ಕಲಬುರಗಿ: ಕರ್ನಾಟಕದಿಂದ ಐ.ಎ.ಎಸ್. ಪರೀಕ್ಷೆ ಬರೆಯುವವರು ಹೆಚ್ಚಾಗಬೇಕು. ಮಕ್ಕಳಲ್ಲಿ ಅದರ ಅರಿವು ಮೂಡಬೇಕು. ಇದು ಜೀವನದಲ್ಲಿ ಒಂದು ಸಲ ಬರೆದರೆ ಯಶಸ್ಸು ಸಿಗುವುದಿಲ್ಲ ಅಸಲ ಅವಕಾಶವಿರುತ್ತದೆ. ಯಶಸ್ಸು ಸಿಗುವವರೆಗೂ ಬರೆಯಬೇಕು. ಮೊದಲು ಹಾರ್ಡ್ ವರ್ಕ, ಸ್ಮಾರ್ಟ್ ವರ್ಕ್, ತಪಸ್ಸು, ಘೋರ ತಪಸ್ಸು, ಘನಘೋರ ತಪಸ್ಸು ಮಾಡಬೇಕು ಎಂದು ಅಪರ್ ಆಯುಕ್ತ ಐ.ಎ.ಎಸ್ ಡಾ. ಆಕಾಶ ಶಂಕರ ಹೇಳಿದರು.
ಜಸ್ಟಿಸ್ ಶಿವರಾಜ ವಿ ಪಾಟೀಲ ಫೌಂಡೇಶನ್ ಮತ್ತು ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಗಾರ “ಯಶಸ್ಸಿನ ಕೀಲಿಕೈ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದರು.
ಘನಘೋರ ತಪಸ್ಸಿನಿಂದ ಯಶಸ್ಸು ಸಾಧ್ಯ. ಪ್ರತಿ ವರ್ಷ 20 ಲಕ್ಷ ಅಭ್ಯರ್ಥಿಗಳು ಐ.ಎ.ಎಸ್. ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ 180 ಜನ ಐ.ಎ.ಎಸ್. ಆಗುತ್ತಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಭಾಗ ಇವರು ಮಾತನಾಡುತ್ತ, ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಸಂಪನ್ಮೂಲ ವ್ಯಕ್ತಿಗಳು ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯ ಕುರಿತು ತಿಳಿಸುತ್ತಿರುವುದರಿಂದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಜೀವನದಲ್ಲಿ ದೂರದೃಷ್ಠಿ ಇಟ್ಟುಕೊಂಡು ಗುರಿ ಮುಟ್ಟಬೇಕು.
1924 ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರು ಬರೆದ ‘ನೇಷನ್ ಬಿಲ್ಡಿಂಗ್’ ಪುಸ್ತಕದಲ್ಲಿ “100 ವರ್ಷದ ನಂತರ ನನ್ನ ದೇಶ ಈ ರೀತಿ ಇರುವಂತೆ ನಾನು ಇಷ್ಟ ಪಡುತ್ತೇನೆ” ಎಂದು ತಿಳಿಸಿದ್ದಾರೆ, ಅವರಂತೆ ದೂರದೃಷ್ಟಿಕೋನ ಹೊಂದಿರಬೇಕು ಎಂದರು.
ನಮ್ಮ ಜೀವನದಲ್ಲಿ ಮುಂದೆ 10 ವರ್ಷಗಳಾದ ನಂತರ ನಾವು ಹೇಗಿರಬೇಕು? ಎಲ್ಲಿರಬೇಕು? ಏನು ಸಾಧನೆ ಮಾಡಬೇಕೆಂಬ ವಿಷನ್ ಹೊಂದಿರಬೇಕು. ನಿನ್ನನ್ನು ನೀನು ಏನಾಗಿ ನೋಡಬೇಕೆಂದು ಇಷ್ಟ ಪಡುತ್ತಿಯಾ ಎಂದು ಪ್ರಶ್ನಿಸಿಕೊಂಡು ಅದಕ್ಕೆ ತಕ್ಕಂತೆ ಪರಿಶ್ರಮದಿಂದ ಸಾಧಿಸಬೇಕು.
ನಾನು ಹತ್ತನೇ ತರಗತಿಯಲ್ಲಿದ್ದಾಗಲೇ ಮುಂದಿನ ಹತ್ತು ವರ್ಷಗಳಲ್ಲಿ ಐ.ಎ.ಎಸ್. ಅಧಿಕಾರಿಯಾಗುವ ಕನಸುಕಂಡು ಅದಕ್ಕಾಗಿ ತಕ್ಕ ತಯಾರಿ ನಡೆಸಿದೆ. ಸಾಕಷ್ಟು ಅಡಚಣೆಗಳು ಉಂಟಾದರೂ ಎದೆಗುಂದದೆ ದೃಢ ಸಂಕಲ್ಪದಿಂದ ಆರನೇ ಬಾರಿಗೆ ಅಖಿಲ ಭಾರತ ಮಟ್ಟದಲ್ಲಿ 78ನೇ ರ್ಯಾಂಕ್ ಪಡೆದು ಐ.ಎ.ಎಸ್. ಪಾಸ್ ಆಗಿ ಈಗ ನಿಮ್ಮ ಮುಂದೆ ಮಾತನಾಡಲು ನಿಂತಿದ್ದೇನೆ. ನೀವೂ ಕೂಡ 10ನೇ ತರಗತಿಯಿಂದಲೇ ಗುರಿ ಇಟ್ಟುಕೊಂಡು ಈಗಿನಿಂದಲೇ ತಪಸ್ಸು ಆರಂಭಿಸಬೇಕು. ಇಂದಿನ ಕಾರ್ಯಕ್ರಮದಲ್ಲಿನ ವಿದ್ಯಾರ್ಥಿಗಳು ಮುಂದೆ 10 ವರ್ಷಗಳ ನಂತರ ಇದೇ ವೇದಿಕೆಯ ಮೇಲೆ ನಿಂತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕೆಂಬ ಛಲ ಇರಬೇಕು ಎಂದರು.
ಮುಂದಿನ ಐದು ತಿಂಗಳಿನಲ್ಲಿ ಎದುರಿಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಈಗಿನಿಂದಲೇ ಸಿದ್ದತೆ ಮಾಡಿಕೊಂಡಾಗಲೇ ತಕ್ಕ ಫಲ ಸಿಗುತ್ತದೆ ಎಂದು ಪ್ರೇರೇಪಿಸಿದರು. ನ್ಯಾಯಮೂರ್ತಿ ಶಿವರಾಜ ಪಾಟೀಲ ಪ್ರತಿಷ್ಠಾನದಿಂದ ಇಂತಹ ಉತ್ತಮ ಕಾರ್ಯಕ್ರಮ ಏರ್ಪಡಿಸಿದ್ದು ಶ್ಲಾಘನೀಯವಾದುದು ಎಂದರಲ್ಲದೇ ಅವರಿಗೆ ಇಲಾಖೆ ವತಿಯಿಂದ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾದ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಖ್ಯಾತ ವೈದ್ಯರು ಮತ್ತು ಪ್ರೇರಣಾ ಉಪನ್ಯಾಸಕರು ಬೆಂಗಳೂರು ಅವರು ಮಾತನಾಡುತ್ತ, ವಿದ್ಯಾರ್ಥಿಗಳು ಉತ್ತಮ ವಿದ್ಯೆ ಪಡೆಯುವದರೊಂದಿಗೆ ನಡೆ-ನುಡಿಯಿಂದಲೂ ಶುದ್ಧವಾಗಿರಬೇಕು. ಬದುಕಿಗೆ ಬೇಕಾದ ಜ್ಞಾನ ಪಡೆಯಬೇಕು. ಪಾಶ್ಚಾತ್ಯ ಸಂಸ್ಕøತಿಯ ಅನುಕರಣೆ ಮಾಡುತ್ತ ನಮ್ಮ ಸಂಸ್ಕøತಿ ಮರೆಯಬಾರದು.
ನಿಮ್ಮಲ್ಲಿರುವ ಸಾಮಥ್ರ್ಯದಿಂದ ಉತ್ತಮ ಪ್ರೇರಣೆ ಪಡೆದು ಜೀವನದಲ್ಲಿ ಮುಂದೆ ಹೋಗಬೇಕು. ಯಶಸ್ಸು ಪಡೆಯಲು ಪ್ರತಿದಿನ, ಪ್ರತಿಕ್ಷಣ ಏನಾದರೂ ಹೊಸದನ್ನು ಕಲಿಯಬೇಕು. ಅದಕ್ಕಾಗಿ ಶ್ರಮಪಡಬೇಕು. ಉತ್ತಮ ಶಿಕ್ಷಣ ಪಡೆದು ಉತ್ತಮ ಆರೋಗ್ಯ ತನ್ನದಾಗಿಸಿಕೊಳ್ಳಬೇಕು. ಸುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಂಡು ಸಂಸ್ಕಾರ-ಸಂಸ್ಕøತಿ ಹೊಂದಿರಬೇಕು. ಜಗತ್ತಿನ ಮುಖ್ಯವಾದ ಸಂಪತ್ತು ಮಾನವ ಸಂಪತ್ತು.
ಮಕ್ಕಳೇ ನಿಜವಾದ ಸಂಪತ್ತು, ಪಾಲಕರು ಮಕ್ಕಳ ಭವಿಷ್ಯ ರೂಪಿಸಲು ಕಷ್ಟಪಟ್ಟರೆ ಮಕ್ಕಳು ಪಾಲಕರನ್ನು ಗೌರವಿಸಬೇಕು. ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಪಡೆದು ಹಿಂದೆ ಗುರು-ಮುಂದೆ ಗುರಿ ಇಟ್ಟುಕೊಂಡು ಬದುಕಬೇಕು. ಬದುಕಿನಲ್ಲಿ ಶಿಕ್ಷಣ, ಶಿಸ್ತು, ಶಿಷ್ಠಾಚಾರ, ಶುಚಿತ್ವ, ಸ್ವಾಸ್ಥತೆ ಇದ್ದಾಗ ಯಶಸ್ಸು ದೊರಕುತ್ತದೆ. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಗುರುಕುಲದಲ್ಲಿ ನಡೆಯುತ್ತಿತ್ತು. ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ, ಯೋಗ, ಶ್ಲೋಕ, ಧ್ಯಾನ ಆತ್ಮೋದ್ಧಾರ ಕುರಿತು ತಿಳಿಸುತ್ತಾ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ನೀಡಬೇಕೆಂದು ತಿಳಿಸುತ್ತಿದ್ದರು. ಆದರೆ ಇಂದು ಮಕ್ಕಳು ಪಾಲಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.
ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕೆಟ್ಟ ಅಭ್ಯಾಸ ಹೊಂದಿರಬಾರದು. ಪ್ರತಿದಿನ 108 ಸೂರ್ಯ ನಮಸ್ಕಾರ ಮಾಡಬೇಕು. ಯೋಗ ಧ್ಯಾನ ವ್ಯಾಯಾಮ ಮಾಡಬೇಕು. ಅಂಕ ಕಡಿಮೆ ಬಂದರೂ ಫೇಲ್ ಆದರೂ ಕೆಟ್ಟದಾರಿ ಹಿಡಿಯಬಾರದು, ಮತ್ತೆ ಪ್ರಯತ್ನಿಸಬೇಕು. ಸಾವಿರ ಸಲ ಸೋತರೂ, ಸೋಲು ನಮಗೆ ಪಾಠ ಕಲಿಸುತ್ತದೆ, ತಾಳ್ಮೆಯಿಂದಿರಬೇಕು. ಜೇನು ನೋಣದಂತೆ ಸಿಹಿಜೇನನ್ನು ಸಮಾಜಕ್ಕೆ ನೀಡಬೇಕು. ಜ್ಞಾನ, ವಿಜ್ಞಾನ, ತತ್ವಜ್ಞಾನವನ್ನು ಅರಿತುಕೊಳ್ಳಬೇಕು. ಕೆಟ್ಟದ್ದನ್ನು ತ್ಯಜಿಸಬೇಕು. ಮೊಬೈಲ್ ಕೇವಲ ಒಳ್ಳೆಯದಕ್ಕೆ ಬಳಸಬೇಕು. ಸಮಯಕ್ಕೆ ಸರಿಯಾಗಿ ಕೆಲಸ ಮಾಡಬೇಕು. ವಿದ್ಯೆಯಷ್ಟೆ ಸಂಸ್ಕಾರವೂ ಮುಖ್ಯವಾಗಿದೆ. ಸುಸಂಸ್ಕøತರಾಗಿರಬೇಕೆಂದು ಸಂಕಲ್ಪ ಮಾಡಬೇಕು. ಗುರಿಯೆಡೆಗೆ ಮಾತ್ರ ಮನಸ್ಸಿರಬೇಕು.
ಅರ್ಜುನನ ಗುರಿ ಮೀನಿನ ಕಣ್ಣಿನಲ್ಲಿರುವಂತೆ, ಏಕಲವ್ಯನ ವಿದ್ಯೆಯಂತೆ ಏಕಾಗ್ರತೆಯಿಂದ ಸಾಧಿಸಬೇಕು. ಆಗ ಯಶಸ್ಸು ದೊರಕುತ್ತದೆ. ದೇಶ ಪ್ರೇಮಿಯಾಗಿ ಸಮಾಜ ಪ್ರೇಮಿಯಾಗಿ ಹೊರಹೊಮ್ಮಬೇಕು. ಶಾಂತಿ, ಸುಖ, ಸಮೃದ್ಧಿಯ ಬದುಕು ತನ್ನದಾಗಿಸಿಕೊಳ್ಳಬೇಕು. ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಶಬ್ದಮಾಲಿನ್ಯ, ವಾಯು ಮಾಲಿನ್ಯ ಉಂಟು ಮಾಡಬಾರದು. ಸಾಲುಮರದ ತಿಮ್ಮಕ್ಕನಂತೆ ಪರಿಸರ ಸಂರಕ್ಷಿಸಬೇಕು. ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸತ್ಯ ಮಾರ್ಗದಲ್ಲಿ ನಡೆದು ಯಶಸ್ಸು ಪಡೆಯಬೇಕು. ನೀವು ಸೀನಿದಾಗ ಕೆಮ್ಮಿದಾಗ ವೈರಾಣುಗಳು ಹರಡದಂತೆ ನೋಡಿಕೊಳ್ಳಬೇಕು. ಉಗುರು ಬೆಳೆಸಿಕೊಳ್ಳಬಾರದು. ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು. ಕೈಕುಲುಕಬಾರದು, ನಮಸ್ಕಾರ ಮಾಡಬೇಕು. ಸಿಗರೇಟು-ತಂಬಾಕು ಸೇವಿಸಬಾರದು. ದಿನನಿತ್ಯ ಹಾಲು ಹಣ್ಣು ತರಕಾರಿ ಸೇವಿಸಬೇಕು. ಜಂಕ್-ಫುಡ್ ತಿನ್ನಬಾರದು ಎಂದು ತಿಳಿಸಿದರು.
ಪ್ರೊ. ಚನ್ನಾರಡ್ಡಿ ಪಾಟೀಲ ಕಾರ್ಯದರ್ಶಿಗಳು ಜಸ್ಟಿಸ್ ಶಿವರಾಜ ವಿ ಪಾಟೀಲ ಫೌಂಡೇಶನ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಸಾಹೇಬರ ಆಶಯದಂತೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಇರುತ್ತದೆ. ಅವರ ಪ್ರತಿಭೆಗೆ ಪ್ರೋತ್ಸಾಹಿಸಿ ಅವರ ವ್ಯಕ್ತಿತ್ವವನ್ನು ಉನ್ನತ್ತಿಕರಿಸುವ ಕಾರ್ಯಕ್ರಮ ಇದಾಗಿದೆ. ಪ್ರತಿಭೆಗೆ ನೀರೆರದು ಸೂಕ್ತ ಮಾರ್ಗದರ್ಶನ ಮಾಡಿದಾಗ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮುತ್ತಾರೆ ಆದ್ದರಿಂದ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವುದು ಅಗತ್ಯವಾಗಿದೆ ಎಂದರು. ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಎಲ್ಲರನ್ನು ಸ್ವಾಗತಿಸಿದರು.
ಇಂಗ್ಲೀಷ್ ಭಾಷಾ ಸಂಪನ್ಮೂಲ ವ್ಯಕ್ತಿ ವಿಜಯಕುಮಾರ ನಾಲವಾರ, ಗಣಿತಶಾಸ್ತ್ರದ ಸಂಪನ್ಮೂಲ ವ್ಯಕ್ತಿ ಅಶೋಕ ಕಾಬಾ ಮಕ್ಕಳಿಗೆ ಬೋಧನೆ ಮಾಡಿದರು. ಇ.ಸಿ.ಓ. ರಾಜಕುಮಾರ ಪಾಟೀಲ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ, ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು. ನಗರದ ವಿವಿಧ ಪ್ರೌಢಶಾಲೆಯ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…