ಬಿಸಿ ಬಿಸಿ ಸುದ್ದಿ

ಶಾಂತಿಯುತವಾಗಿ ಹಬ್ಬ ಆಚರಿಸಲು ತಹಸೀಲ್ದಾರ ಸುರೇಶ ಅಂಕಲಗಿ ಕರೆ

ಸುರಪುರ: ಸಪ್ಟೆಂಬರ್ ಎರಡರಂದು ಬರುವ ಗಣೇಶ ಹಬ್ಬ ಹಾಗು ಹತ್ತರಂದು ಆಚರಿಸಲಿರುವ ಮೋಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ತಹಸೀಲ್ದಾರ ಹಾಗು ತಾಲ್ಲೂಕು ದಂಡಾಧಿಕಾರಿ ಸುರೇಶ ಅಂಕಲಗಿ ತಿಳಿಸಿದರು.

ನಗರದ ಪೊಲೀಸ್ ಠಾಣೆ ಆವರಣದಲ್ಲಿ ನಡೆಸಲಾದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಸಬೆಯಲ್ಲಿದ್ದ ಡಿವಾಯ್‌ಎಸ್ಪಿ ಶಿವನಗೌಡ ಪಾಟೀಲ ಮಾತನಾಡಿ,ಗಣೇಶೋತ್ಸವ ಹಾಗು ಮೋಹರಂ ಒಂದು ವಾರಗಳ ಅಂತರಗಳಲ್ಲಿದ್ದು ಎಲ್ಲಾ ಸಮುದಾಯದ ಜನರು ಪರಸ್ಪರ ಎರಡೂ ಹಬ್ಬಗಳಲ್ಲಿ ಭಾಗವಹಿಸಿ ಶಾಂತಿ ಸೌಹಾರ್ಧತೆಯಿಂದ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಸಲಹೆ ನೀಡಿದರು.ಹಾಗು ಗಣೇಶನ ಕೂಡಿಸುವ ಮುನ್ನ ಪರವಾನಿಗೆ ಪಡೆಯಬೇಕು ಮತ್ತು ಗಣೇಶನ ಮೆರವಣಿಗೆ ಹೋಗುವ ಮಾರ್ಗವನ್ನು ಯಾವುದೆ ಕಾರಣಕ್ಕೂ ಬದಲಿಸಕೂಡದು,ಗಣೇಶ ವಿಸರ್ಜನೆಯ ಮೆರವಣಿಗೆ ಸಂದರ್ಭದಲ್ಲಿ ಬೇರೆಯಾರಿಗೂ ತೊಂದರೆಯಾಗದಂತೆ ನಡೆದುಕೊಳ್ಳಬೇಕು,ಅಲ್ಲದೇ ಅತಿಯಾದ ಧ್ವನಿ ವರ್ಧಕ ಬಳಸದಂತೆ ಸೂಚಿಸಿದರು.

ನಗರ ಠಾಣೆ ಪೊಲೀಸ್ ಇನ್ಸ್ಪೇಕ್ಟರ್ ಆನಂದರಾವ್ ಮಾತನಾಡಿ,ಇದುವರೆಗೆ ಗಣೇಶ ಹಬ್ಬ ಹಾಗು ಮೋಹರಂ ಸಂದರ್ಭದಲ್ಲಿ ಎಲ್ಲಿಯೂ ಹಿಂದೆ ಗಲಾಟೆಗಳಾದ ಉದಾಹರಣೆಗಳಿಲ್ಲ.ಅದರಂತೆ ಈಬಾರಿಯು ಯಾವುದೆ ಅಹಿತಕರ ಘಟನೆಗಳು ಜರಗದಂತೆ ಪರಸ್ಪರ ಆತ್ಮಿಯತೆಯಿಂದ ಎಲ್ಲರು ಹಬ್ಬವನ್ನು ಆಚರಿಸಬೇಕು.ಒಂದು ವೇಳೆ ಯಾವುದೆ ಅಹಿತಕರ ಘಟನೆ ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಕಾನೂನು ರೀತ್ಯಾ ಕ್ರಮ ಕಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.ವೇದಿಕೆ ಮೇಲೆ ಪಿಎಸ್‌ಐ ಸೋಮಲಿಂಗಪ್ಪ ಒಡೆಯರ್,ನಗರಸಭೆ ನೈರ್ಮಲ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಹಾಗು ಅಗ್ನಿಶಾಮಕ ದಳದ ಅಧಿಕಾರಿ ಸಣ್ಣ ಮಲ್ಲಯ್ಯ ಮತ್ತು ಜೆಸ್ಕಾಂ ಇಲಾಖೆ ಅಧಿಕಾರಿಗಳಿದ್ದರು.

ಸಭೆಯಲ್ಲಿ ಚಂದ್ರಶೇಖರ ಜಡಿಮರಳ್,ಅಪ್ಸರಾ ಹುಸೇನ,ಮಹ್ಮದ ಗೌಸ್,ಬಸವರಾಜ ಕೊಡೇಕಲ್,ನಾಸಿರ್ ಹುಸೇನ ಕುಂಡಾಲೆ,ಅಬ್ದುಲ ಅಲಿಂ ಗೋಗಿ,ಮಲ್ಕಯ್ಯ ತೇಲ್ಕರ್,ಮಲ್ಲಪ್ಪಗೌಡ ರತ್ತಾಳ,ನಿಂಗಪ್ಪಾ ನಂಬಾ,ರವಿ ನಾಯಕ ಬೈರಿಮರಡಿ,ಶಿವರಾಜ ವಗ್ಗರ,ನಂದಕುಮಾರ ಸಿ.ಕೆ,ಮೂರ್ತಿ ಬೊಮ್ಮನಹಳ್ಳಿ,ತಿಪ್ಪಣ್ಣ ಶೆಳ್ಳಿಗಿ,ಮಹೇಶ ಯಾದಗಿರಿ,ಮೌನೇಶ ಶೆಳ್ಳಿಗಿ,ಮಲ್ಲಿಕಾರ್ಜುನ ಹಸನಾಪುರ,ಮಾನು ಕಲಬುರ್ಗಿ,ಶರಣು ನಾಯಕ,ದೇವರಾಜ ರೂಢಿ,ಹಯ್ಯಾಳಪ್ಪ ಹಾದಿಮನಿ,ಮಾನಪ್ಪ ಝಂಡದಕೇರಾ ಸೇರಿದಂತೆ ಅನೇಕರಿದ್ದರು.

emedialine

Recent Posts

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ದೊಡ್ಡಮನಿ ನಿಧನ

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…

12 mins ago

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

12 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

14 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

14 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

15 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

15 hours ago