ಜೀವ ಸಂಕುಲದ ಮೂಲ ಡಿಎನ್ ಎ: ಡಾ ಮುಜೀಬ

0
34

ಕಲಬುರಗಿ: ಜೀವಿಯೊಂದನ್ನು ಅಭಿವೃದ್ಧಿಪಡಿಸಲು, ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ಅಗತ್ಯವಿರುವ ಸೂಚನೆಗಳನ್ನು ಡಿಎನ್‌ಎ ಒಳಗೊಂಡಿದೆ ಎಂದು ಕೆಬಿಎನ್ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎ ಮುಜೀಬ ಅಭಿಪ್ರಾಯಪಟ್ಟರು.

ಖಾಜಾ ಬಂದನವಾಜ ವಿಶ್ವವಿದ್ಯಾನಿಲಯ ಮನೋವಿಜ್ಞಾನ ವಿಭಾಗವು ಗುರುವಾರ ಏರ್ಪಡಿಸಿದ್ದ ಡಿಎನ್ ಎ: ಒಂದು ವಿಸ್ಮಯ ಅಣು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಡಿಎನ್‌ಎ ಅನುಕ್ರಮಗಳನ್ನು ಪ್ರೋಟೀನ್‌ಗಳನ್ನು ಉತ್ಪಾದಿಸಲು ಬಳಸಬಹುದಾದ ಸಂದೇಶಗಳಾಗಿ ಪರಿವರ್ತಿಸಬೇಕು. ನಮ್ಮ ದೇಹದಲ್ಲಿನ ಹೆಚ್ಚಿನ ಕೆಲಸವನ್ನು ಮಾಡುವ ಸಂಕೀರ್ಣ ಅಣುಗಳಾಗಿವೆ. ನ್ಯೂಕ್ಲಿಯೊಟೈಡ್ ಮತ್ತು ಪ್ರೊಟೀನ್‌ಗಳು ಏಕೆ ಮುಖ್ಯ ಎಂಬುವುದನ್ನು ಮತ್ತು ಡಿಎನ್‌ಎ ಕಾರ್ಯನಿರ್ವಹಣೆಯ ಬಗ್ಗೆ ಅವರು ವಿವರಿಸಿದರು. ಕಲೆ, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ. ನಿಶಾತ್ ಆರೀಫ್ ಹುಸೇನ ಮಾರ್ಗದರ್ಶನ ಮಾಡಿದರು.

ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಸಂಯೋಜಕಿ ಶ್ರೀಮತಿ ಮನಿಷಾ ಪಾಟೀಲ್ˌ ಡಾ. ಹಮೀದ್ ಅಕ್ಬರ್, ಡಾ. ಮೈಮೂನ್, ಡಾ. ಅಥರ್, ಡಾ. ಅಬ್ರಾರ್, ಡಾ. ಜಾವೆದ್ ಡಾ. ನಗ್ಮ್, ಡಾ. ಸುನಿಲ್, ಡಾ. ಮುಜೀಬ್, ಡಾ. ಅಬ್ರಾರ್, ಡಾ. ಅತಿಯಾ, ಡಾ. ಜನಾಬ್, ಡಾ. ಸವಿತಾ, ಡಾ. ತಬಸ್ಸುಮ್, ಡಾ. ಫೆಮಿದ, ಡಾ. ನಮ್ರತಾ, ಡಾ. ಮನಿಷಾ , ಡಾ. ಮಿಲನ್, ರಮೇಶ್ ಇದ್ಡರು. ಬತೂಲ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಮಿಸಬಾ ಸ್ವಾಗತಿಸಿದರು. ಫಿರ್ದೌಸ್ ನಿರೂಪಿಸಿದರು. ಸಮಿಹಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here