ಶಹಾಬಾದ : ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸದಾನಂದ ಕುಂಬಾರ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂಧರ್ಭದಲ್ಲಿ ಸಹಕಾರ ಸಂಘಗಳ ಎಆರಸಿ ರವೀಂದ್ರ ಅವರು ಮಾತನಾಡಿ, ಸಹಕಾರಿ ಸಂಘಗಳಿಗೆ ಗ್ರಾಹಕರು ದೇವರಿದ್ದಂತೆ. ಅವರ ಪ್ರಾಮಾಣಿಕ ಸೇವೆಯೇ ಸಹಕಾರ ಸಂಘದ ಏಳ್ಗೆಗೆ ಅಡಿಪಾಯ. ಸಹಕಾರ ಸಂಸ್ಥೆಗಳಿಗೆ ಹಣ ಗಳಿಕೆ ಜತೆ ಗ್ರಾಹಕರ ಆರ್ಥಿಕ ಬಲವರ್ಧನೆ ಗುರಿ ಇರಬೇಕು ಎಂದರು.
ಬ್ಯಾಂಕ್ ನಡೆಸುವದೊಂದೇ ಉದ್ಯೋಗವಾಗಬಾರದು. ಬ್ಯಾಂಕಿನಿಂದ ಉದ್ಯೋಗಗಳು ಸೃಷ್ಟಿಯಾಗಬೇಕು. ಅಂದಾಗ ಗ್ರಾಹಕರ ಜತೆ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಅಲ್ಲದೇ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿ ಬ್ಯಾಂಕ್ ಬಲವರ್ಧನೆಗೆ ಶ್ರಮವಹಿಸಿ, ಪಾರದರ್ಶಕ ಆಡಳಿತ ನೀಡಬೇಕೆಂದು ತಿಳಿಸಿದರು.
ನೂತನ ಅಧ್ಯಕ್ಷ ಸದಾನಂದ ಕುಂಬಾರ ಮಾತನಾಡಿ, ಆಡಳಿತ ಮಂಡಳಿಯ ಸದಸ್ಯರ ಸಹಕಾರದಿಂದ ಈ ಸ್ಥಾನ ಲಭಿಸಿದ್ದು, ಸಂಘದ ಅಧ್ಯಕ್ಷ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೆನೆ.ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಚುನಾವಣಾಧಿಕಾರಿ ಸಂಗೀತ, ಸಂಘದ ಉಪಾಧ್ಯಕ್ಷ ಲೋಹಿತ ಕಟ್ಟಿ, ಮಾಜಿ ಅಧ್ಯಕ್ಷ ಶರಣು ವಸ್ತ್ರದ, ನಿಂಗಪ್ಪ ಹುಳಗೋಳಕರ್,ಶಿವಾನಂದ ಪಾಟೀಲ, ಸುನಂದಾ ನಾಗಣ್ಣ ಪಾಟೀಲ, ನಾರಾಯಣ ರೆಡ್ಡಿ, ಜಗದೀಶ ಪಾಟೀಲ, ಶ್ರೀಧರ ಜೋಶಿ ಹಾಗೂ ಶರಣು ಜೋಗೂರ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…