ಕಲಬುರಗಿ: ಜೀವಿಯೊಂದನ್ನು ಅಭಿವೃದ್ಧಿಪಡಿಸಲು, ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ಅಗತ್ಯವಿರುವ ಸೂಚನೆಗಳನ್ನು ಡಿಎನ್‌ಎ ಒಳಗೊಂಡಿದೆ ಎಂದು ಕೆಬಿಎನ್ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎ ಮುಜೀಬ ಅಭಿಪ್ರಾಯಪಟ್ಟರು.
ಖಾಜಾ ಬಂದನವಾಜ ವಿಶ್ವವಿದ್ಯಾನಿಲಯ ಮನೋವಿಜ್ಞಾನ ವಿಭಾಗವು ಗುರುವಾರ ಏರ್ಪಡಿಸಿದ್ದ ಡಿಎನ್ ಎ: ಒಂದು ವಿಸ್ಮಯ ಅಣು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಡಿಎನ್‌ಎ ಅನುಕ್ರಮಗಳನ್ನು ಪ್ರೋಟೀನ್‌ಗಳನ್ನು ಉತ್ಪಾದಿಸಲು ಬಳಸಬಹುದಾದ ಸಂದೇಶಗಳಾಗಿ ಪರಿವರ್ತಿಸಬೇಕು. ನಮ್ಮ ದೇಹದಲ್ಲಿನ ಹೆಚ್ಚಿನ ಕೆಲಸವನ್ನು ಮಾಡುವ ಸಂಕೀರ್ಣ ಅಣುಗಳಾಗಿವೆ. ನ್ಯೂಕ್ಲಿಯೊಟೈಡ್ ಮತ್ತು ಪ್ರೊಟೀನ್‌ಗಳು ಏಕೆ ಮುಖ್ಯ ಎಂಬುವುದನ್ನು ಮತ್ತು ಡಿಎನ್‌ಎ ಕಾರ್ಯನಿರ್ವಹಣೆಯ ಬಗ್ಗೆ ಅವರು ವಿವರಿಸಿದರು. ಕಲೆ, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ. ನಿಶಾತ್ ಆರೀಫ್ ಹುಸೇನ ಮಾರ್ಗದರ್ಶನ ಮಾಡಿದರು.
ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಸಂಯೋಜಕಿ ಶ್ರೀಮತಿ ಮನಿಷಾ ಪಾಟೀಲ್ˌ ಡಾ. ಹಮೀದ್ ಅಕ್ಬರ್, ಡಾ. ಮೈಮೂನ್, ಡಾ. ಅಥರ್, ಡಾ. ಅಬ್ರಾರ್, ಡಾ. ಜಾವೆದ್ ಡಾ. ನಗ್ಮ್, ಡಾ. ಸುನಿಲ್, ಡಾ. ಮುಜೀಬ್, ಡಾ. ಅಬ್ರಾರ್, ಡಾ. ಅತಿಯಾ, ಡಾ. ಜನಾಬ್, ಡಾ. ಸವಿತಾ, ಡಾ. ತಬಸ್ಸುಮ್, ಡಾ. ಫೆಮಿದ, ಡಾ. ನಮ್ರತಾ, ಡಾ. ಮನಿಷಾ , ಡಾ. ಮಿಲನ್, ರಮೇಶ್ ಇದ್ಡರು. ಬತೂಲ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಮಿಸಬಾ ಸ್ವಾಗತಿಸಿದರು. ಫಿರ್ದೌಸ್ ನಿರೂಪಿಸಿದರು. ಸಮಿಹಾ ವಂದಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…