ಸುರಪುರ: ಕನ್ನಡ ಭಾಷೆಗೆ ಹಿರಿದಾದ ಇತಿಹಾಸ, ಭವ್ಯ ಸಂಸ್ಕೃತಿ ಇದೆ ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡ ಎಂದು ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಹೇಳಿದರು.
ರಂಗಂಪೇಟೆಯ ಬಸವೇಶ್ವರ ಕಾಲೇಜಿನ ಸಭಾಂಗಣದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಆನ್‍ಲೈನ್ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪು ಹಾಗೂ ಪ್ರಸ್ತುತ ಕವಿ ಚಂಪಾನವರೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ಜನ ಮಹನೀಯರು ಸಾಹಿತ್ಯ ಶ್ರೀಮಂತಿಕೆಗಾಗಿ ದುಡಿದಿದ್ದಾರೆ, ಕನ್ನಡ ಎಂದರೆ ಬರಿ ಭಾಷೆಯಲ್ಲ ಬದುಕು, ಸಂಸ್ಕೃತಿ, ಪರಂಪರೆ, ಚರಿತ್ರೆ, ಇತಿಹಾಸ, ಗತವೈಭವ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಸುರಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಮಹೇಶ ಜೋಷಿರವರು 1 ಕೋಟಿ ಸದಸ್ಯತ್ವಕ್ಕೆ ಗುರಿ ಹೊಂದಿದ್ದು, ಕರ್ನಾಟಕ ಸುವರ್ಣ ಸಂಭ್ರಮ ಸಂದರ್ಭದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಸಹಸ್ರ ಸದಸ್ಯತ್ವ ಯೋಜನೆ ಹಮ್ಮಿಕೊಂಡು ಚಾಲನೆ ನೀಡಿರುವುದು ಮಹತ್ತರ ಸಂಗತಿ, ಸಾಹಿತ್ಯ ಪರಿಷತ್ತು ಕೂಡ ಅಭಿಯಾನಕ್ಕೆ ಕೈಜೊಡಿಸುತ್ತೆವೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮೈಸೂರು ರಾಜ್ಯದಿಂದ ಕರ್ನಾಟಕ ಎಂದು ನಾಮಕರಣಗೊಂದು 50 ವರ್ಷ ಪೂರೈಸುತ್ತಿರುವ ಈ ಸಂದಭ್ರದಲ್ಲಿ ಕರ್ನಾಟಕ ಸುವರ್ಣ ಸಂಭ್ರಮವನ್ನು ಸಗರನಾಡು ಸೇವಾ ಪ್ರತಿಷ್ಠಾನ ವಿಶೀಷ್ಟಪೂರ್ಣವಾಗಿ ಆಯೋಜಿಸುವ ಉದ್ದೇಶಹೊಂದಿ ಯಾದಗಿರಿ ಜಿಲ್ಲೆಯಲ್ಲಿ 1000 ಜನ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವ ನೊಂದಣಿಮಾಡಿಸುವ ಸಹಸ್ರ ಸದಸ್ಯತ್ವ ಅಭಿಯಾನ ಯೋಜನೆ ಹೊಂದಿದ್ದು, ಇಂದು ಚಾಲನೆ ನೀಡಲಾಗಿದೆ ಬರುವ ದಿನಗಳಲ್ಲಿ ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆ, ಕಾಲೇಜು, ತರಬೇತಿ ಕೇಂದ್ರ, ಸ್ನಾತಕೊತ್ತರ ಮಹಾವಿದ್ಯಾಲಯ, ಸಹಕಾರಿ ಮತ್ತು ರಾಷ್ಟ್ರಿಕೃತ ಬ್ಯಾಂಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳಿ ಗೂ, ವಿದ್ಯಾರ್ಥಿಗಳಿಗೂ ಕನ್ನಡ ಆಸಕ್ತರೆಲ್ಲರಿಗೂ ಸದಸ್ಯರನ್ನಾಗಿಸುವ ಯೋಜನೆ ಹೊಂದಿದ್ದೆವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಂಪೇಟ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಸೂಗುರೇಶ ವಾರದ, ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಶರಣಯ್ಯ ಬಳ್ಳುಂಡಗಿಮಠ ಅವರನ್ನು ಸಗರನಾಡು ಸೇವಾ ಪ್ರತಿಷ್ಠಾನವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶಹಾಪೂರದ ಕಲಾವಿಧ ಸುನೀಲ ಕುಮಾರ ಸಿರಣಿ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಿತು, ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ, ಮುಖಂಡರಾದ ಶಿವಶರಣಪ್ಪ ಹೆಡಿಗಿನಾಳ, ಜಗದೀಶ ಮಾನು, ವೆಂಕಟೇಶ ದೇವಿಕೇರಾ, ಶ್ರೀಕಾಂತ ರತ್ತಾಳ, ರುದ್ರಪ್ಪ ಕೆಂಭಾವಿ, ಚಂದ್ರಶೇಖರ ಕಕ್ಕೆರಾ, ನವೀನ ಜುಜಾರೆ, ಶರಣು ಸಜ್ಜನ್ ಸೇರಿದಂತೆ ಇತರರಿದ್ದರು, ಶೃತಿ ಹಿರೇಮಠ ನಿರೂಪಿಸಿದರು, ಬಲಭಿಮ ಪಾಟೀಲ ಸ್ವಾಗತಿಸಿದರು, ಹಣಮಂತ್ರಯ ದೇವತ್ಕಲ್ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…