ಬಿಸಿ ಬಿಸಿ ಸುದ್ದಿ

ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯಗಳು ಒದಗಿಸಲು ಒತ್ತಾಯಿಸಿ SFI ಪ್ರತಿಭಟನೆ

ಕಲಬುರಗಿ: ಗುಲ್ಬರ್ಗಾ ವಿಶ್ವ ವಿದ್ಯಾಲಯದ ಆವರಣದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕರ ಸ್ನಾತಕೋತ್ತರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಹಾಗೂ ಮೇಲ್ವಿಚಾರಕರನ್ನು ವಜಾ ಗೊಳಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ SFI ಸಂಘಟನೆ  ನೇತೃತ್ವದಲ್ಲಿ ವಸತಿ ನಿಲಯದ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಇಂದು ಬೆಳಿಗ್ಗೆ 6. ಗಂಟೆಯಿಂದ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ನಿಲಯದ ಮೇಲ್ವಿಚಾರಕಿ  ಮತ್ತುರಾಬಾಯಿ ಅವರು ಕಳೆದ 6 ತಿಂಗಳಿಂದ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸದೇ ಪ್ರತಿ ದಿನ ವಿದ್ಯಾರ್ಥಿಗಳು ಮೇಲೆಯೇ ಆವಾಜ್ ಹಾಕುತ್ತಾರೆ ‘ಕೊಟ್ಟಿದ್ದು ತಿನ್ನಬೇಕು ಇರಬೇಕು ಎನ್ನುತ್ತಾರೆ. ಊಟದಲ್ಲಿ ಸರಿಯಾಗಿ ತರಕಾರಿ, ಕಾಳು , ಮೊಟ್ಟೆ ಯಾವುದು ರೀತಿಯ ಪೌಷ್ಟಿಕ ಆಹಾರ ಒದಗಿಸುವದಿಲ್ಲ,  ಕೇಳಿದರೆ ಅವರ ಮಗನನ್ನು ಕರೆಸಿ ಬೆದರಿಕೆ ಹಾಕುತ್ತಾರೆ , ನಿಲಯದಲ್ಲಿ ಪುಸ್ತಕಗಳು, ದಿನ ಪತ್ರಿಕೆ ,ಮಾಸ ಪತ್ರಿಕೆ, ಸ್ಟಡಿ ಚೆರ್  ಸ್ನಾನದ ಬಕೆಟಗಳು , ಹಾಸಿಗೆ, ಹೊದಿಕೆ ಯಾವದು ನೀಡಿರುವದಿಲ್ಲ  ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ SFI ಜಿಲ್ಲಾ ಸಂಚಾಲಕ ಸಿದ್ದು ಪಾಳಾ ದುರಿದರು.

ನಿನ್ನೆ ರಾತ್ರಿ ವೇಳೆ ವಸತಿ ನಿಲಯದ ಮೇಲ್ವಿಚಾರಕರಿಗೆ ಮೊಟ್ಟೆ ಕೊಡಬೇಕು ಎಂದು ಕೇಳಿದ್ದಕ್ಕೆ ಮೇಲ್ವಿಚಾರಕರ ಮಗನು ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದು ಅಲ್ಲದೆ ಹಲ್ಲೆ ನಡೆಸಲು ಎತ್ನಿಸಲಾಗುತ್ತಿದೆ. ಆಗಸ್ಟ್ ತಿಂಗಳ ಮೊದಲನೇ ತಾರೀಕು ವಸತಿ ನಿಲಯ ಪ್ರಾರಂಭ ಮಾಡಬೇಕು ಆದರೆ 15 ದಿನಗಳ ತಡಮಾಡಿ ಪ್ರಾರಂಭಿಸಿ 15 ದಿನಊಟದ ಹಣ ಲೂಟಿ ಮಾಡಿದ್ದು ಅದರ ಜೊತೆಗೆ ಡೀಪೋಸಿಟ್ ಹಣ 500 ರೂ ತೆಗೆದುಕೊಂಡು ಕೇವಲ 300 ರೂಪಾಯಿ ರಶೀದಿ ನೀಡಿರುತ್ತಾರೆ ಎಂದು ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಆರೋಪಿಸಿದರು.

ವಸತಿ ನಿಲಯದಲ್ಲಿ ಗ್ರಂಥಾಲಯ ಸ್ಥಾಪಿಸಬೇಕು, ರೂಮಗಳಲ್ಲಿ ಪ್ಲಗ ಹಾಕಿಸಬೇಕು , 2019 ನೇ ಸಾಲಿನ ಮೇನು ಚಾಟ್ ಅಳವಡಿಸಬೇಕು, ವಸತಿ ನಿಲಯದ ಮುಂದೆ ಬೀದಿ ದೀಪಗಳನ್ನು ಅಳವಡಿಸಬೇಕು, ಊಟದ ಗುಣಮಟ್ಟದ ಹೆಚ್ಚಿಸಿ ಪೌಷ್ಟಿಕ ಆಹಾರ ನೀಡಬೇಕು,  ಹಾಸಿಗೆ, ಹೊದಿಕೆ, ಕಾಟು ಒದಗಿಸಬೇಕು, ಶೌಚಾಲಯ ಸ್ವಚ್ಛತೆ ಮಾಡಿಸಬೇಕು,TV ರೀಚಾರ್ಜ್ ಮಾಡಿಸಬೇಕು , ಕ್ರೀಡಾ ಸಾಮಗ್ರಿಗಳನ್ನು ಒದಗಿಸಬೇಕು, ಹೆಚ್ಚುವರಿ ಡೀಪೋಸಿಟ್ ಹಣ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಬೇಕು, ಈ ಕೂಡಲೇ CC ಕ್ಯಾಮೆರಾ ಅಳವಡಿಸಿಬೇಕು ಎಂದು ಮನವಿ ಸಲ್ಲಿಸಲಾಯಿತು.

ಈ ಪ್ರತಿಭಟನೆಯಲ್ಲಿ SFI ಮುಖಂಡರಾದ ಮೈಲಾರಿ ದೊಡ್ಡಮನಿ, ದಿನೇಶ, ಶೇರಿಕರ್, ಮಲ್ಲಿಕಾರ್ಜುನ , ಹುಸೇನಿ ಪಾಳ , ಲಿಂಗರಾಜ, ಸಿದ್ದಾರ್ಥ ,ಬಾಬುರಾವ್,  ಕೈಲಾಸ ಸಿಂಗೆ , ಆಕಾಶ ಕಾಂಬ್ಳೆ , ಕೆ, ಎಂ ಮಹೇಶ ಸೇರಿದಂತೆ ಮುಂತಾದವರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago