ಸುರಪುರ : ಹಲವಾರು ಸಾಹಿತಿ, ಕವಿಗಳಿಗೆ, ಲೇಖಕರಿಗೆ ಪ್ರೋತ್ಸಾಹಿಸುತ್ತಾ ಅವರ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅಕ್ಷರ ದಾಸೋಹ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಕನ್ನಡ ಸಾಹಿತಯ ಸಂಘದ ಸೇವೆ ಕಂಡು ತುಂಬಾ ಸಂತೋಷವಾಯಿತು ಎಂದು ಹಿರಿಯ ಸಾಹಿತಿ ಸಂಗಮೇಶ ಬಾದವಾಡಗಿ ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಅವರಿಗೆ 2022ನೇ ಸಾಲಿನ, ಜನಪದ ಹಾಡುಗಾರ್ತಿ ಹನಮವ್ವ ಬಪ್ಪರಗಿ ವಾಗಣಗೇರ ಅವರಿಗೆ 2023ನೇ ಸಾಲಿನ ಸುರಪುರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಂಗಂಪೇಟೆ ಕಸಾಸಂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಸುಗೂರೇಶ ವಾರದ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿವಶರಣಯ್ಯಸ್ವಾಮಿ ಬಳ್ಳುಂಡಗಿ ಮಠ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಸಂಘ ದಿಂದ ನಗರದ ರಾಜಾ ಮದನಗೋಪಾಲ ನಾಯಕ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ, ರಾಜಾ ಮದನಗೋಪಾಲ ನಾಯಕರ ಪುತ್ಥಳಿ ಲೋಕಾರ್ಪಣೆ ಅಂಗವಾಗಿ ಪ್ರಥಮ ಪುಷ್ಪಾರ್ಚನೆ ಮತ್ತು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ,ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃತಿಯ ಕುರಿತು ಮಾತನಾಡಿದರು.
ಇಂದು ಪುಸ್ತಕಗಳ ಪ್ರಕಟಣೆ ಕ್ಷೀಣಿಸುತ್ತಿದೆ. ಮಾರಾಟ, ಓದುವುದು ತೀರಾ ಕಡಿಮೆಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಲೇಖಕರ ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿರುವ ಸಂಘದ ಸೇವೆ ಅವಿಸ್ಮರಣೀಯ. ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಮೂಲಕ ಲೇಖಕರ ಬೆನ್ನುತಟ್ಟುವ ಕೆಲಸ ಮಾಡಬೇಕು. ಸಂಗೀತವನ್ನು ಆಸ್ವಾಧಿಸಬೇಕು. ಸುರಪುರದ ವೀರ ಅರಸರ ಇತಿಹಾಸ ಅದ್ಭುತವಾಗಿದೆ. ಸಗರನಾಡಿನ ಸಾಂಸ್ಕøತಿಕ ರಾಯಭಾರಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ಇಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳಿಗೆ ನೀಡಿದ್ದ ಕೊಡುಗೆ ಅನನ್ಯವಾಗಿದೆ ಎಂದು ಸ್ಮರಿಸಿದರು.
ವಿ.ಎಸ್.ಶ್ರೀವಾಸ್ತವ್ಯ ರಚಿಸಿದ ಇಂಗ್ಲಿಷ್ ಗ್ರಂಥ ಬ್ರಿಟಿಷ್ ಭಾರತದ 1857-1858 ರ ಹೋರಾಟದ ದೇಶ ಭಕ್ತರು ಮತ್ತು ದೇಶ ದ್ರೋಹಿಗಳು ಭಾಗ-1 ನ್ನು ರಂಗನಗೌಡ ಹೆಚ್.ಪಾಟೀಲ್ ಅವರು ಕನ್ನಡಕ್ಕೆ ಬಹಳ ಚೆನ್ನಾಗಿ ಅನುವಾದಿತ ಮಾಡಿದ್ದಾರೆ. ಮುಂದೆಯೂ ಅವರು ಸಂಶೋಧನಾತ್ಮಕವಾಗಿ ಮುಂದಿನ ಪೀಳಿಗೆಗೆ ದಾರಿ ತೋರುವ ವಿಚಾರಗಳನ್ನು ಹೆಕ್ಕಿ ತೆಗೆದು ಇನ್ನೂ ಹೆಚ್ಚಿನ ಪುಸ್ತಕಗಳನ್ನು ರಚಿಸಬೇಕು ಎಂದರು.
ನಮ್ಮ ಸೇವೆ ಗುರುತಿಸಿ ಸುರಪುರ ಕನ್ನಡ ಸಾಹಿತ್ಯ ಸಂಘ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿರುವುದು ಖುಷಿ, ತೃಪ್ತಿ ತಂದಿದೆ. ರಾಜಾ ಮದನಗೋಪಾಲನಾಯಕರ ಸೇವೆಯನ್ನು ನಾವುಗಳು ಸದಾ ಸ್ಮರಿಸಬೇಕು. ಶಾಲಾ-ಕಾಲೇಜುಗಳಲ್ಲಿ ಸುರಪುರ ಇತಿಹಾಸ, ಸಗರನಾಡಿ ಕವಿ, ಸಾಹಿತಿ, ಲೇಖಕರ ಬಗ್ಗೆ ತಿಳಿ ಹೇಳಬೇಕು.ಸಂಘದ ಯಾವುದೇ ಕಾರ್ಯಕ್ಕೆ ನಾನು ಜೊತೆಯಾಗಿರುವೆ. -ಡಾ.ಆರ್.ವಿ.ನಾಯಕ ಟಿಎಚ್‍ಒ,ಸುರಪುರ.
ಕಸಾಸಂ ಅಧ್ಯಕ್ಷ ಬಸವರಾಜ ಜಮದ್ರಖಾನಿ ಮಾತನಾಡಿ, ಮಾಜಿ ಸಚಿವ ರಾಜಾ ಮದನಗೋಪಾಲನಾಯಕ ಅವರು ಹಾಕಿಕೊಟ್ಟ ದಾರಿಯಲ್ಲಿ ಸಂಘವನ್ನು ಮುನ್ನೆಡಿಸಿಕೊಂಡು ಹೋಗುತ್ತಿದ್ದೇವೆ ಎಂದರು. ನಿವೃತ್ತ ಎಸ್‍ಪಿ ಚಂದ್ರಕಾಂತ ಭಂಡಾರಿ ಮಾತನಾಡಿದರು. ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ರಾಜಾ ಮುಕುಂದ ನಾಯಕ, ರಂಗನಗೌಡ ಹೆಚ್.ಪಾಟೀಲ್, ರಂಗಂಪೇಟೆ ಕಸಾಸಂ ಅಧ್ಯಕ್ಷ ಸುಗೂರೇಶ ವಾರದ, ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಶಿವಶರಣಯ್ಯಸ್ವಾಮಿ ಬಳ್ಳುಂಡಗಿ ಮಠ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಜೆ.ಅಗಸ್ಟಿನ್ ಪ್ರಾಸ್ತಾವಿಕದಲ್ಲಿ ರಾಜಾ ಮದನಗೋಪಾಲ ನಾಯಕರ ಸಾಹಿತ್ಯ ಸೇವೆ, ಸಂಘ ನಡೆದ ಬಂದು ದಾರಿ, ಸಂಘದ ಮುಂದಿರುವ ಯೋಜನೆ, ಗುರಿಗಳನ್ನು ವಿವರಿಸಿದರು. ಅನೇಕ ಹಿರಿಯರು, ಸಾಹಿತಿಗಳು, ಕನ್ನಡಾಭಿಮಾನಿಗಳು, ಸಂಘದ ಪದಾಧಿಕಾರಿಗಳು ಸೇರಿ ಇತರರು ಇದ್ದರು. ನಿರ್ಮಲಾ ರಾಜಗುರು, ಸಂಜನಾ ಜೋಷಿ, ಮೋಹನ ಮಾಳದಕರ ಪ್ರಾರ್ಥಿಸಿದರು. ಕನಕಪ್ಪ ವಾಗಣಗೇರಾ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಜಾಲವಾದಿ ನಿರೂಪಿಸಿದರು. ಶಿಕ್ಷಕ ಶ್ರೀಶೈಲ ಯಂಕಚಿ ವಂದಿಸಿದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…