ಶಹಾಪುರ; ಸಾಹಿತ್ಯ ಪರಿಷತ್ ಮುಡಬುಳ ವತಿಯಿಂದ ಪ್ರಥಮ ವರ್ಷದ ಕನ್ನಡ ರಾಜ್ಯೋತ್ಸವದ ನುಡಿ ಸಂಭ್ರಮ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮುಡಬುಳ ಗ್ರಾಮದಲ್ಲಿ ಜರುಗಿತು.
ಈ ಸಂಧರ್ಭದಲ್ಲಿ ನಾಡ ದೇವತೆ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿ ಧ್ವಜಾರೋಹಣವನ್ನು ವಲಯ ಅಧ್ಯಕ್ಷರಾದ ಡಾ. ನಾಗರಾಜ ದೊರೆಯವರು ನೆರವೇರಿಸಿದರು.
ಧ್ವಜಾರೋಹಣದ ನಂತರ ಖ್ಯಾತ ಸಂಗೀತ ಕಲಾವಿದರಿಂದ ಕನ್ನಡದ ಕಂಪನ್ನು ಒಳಗೊಂಡ ಕನ್ನಡ ಗೀತೆಗಳನ್ನು ಗಾಯಕರಾದ ಚಂದ್ರಕಾಂತ ಮತ್ತು ಕುಮಾರಿ ಲತಾ ಲಿಂಗಸೂಗೂರರವರು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಈರಣ್ಣ ಹವಾಲ್ದಾರರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಣಗೌಡ ಪಾಟೀಲ್, ಈರಣ್ಣ ದೇಸಾಯಿ,ಬಸವರಾಜ ಹವಾಲ್ದಾರ್, ಶಾಂತಗೌಡ ಮಾಲಿಪಾಟೀಲ್,ಶಾಂತಲಿಂಗಪ್ಪ ಬಬಲಾದಿ,ಶೈಲ್ ಬುಕಿಷ್ಟಗಾರ್, ನಾಗಣ್ಣ ಸಾಹು, ಭೀಮಶ್ಯ ಹವಾಲ್ದಾರ,ಭೀಮಣ್ಣ ಜೇಟ್ಟೂರ್, ರಾಚೋಟಿ ಸಾಹು, ನಿಂಗಣ್ಣ ಸಜ್ಜನ,ನನ್ನಯ್ಯ ಸ್ವಾಮಿ ಗಣಚಾರಿ ಕೃಷ್ಣಪ್ಪ ನಾಯ್ಕೊಂಡಿ, ಸಂಗನಬಸಪ್ಪ ದೊರಿ,ನಿಂಗಣ್ಣ ಹವಾಲ್ದಾರ, ವಿಶ್ವರಾಧ್ಯ ದೇಸಾಯಿ, ಅನಿಲ್ಗೌಡ ಮದ್ರಿಕಿ,ರವಿ ಮದ್ರಿಕಿ,ಸಿದ್ದು ಕರೀಭಾವಿ, ನಿವಾಸ್ ಅಂಗಡಿ, ಸೇರಿದಂತೆ ಶಾಲಾ ಮಕ್ಕಳು ಶಿಕ್ಷಕರು ಹಾಗೂ ವಲಯ ಸಾಹಿತ್ಯ ಪರಿಷತ್ನ ಸರ್ವ ಸದಸ್ಯರು ಹಾಜರಿದ್ದರು.
ಈ ಕಾರ್ಯಕ್ರಮವನ್ನು ಹಣಮಂತ್ರಾಯ ಗುರಿಕಾರ ನಿರೂಪಿಸಿದರು, ಶೈಲ್ ಅಗಸರ ಸ್ವಾಗತಿಸಿದರು, ದೇವುನಾಯಕ ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…