ಬಿಸಿ ಬಿಸಿ ಸುದ್ದಿ

ನಂಬಿಕೆ ಇರಲಿ; ಮೂಢ ನಂಬಿಕೆ ದೂರ ಸರಿಸಿ: ಎಸ್.ಪಿ. ಮೇಲಕೇರಿ

ಕಲಬುರಗಿ: ಸುಭದ್ರ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು. ಸತ್ಯದ ಶೋಧನೆಗಾಗಿ ವಿಜ್ಞಾನವನ್ನು ಸಮಾಜಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಗುಲ್ಬರ್ಗ ವಿವಿ ಪ್ರಭಾರ ಕುಲಪತಿ ಎಸ್.ಪಿ. ಮೇಲಕೇರಿ ಅಭಿಪ್ರಾಯಪಟ್ಟರು.
ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಶರಣರಾದ ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪ ಬಾಲಪ್ಪಗೋಳ ಸ್ಮರಣಾರ್ಥ ನಗರದ ಶ್ರೀ ಗುರುನಾಗಲಿಂಗೇಶ್ವರ ರೆಸಿಡೆನ್ಸಿಯಲ್ ಪಿಯು ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮತತ್ವ  ಬಿತ್ತ ಬನ್ನಿ ಸರ್ವೋದಯಕ್ಕಾಗಿ ಮನಬೆಸೆದು ಮಾಡೋದಿದೆ ಮಾನವೀಕರಣ ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.
ಬದುಕಿನಲ್ಲಿ ನಂಬಿಕೆ ಇರಬೇಕು. ಮೂಢನಂಬಿಕೆ ಇರಬಾರದು. ಕಸದಿಂದ ರಸ ಎನ್ನುವಂತೆ ನಮ್ಮಲ್ಲಿರುವ ಅದ್ಭುತ ಶಕ್ತಿಯಿಂದ ಮೂಲನಂಬಿಕೆ ಅರ್ಥಮಾಡಿಕೊಂಡು ಬದುಕಬೇಕು. ಶರಣರು ಸತ್ಯ, ಪ್ರಾಮಾಣಿಕತೆ, ಶುದ್ಧತೆ ಕುರಿತು ಹೇಳಿದ್ದಾರೆ. ಸಮಾಜ ಬದಲಾವಣೆಯಲ್ಲಿ ಯುವಕರು ಮಹತ್ವದ ಪಾತ್ರ ವಹಿಸಬೇಕು ಎಂದು ತಿಳಿಸಿದರು. ಅಸ್ಪೃಶ್ಯತೆ, ಜಾತೀಯತೆ ಇನ್ನೂ ಸಮಾಜದಲ್ಲಿ ಜೀವಂತವಾಗಿದೆ. ಇದು ಮನಸ್ಸಿಗೆ ಅಂಟಿಕೊಂಡ ಜಾಢ್ಯ. ಇದು ಕೂಡ ಮೂಢನಂಬಿಕೆಯೇ ಆಗಿದೆ. ಸೌಜನ್ಯ, ಔದಾರ್ಯದ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು. ಎಲ್ಲರನ್ನೂ ಇವನಾರವ ಅನ್ನದೆ, ಇವ ನಮ್ಮವ ಎಂದು ಅಪ್ಪಿಕೊಂಡಾಗ ಮಾತ್ರ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳು ನಿವಾರಣೆಯಾಗಬಲ್ಲುದು ಎಂದು ತಿಳಿಸಿದರು.
‘ಮೂಢನಂಬಿಕೆ ಮೀರಿ-ಮೂಲ ನಂಬಿಕೆ ತೋರಿ ‘ ವಿಷಯ ಕುರಿತು ಎಚ್ ಕೆ ಇ ಸಂಸ್ಥೆಯ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಡಾ. ಸುಜಾತಾ ಡಿ. ಪಾಟೀಲ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಬದುಕು ತೀರಾ ಯಾಂತ್ರಿಕವಾಗಿದೆ. ಹೀಗಾಗಿ ತನಗರಿವಿಲ್ಲದೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ ಎಂದು ತಿಳಿಸಿದರು. ಎಡಗೈ ಕನಿಷ್ಟ, ಬಲಗೈ ಶ್ರೇಷ್ಠ, ಹುತ್ತಕ್ಕೆ ಹಾಲೆರೆಯುವುದು, ದೇವರಿಗೆಂದೇ ಒಂದು ವಾರ ಫಿಕ್ಸ್ ಮಾಡಿರುವ ನಾವುಗಳು ಧರ್ಮ, ದೇವರುಗಳ ಹುದಲಲ್ಲಿ ಸಿಲುಕಿ ಬದುಕು ನರಕ ಮಾಡಿಕೊಳ್ಳುತ್ತಿದ್ದೇವೆ. ಕಣ್ಣಿಗೆ ಕಾಣದ ದೇವರು, ದೆವ್ವಗಳಿಗೆ ಹೆದರುತ್ತಿದ್ದೇವೆ. ಎಲ್ಲ ದಿನಗಳು ಶುಭ ದಿನಗಳು, ರಾಹು, ಕೇತು ನಮ್ಮನ್ನು ಕಾಡುವುದಿಲ್ಲ ಎಂದು ತಿಳಿಸಿದರು.
ಖ್ಯಾತ ಉದ್ದಿಮೆದಾರ ಚಿದಂಬರರಾವ ಮರಗುತ್ತಿ, ಯುವ ಮುಖಂಡ ಸುರೇಶ ಹಾದಿಮನಿ, ಮಾಜಿ ಮಹಾಪೌರರಾದ ಚಂದ್ರಿಕಾ ಪರಮೇಶ್ವರ, ಸರ್ಕಾರಿ ಮುದ್ರಣಾಲಯದ ನಿವೃತ್ತ ಅಧೀಕ್ಷಕ ಶಿವಶರಣಪ್ಪ ಕುಸನೂರ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ,  ಯುವಕರು ಮನಸ್ಸು ಮಾಡಿದರೆ ಸಮಾಜದಲ್ಲಿನ ಅನೇಕ ಮೂಡನಂಬಿಕೆ, ಕಂದಾಚಾರಗಳನ್ನು ಹೊಡೆದೋಡಿಸಿ ಸಮಾಜದಲ್ಲಿ ಪ್ರಜ್ಞೆ, ವೈಚಾರಿಕತೆ, ವೈಜ್ಞಾನಿಕತೆ ತುಂಬಬಹುದು. ಇಂತಹ ಕಾರ್ಯಕ್ರಮ ಗಳು ವಿದ್ಯಾರ್ಥಿಗಳಲ್ಲಿ ಪ್ರಜ್ಞೆ ಹುಟ್ಟಿಸಬಲ್ಲವು ಎಂದು  ತಿಳಿಸಿದರು.
ನಿವೃತ್ತ ತಹಸೀಲ್ದಾರ ಮಲ್ಲಿಕಾರ್ಜುನ ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ ಅಂಡಗಿ ಪ್ರಾರ್ಥನೆಗೀತೆ ಹಾಡಿದರು. ರವೀಂದ್ರಕುಮಾರ ಭಂಟನಳ್ಳಿ ಸ್ವಾಗತಿಸಿದರು. ಪರಮೇಶ್ವರ ಶೆಟಕಾರ
ನಿರೂಪಿಸಿದರು. ಕಾಲೇಜಿನ ಪ್ರಾಚಾರ್ಯ ಶಿವರಾಜ ಶೀಲವಂತ, ಪ್ರಭುದೇವ ಯಳವಂತಗಿ, ಶ್ರೀಕಾಂತಗೌಡ ಪಾಟೀಲ ತಿಳಗೂಳ ಇತರರು ಇದ್ದರು
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago