ಬೀದರ್; ಕುಶಲಕರ್ಮಿಗಳು ಅಭಿವೃದ್ದಿಯಾಗದಿದ್ದರೆ ದೇಶದ ಆರ್ಥಿಕ ಪ್ರಗತಿಗೆ ಮಾರಕ ಎಂದು ಅರಿತ ಪ್ರಧಾನಿ ನರೇಂದ್ರ ಮೋದಿ ಅವರು ಕುಶಲಕರ್ಮಿಗಳ ಅಭಿವೃದ್ದಿಗೆ ಪಿ.ಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದಾರೆ ಈ ಯೋಜನೆ ಲಾಭ ಜಿಲ್ಲೆಯ ಹೆಚ್ಚಿನ ಜನರು ಪಡೆಯಬೇಕು ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವರಾದ ಭಗವಂತ ಖೂಬಾ ಹೇಳಿದರು.
ಅವರು ಶನಿವಾರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ಪಿಎಂ- ವಿಶ್ವಕರ್ಮ ಯೋಜನೆಯಡಿ ವೃತ್ತಿಪರ ಕುಶಲಕರ್ಮಿಗಳ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಯಕದಲ್ಲಿಯೇ ಸ್ವರ್ಗವಿದೆ ಎಂದು ಅರಿತಿದ್ದ ಬಸವನಣ್ಣನವರ 12ನೇ ಶತಮಾನದಲ್ಲಿಯೆ ಎಲ್ಲಾ ವೃತ್ತಿಯವರಿಗೂ ಒಗ್ಗೂಡಿಸುವಂತೆ ಮಾಡಿದರು. ಹಿಂದಿನಿಂದ ಮಾಡಿಕೊಂಡು ಬಂದಿರುವ ವೃತ್ತಿಯನ್ನು ಇಂದು ಬೀಡಲಾಗದು, ಆದರೆ ಹಿಂದಿನ ಮಾದರಿಯಲ್ಲಿ ವೃತ್ತಿ ನಿರ್ವಹಿಸಿದರೆ ಇಂದು ಹೊಟ್ಟೆ ತುಂಬದು, ಪ್ರಸ್ತುತ ದೇಶದಲ್ಲಿ ಸ್ಪರ್ಥಾತ್ಮಕ ಯುಗವಿದ್ದು ಅದಕ್ಕೆ ತಕ್ಕಂತೆ ಕುಶಲಕರ್ಮಿಗಳು ತಮ್ಮ ಕೌಶಲ್ಯದಲ್ಲಿ ವೃದ್ಧಿಯಾಗಬೇಕಾಗಿದೆ ಈ ಸಮಸ್ಯೆಯನ್ನು ಪಿ.ಎಂ ವಿಶ್ವಕರ್ಮ ಯೋಜನೆ ನೀಗಿಸಲಿದೆ ಎಂದು ಹೇಳಿದರು.
ಈ ಸಮಾಜಗಳು ಒಂದು ಕ್ಷಣ ತನ್ನ ಕಾಯಕ ನಿಲ್ಲಿಸಿಬಿಟ್ಟರೆ ಇಂದು ನಮ್ಮ ದೇಶದ ಪರಿಸ್ಥಿತಿ ಏನಾಗಬಹುದು ಎಂದು ನಾವೇಲ್ಲರೂ ವಿಚಾರ ಮಾಡಬೇಕಿದೆ, ಈ ಯೋಜನೆಯಡಿ ಒಟ್ಟು 18 ವೃತ್ತಿಪರರಿಗಾಗಿ ಮಾಡಲಾಗಿದೆ, ಕಾರ್ಪೇಂಟರಗಳು (ಬಡಿಗೆತನ) ಟೈಲರ್ / ದರ್ಜಿ, ಧೋಬಿ ಕೆಲಸ ಮಾಡುವವರು (ಅಗಸರು) ಕ್ಷೌರಿಕ ವೃತ್ತಿ / ಸವಿತಾ ಸಮಾಜ, ಕಂಬಾರರು, ಕುಂಬಾರರು, ಅಕ್ಕಸಾಲಿಗರು (ಚಿನ್ನದ ಕೆಲಸ), ಚಮ್ಮಾರರು, ಮನೆ ಕಟ್ಟುವವರು, ಕಲ್ಲಿನ ಮೂರ್ತಿ ತಯ್ಯಾರಕರು, ಹೂ, ಹಾರ ತಯ್ಯಾರಕರು, ಚಾಪೆ/ಸೆಣಬಿನ ಕೆಲಸ/ ಪೂರಕೆ ತಯ್ಯಾರಕರು, ಸಾಂಪ್ರಾದಾಯಿಕ ಆಟಿಕೆ/ಗೊಂಬೆ ತಯ್ಯಾರಕರು, ಮೀನು ಬಲೆ ತಯ್ಯಾರಕರು, ದೋಣಿ ಕಟ್ಟುವವರು, ಟೂಲ್ ಕೀಟ್ ಮೇಕರ್, ಬೀಗದ ಕೆಲಸ,ಕಬ್ಬಿಣದ ಆಯುಧಗಳು ತಯ್ಯಾರು ಮಾಡುವವರಿಗೆ ತರಬೇತಿ ನೀಡಿ, 3 ಲಕ್ಷದವರೆಗೆ ಗ್ಯಾರಂಟಿ ಇಲ್ಲದೆ ಸಾಲ ನೀಡಲಾಗುತ್ತಿದೆ, ಈ ಸಾಲಕ್ಕಾಗಿ ಫಲಾನುಭವಿಗಳು ಬ್ಯಾಂಕಿಗೆ ಸಾಲ ತಿರಿಸಿದ ಮೇಲೆ ಕಟ್ಟಿದ ಬಡ್ಡಿ ಹಣಕ್ಕೆ 0.5% ಹೆಚ್ಚಿನ ಬಡ್ಡಿ ಹಣ, ಬಡ್ಡಿ ಸಹ ವಾಪಸ್ಸು ನೀಡಲಾಗುತ್ತದೆ.
ಈ ಎಲ್ಲಾ ಸಮಾಜಗಳ ಜನರು ತುಂಬಾ ಸೂಕ್ಷ್ಮ ಸಮಾಜದವರಾಗಿದ್ದಾರೆ, ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕುವ ಸಮಾಜವಾಗಿದೆ, ಇವರನ್ನು ಆರ್ಥಿಕವಾಗಿ ಬೆಳೆಸುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೊಜನೆಯಡಿ ನಮ್ಮ ಜಿಲ್ಲೆಯಲ್ಲಿರುವ ಅಂದಾಜು 1.5ಲಕ್ಷ ಜನರಿಗೆ ದೊರಕಬೇಕಾಗಿದೆ, ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು, ಇದೊಂದು ಪುಣ್ಯದ ಕೆಲಸವಾಗಿದೆ, ಈ ಸಮಾಜದ ಅಸೊಷಿಯೇಷನ್ ಪ್ರಮುಖರು ಹಾಗೂ ಅಧಿಕಾರಿಗಳು ಎಲ್ಲರೂ ಸೇರಿ ಒಗಟ್ಟಾಗಿ ಕೆಲಸ ಮಾಡಬೇಕಾಗಿದೆ, ಯಾರೂ ಎಷ್ಟೆ ಪಾಪ ಮಾಡಿದವರು ಇದ್ದರು, ಈ ಸಮಾಜದ ಜನರ ಕೆಲಸಗಳು ಮಾಡಿದರೆ ಅವರ ಪಾಪ ಕಳೆದು, ಪುಣ್ಯ ಸಿಗುತ್ತದೆ, ದೇಶದ ಬುನಾದಿಯಾಗಿರುವ ಈ ಎಲ್ಲಾ ಸಮಾಜದವರನ್ನ ಬೆಳೆಸುವ, ಗೌರವಿಸುವ ಜವಬ್ದಾರಿ ನಮ್ಮೇಲ್ಲರದ್ದಾಗಿದೆ ಎಂದು ತಿಳಿಸಿದರು.
ಪಿ.ಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ವೃತಿಪರ ಕುಶಲಕರ್ಮಿಗಳಿಗೆ ತರಬೇತಿ, 15 ಸಾವಿರ ವರೆಗಿನ ಮೌಲ್ಯದ ವೃತ್ತಿ ಉಪಕರಣಗಳು, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಡಿಜಿಟಲ್ ಮಾರ್ಕೆಟ್ ವೇದಿಕೆ ಒದಗಿಸಲಾಗುವುದು ಎಂದರು.
ಕಳೆದ ಒಂಬತ್ತು ವರ್ಷಗಳಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಲಾಭವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದರ ಲಾಭ ಪಡೆದು ದೇಶದ ಅನೇಕ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ತಾವೇಲ್ಲರೂ ಸಹ ಈ ಯೋಜನೆಯಡಿ ನೊಂದಣಿ ಮಾಡಿಕೊಂಡು, ಅಗತ್ಯ ದಾಖಲೆಗಳು ನೀಡಿ, ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಎಲ್ಲರಲ್ಲಿ ವಿನಂತಿಸಿಕೊಂಡರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೀಲ್ಪಾ.ಎಂ ಮಾತನಾಡಿ,ಜಿಲ್ಲೆಯಲ್ಲಿ ಪಿ.ಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಾಕಷ್ಟು ಕುಶಲಕರ್ಮಿಗಳು ನೋಂದಣಿ ಮಾಡಿಸಿಕೊಂಡಿದ್ದು. ಇನ್ನು ಹೆಚ್ಚಿನ ಕುಶಲಕರ್ಮಿಗಳು ಇದರ ಲಾಭ ಪಡೆಯುವಂತಾಗಲು ಪಿ.ಎಂ ವಿಶ್ವಕರ್ಮ ಯೋಜನೆ ಕುರಿತು ಇನ್ನು ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನ್ನುಳಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೆಶಕ ಬಿ.ಎಸ್. ಪಾಟೀಲ್,ಲೀಡ ಬ್ಯಾಂಕ್ ವ್ಯವಸ್ಥಾಪಕ ಸಂಜಿವಕುಮಾರ, ಬೀದರ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು,ಜಿಲ್ಲೆಯ ವಿವಿಧ ವೃತ್ತಿಪರ ಕುಶಲಕರ್ಮಿ ಸಂಘಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…