ಶಹಾಬಾದ: ಶಿಕ್ಷಣವು ಮೊಗ್ಗಿನಂತಿರುವ ಮಕ್ಕಳ ಮನಸ್ಸನ್ನು ಅರಳಿಸಬೇಕಲ್ಲದೇ ಪ್ರಶ್ನಿಸುವ ಹಾಗೂ ತರ್ಕಬದ್ದವಾಗಿ ಯೋಚಿಸುವ ಸಾಮಥ್ರ್ಯವನ್ನು ಬೆಳೆಸಬೇಕಾಗಿದೆ ಎಂದು ಎಐಡಿಎಸ್‍ಓ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕಾಮ್ರೆಡ್ ತುಳಜಾರಾಮ್.ಎನ್.ಕೆ ಹೇಳಿದರು.
ಅವರು ಬುಧವಾರ ನಗರದಲ್ಲಿ ಎಐಡಿಎಸ್‍ಓ ವತಿಯಿಂದ ಆಯೋಜಿಸಲಾದ ಮಹಾನ ಕ್ರಾಂತಿಕಾರಿ ಭಗತ್‍ಸಿಂಗ್ ಅವರ 116ನೇ ಜನ್ಮ ವಾರ್ಷಿಕಕ್ಕೆ ಸಮರ್ಪಿತ ವಿದ್ಯಾರ್ಥಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಆದರೆ ಇಂದು ನಮ್ಮ ಶಿಕ್ಷಣದ ಪದ್ಧತಿ ಹಾಗೂ ನೀತಿಗಳನ್ನು ನೋಡಿದರೆ ಅರಳಬೇಕಾದ ಮಕ್ಕಳ ಮನಸ್ಸನ್ನು ಮುರುಟಿ ಹಾಕುವಂತಿವೆ. ಒಂದೆಡೆ ಪಠ್ಯಕ್ರಮವನ್ನು ಕೇವಲ ಮಾಹಿತಿ ಸಂಗ್ರಹಣೆಗೆ ಸೀಮಿತಗೊಳಿಸಿ ಮಕ್ಕಳನ್ನು ಯಂತ್ರ ಮಾನವನಾಗಿ ಮಾಡಲಾಗುತ್ತಿದೆ. ಶಿಕ್ಷಣದ ಮೂಲ ಉದ್ದೇಶವಾದ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾದ ಸಾಹಿತ್ಯ, ಕಲೆ, ಕ್ರೀಡೆ ಇತರೆ ಪಠ್ಯೇತರ ಚಟುವಟಿಕೆಗಳನ್ನು ಕಡೆಗಣಿಸಲಾಗುತ್ತಿದೆ.
ಇಲ್ಲಿಯವರೆಗೂ ಬಡವರು, ದುಡಿಯುವ ಜನತೆಯು ಹಾಗೂ ಕೆಳ ಮಧ್ಯಮ ವರ್ಗದವರು ಪಡೆಯುತ್ತಿದ್ದ ಅಲ್ಪ-ಸ್ವಲ್ಪ ಶಿಕ್ಷಣವು ಇಂದು ಗಗನಕುಸುಮವಾಗುತ್ತಿದೆ. ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿಪಡಿಸಬೇಕಾದ ಸರ್ಕಾರವು ತನ್ನ ಎಲ್ಲಾ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿವೆ. ಹಂತ ಹಂತವಾಗಿ ಇಡೀ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿ ಅವರಿಗೆ ಒಪ್ಪಿಸಲಾಗುತ್ತಿದೆ. ಇದರಿಂದಾಗಿ ಶಿಕ್ಷಣ ಕೇವಲ ಉಳ್ಳವರ ಪಾಲಾಗುತ್ತಿದೆ ಎಂದು ಹೇಳಿದರು.
ಎಐಡಿಎಸ್‍ಓ ಜಿಲ್ಲಾ ಸಮಿತಿ ಸದಸ್ಯ ವೆಂಕಟೇಶ ದೇವದುರ್ಗ ಮಾತನಾಡಿ, ಟಿವಿ, ಅಂತರ್ಜಾಲ ಹಾಗೂ ಮಾಧ್ಯಮಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಅಶ್ಲೀಲತೆ ಹಾಗೂ ಕ್ರೌರ್ಯ ಹರಿದಾಡುತ್ತಿದೆ. ಕುಸಂಸ್ಕøತಿಯುಳ್ಳ, ಕೀಳು ಅಭಿರುಚಿಯ ಸಾಹಿತ್ಯ, ಸಿನಿಮಾಗಳಿಂದ ಸಾಂಸ್ಕೃತಿಕ ಬೆನ್ನೆಲುಬನ್ನು ಮುರಿಯಲಾಗುತ್ತಿದೆ. ಚಿಕ್ಕ ಮಗುವಿನಿಂದ ಹಿಡಿದು ವೃದ್ಧ ಮಹಿಳೆಯರ ವರೆಗೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥಾಗುತ್ತಿದೆ.
ಈ ಕಲುಷಿತ ವಾತಾವರಣದಿಂದ ಹೊರಬರಲು ನಮಗೆ ನವೋದಯ ಕಾಲದಲ್ಲಿನ ಈಶ್ವರ್ ಚಂದ್ರ ವಿದ್ಯಾಸಾಗರ್, ಶರತ್ ಚಂದ್ರ ಚಟರ್ಜಿ, ಸಾವಿತ್ರಿಬಾಯಿ ಫುಲೆ, ಜ್ಯೋತಿರಾವ್ ಪುಲೆ ಹಾಗೂ ಎಳೆಯ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಸ್ವ-ಹಿತಾಸಕ್ತಿ ಇಲ್ಲದೆ ಕೆಚ್ಚೆದೆಯಿಂದ ಹೋರಾಡಿ ಪ್ರಾಣವನ್ನೇ ಅರ್ಪಿಸಿದ ಖುದಿರಾಮ್ ಬೋಸ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಹಾಗೂ ನೇತಾಜಿ ಅವರ ಹೋರಾಟದ ಸಂಘರ್ಷ ಜೀವನದ ವಿಚಾರಗಳು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಈ ಶಿಬಿರದಲ್ಲಿ ಸ್ಥಳೀಯ ಸಮಿತಿ ಅಧ್ಯಕ್ಷ ಕಿರಣ್.ಜಿ.ಮಾನೆ, ಕಾರ್ಯದರ್ಶಿ ಅಜಯ್.ಎ.ಗುರುಜಲ್, ಸದಸ್ಯರಾದ ರಂಗನಾಥ ಮಾನೆ, ಸೃಷ್ಠಿ, ಚೇತನ ಮಾನೆ, ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…