಂಗಿಲ್ಲ, ಭಸ್ಮಿಲ್ಲ ಎಂದು ವಾದ ಮಾಡುತ್ತಾನೆ. ಶರಣರು ಎಷ್ಟು ಬುದ್ಧಿ ಹೇಳಿದರೂ ಕೇಳದ ಆ ಯತಿ ಕಲ್ಲು ಲಿಂಗದಲ್ಲಿ ಹೇಗೆ ದೇವರನ್ನು ಕಾಣಲು ಸಾಧ್ಯ ಎಂದು ಜೈನ ಧರ್ಮದ ಶ್ರೇಷ್ಠತೆ ಹೇಳುತ್ತಾನೆ. ಆಗ ಶರಣರು ಭಕ್ತನೊಬ್ಬ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವಾಗ ಆ ಜೈನ ಮುನಿಯನ್ನು ಆ ಲಿಂಗದೊಳಗೆ ತೋರಿಸುತ್ತಾರೆ. ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಶರಣರಿಗೆ ಸಾಷ್ಟಾಂಗ ಹಾಕಿ ಶರಣಾಗುತ್ತಾನೆ.
ಶ್ರಾವಣ ಮಾಸದಲ್ಲಿ ಮುಸ್ಲಿಂ ಹೆಣ್ಣು ಮಗಳೊಬ್ಬಳು ಒಂದು ತಿಂಗಳ ಪರ್ಯಂತ ಮಹಾಮನೆಗೆ ಬಂದು ಶರಣಬಸವರ ದರ್ಶನ ಮಾಡಿ ಹೋಗುತ್ತಿದ್ದಳು. ಒಂದು ದಿನ ಮಳೆ ಜೋರಾಗಿ ಬಂದು ಆ ಹೆಣ್ಣುಮಗಳು ಬರುವುದು ಅಸಾಧ್ಯವಾದರೂ ಹಾಗೆಯೇ ಹೊರಟಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗತೊಡಗಿದಳು. ಆದರೂ ಭಕ್ತಿಯಿಂದ ’ ಯಪ್ಪಾ ಶರಣಾ’ ಎಂಬ ನಾಮಸ್ಮರಣೆ ಮಾಡುತ್ತಲೇ ಇದ್ದಳು. ಕೆಲವೇ ನಿಮಿಷಗಳಲ್ಲಿ ದೊಡ್ಡಗಿಡ ಆಕೆಗೆ ಅಧಾರವಾಗಿ ಸಿಕ್ಕಿತು. ಯಾರೋ ಆ ಗಿಡವನ್ನು ಹತ್ತಿಸಿಬಿಟ್ಟಂತಾಯಿತು. ಗಿಡದೊಳಗೆ ಕುಳಿತ ಆ ಮಹಿಳೆಯ ಮೇಲೆ ಒಂದು ಮಳೆ ಹನಿ ಬೀಳಲಿಲ್ಲ. ಮೂರು ದಿನ ಅಲ್ಲಿಯೇ ಕುಳಿತರೂ ಹಸಿವೆ ನೀರಡಿಕೆಗಳಿಲ್ಲ. ಮಳೆ ನಿಂತ ಮೂರು ದಿನಕ್ಕೆ ಆ ಹೆಣ್ಣುಮಗಳು ಅದೇ ಭಕ್ತಿಯಿಂದ ಬಂದು ಶರಣರ ದರ್ಶನ ಮಾಡುತ್ತಾಳೆ. ಅಲ್ಲಿ ನಡೆದ ವಿಚಾರವನ್ನು ಎಲ್ಲರಿಗೂ ಹೇಳುತ್ತಾಳೆ. ಅಲ್ಲಾನಿಗಿಂತಲೂ ಶರಣರು ಹೆಚ್ಚಾಗಿದ್ದಾರೆಂದು ಎಲ್ಲರೂ ನಿಂತಲ್ಲಿಯೇ ಕೈ ಮುಗಿಯುತ್ತಾರೆ.

ಯುಗಾದಿ ದಿನದಂದು ಶರಣರು ಸಾವಿರದ ಜಂಗಮರಿಗೆ ದಾಸೋಹ ಮಾಡುವ ನಿಯಮವನ್ನರಿಸಿಕೊಂಡಿದ್ದರು. ಒಂದು ದಿನ ಜಂಗಮ ಶರಣರು ನಡೆಸುತ್ತಿರುವ ದಾಸೋಹದಲ್ಲಿ ಜಗಳ ತೆಗೆಯುತ್ತಾನೆ. ಶರಣರು ಬಂದು ಕೈ ಜೋಡಿಸಿ ಪ್ರಸಾದ ಪಡೆಯಿರಿ ಎಂದು ಹೇಳಿದರೂ ಕೆಲ ಜಂಗಮರು ದಿಕ್ಕರಿಸಿ ಹೋಗುತ್ತಿದ್ದಾಗ ಕುಸಿದು ಬಿಳುತ್ತಾರೆ. ಮುಂದಕ್ಕೆ ಹೋಗಲು ಆಗುತ್ತಿಲ್ಲ. ತಕ್ಷಣವೇ ’ತಪ್ಪಾಯ್ತಪ್ಪಾ ಶರಣರೇ ಕಾಪಾಡಿ’ ಎಂದು ಚೀರಲು ಪ್ರಾರಂಭಿಸುತ್ತಾರೆ. ವಿಭೂತಿ ಒಯ್ದು ಅವರ ಹಣೆಗೆ ಹಚ್ಚಿದಾಗ ಕಾಲುಗಳು ನೆಟ್ಟಗಾಗುತ್ತವೆ. ತಕ್ಷಣವೇ ಶರಣರ ಪಾದವಿಡಿದು ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಶರಣರು ಅವರಿಗೆ ಬುದ್ಧಿ ಹೇಳಿ ಕಳುಹಿಸುತ್ತಾರೆ. ಇಷ್ಟೇ ಅಲ್ಲದೆ ಇನ್ನು ಕೆಲವು ಇತ್ತೀಚಿಗೆ ನಡೆದ ಲೀಲೆಗಳನ್ನು ಸಹ ಪ್ರೊ.ಜಗದೇವಿ ಗುಳೇದ ಹೇಳಿದರು.

ಪ್ರೊ. ಜಗದೇವಿ ಗುಳೇದ, ಸಹ ಪ್ರಾಧ್ಯಾಪಕಿ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago