ಕಲಬುರಗಿ: ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲಾ ಹಟಗಾರ ಸಮಾಜದಿಂದ ಭಾನುವಾರ ವಿಶೇಷ ಸಭೆ ಜರುಗಿತು.
ಕರ್ನಾಟಕ ರಾಜ್ಯ ಹಟಗಾರ ಸಮಾಜ ಸಂಘಟನೆ ದೃಷ್ಟಿಯಿಂದ, ಸಮಾಜದ ಏಳಿಗೆಗೆ ಮತ್ತು ಅಭಿವೃದ್ಧಿ ಗಾಗಿ, ವರ್ಷವಿಡಿ ಹತ್ತಾರು ಕಾರ್ಯಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಪ್ರತಿಯೊಂದು ಹಟಗಾರ ಮನೆ ಸದಸ್ಯರಿಗೆ ಅನುಕೂಲವಾಗುವಂತೆ ಹೊಸ ಬೆಳಕಿನಡೆ, ನಮ್ಮ ಸಮಾಜದ ನಡೆ, ಎನ್ನುವ ಘೋಷ ವಾಕ್ಯದೊಂದಿಗೆ ಸಭೆ ಪ್ರಾರಂಭಿಸಲಾಯಿತು.
ಮೊದಲಿಗೆ, ಕರ್ನಾಟಕ ರಾಜ್ಯ ಹಟಗಾರ ಸಮಾಜದ ಸದಸ್ಯ ಶಿವಲಿಂಗಪ್ಪಾ ಅಷ್ಟಗಿ, ಸದಸ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಪಾಲ್ಗೊಂಡ ಗುಲ್ಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಚನ್ನಮಲ್ಲಪ್ಪ ನಿಂಬೆಣ್ಣಿ ಯವರು, ನಮ್ಮ ಸ್ಥಾನಿಕ ಸಂಘ 2004 ರಲ್ಲಿ ನೊಂದಣಿ ಗೊಂಡು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ, ಆದರೂ ಸಂಘಟನೆ ದೃಷ್ಟಿಯಿಂದ ರಾಜ್ಯ ಸಂಘದಲ್ಲಿ ಸೇರ್ಪಡೆ ಗೊಳ್ಳಲ್ಲೂ ಇಚ್ಚೆ ಇದೆ. ಇದನ್ನು ನಮ್ಮ ಸಂಘದಲ್ಲಿ ಸೂಕ್ತವಾಗಿ ಚರ್ಚಿಸಿ, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಶಕ್ತಿಯುತಗೊಳ್ಳಲ್ಲೂ ರಾಜ್ಯಾಧ್ಯಕ್ಷ ಅಶೋಕ್ ಅಂಕದ ರವರಿಗೆ ಪತ್ರ ಬರೆದು ತಿಳಿಸಿ, ಒಗ್ಗಟ್ಟು ಪ್ರದರ್ಶಿಸಿಲು ಸಹಕಾರ ಬಯಸುತೇನೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕಿನ ಸಂಘಗಳನ್ನು ರಾಜ್ಯ ಸಂಘದ ಸಂಘಟನೆಯಲ್ಲಿ ಜೋಡಿಸಿದರೆ ಮಾತ್ರ ಸಮಾಜ ಇನ್ನೂ ಬೆಳಕಿಗೆ ಬರಲು ಸಾಧ್ಯವಾಗುತದೆ ಎಂದು ಹಿರಿಯ ಸದಸ್ಯ ಚೌಡೇಶ್ವರಿ ಸಹಕಾರ ಸಂಘದ ಶಿವ ಶರಣಪ್ಪ ಮುಂಡರ್ಕಿ ತಿಳಿಸಿದರು. ರಾಜ್ಯ ಸದಸ್ಯರಾದ ಶಾಂತಕುಮಾರ ಗೌರ, ಹಿರಿಯರು ಹೇಳಿದ ಮಾತುಗಳು ನಮಗೆ ಮಾರ್ಗವಿದಂತೆ ಅವುಗಳನ್ನು ಅನುಮೋದಿಸುತೇನೆ ಎಂದರು.
ಸಮಾಜದ ಹಿರಿಯ ಲೇಖಕರಾದ ಸೂರ್ಯಕಾಂತ ಸೊನ್ನದ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಂಸ್ಥಾಪಕ ಅಧ್ಯಕ್ಷ ಆರ್. ಸಿ.ಘಾಳೆ ಯವರ ಜೊತೆ ಗೂಡಿ ದಶಕದ ಹಿಂದೆ ಸಮಾಜ ಸಂಘಟನೆ, ವಿದ್ಯಾ ಸಂಸ್ಥೆ, ಗುರು ಪೀಠ ಸ್ಥಾಪನೆ ಕಾರ್ಯಕ್ಕೆ ತನು, ಮನ, ಧನದಿಂದ ಅವರ ಜೊತೆ ಸೇವೆ ಗೈದಿದ್ದೇನೆ ಎಂದು ತಿಳಿಸಿದರು. ಪ್ರಜ್ಞಾವಂತ ಸಮಾಜ, ಸದಾ ಹಿರಿಯರನ್ನು ಗೌರವಿಸಬೇಕು ಮತ್ತು ಯಾರನ್ನು ಕಡೆಗಣಿಸಬಾರದು ಎಂದು ಕಿವಿಮಾತು ಹೇಳಿದರು.
ರಾಜ್ಯದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ಮಾತನಾಡಿ ಎರಡು ದಶಕಗಳಿಂದ ಸಮಾಜ ಸಂಘಟನೆ ಸಮಾಜದ ಹೆಮ್ಮೆ ಪಡುವ ವಚನ ಸಾಹಿತ್ಯ ಪಿತಾಮಹ ಫ.ಗು. ಹಳಕಟ್ಟಿ ಯವರಿಗೆ ಸರ್ಕಾರ ಸೂಕ್ತವಾಗಿ ಪರಿಗಣಿಸಿ ಗೌರವ ನೀಡುತ್ತಿದೆ. ಮುಂದೆ ಕೂಡಾ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಸಮಾಜ ಸಂಘಟನೆ ಮಾಡಿದರೆ ಮಾತ್ರ ನಮ್ಮ ಹಕ್ಕು, ಪ್ರಾತಿನಿಧ್ಯ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಡಾ. ಬಸವರಾಜ ಚನ್ನಾ ವಂದಿಸಿದರು, ವಿಶೇಷ ಸಭೆಯಲ್ಲಿ ರಾಜ್ಯ ಸಂಘದ ಸದಸ್ಯರಾದ ಕ್ಷೀರಾಲಿಂಗ ರೂಗಿ, ಶ್ರವಣ ಕುಮಾರ ಮುನ್ನೋಳ್ಳಿ, ಮ್ಯಾಳಗಿ ಚಂದ್ರಶೇಖರ್ ಅಲ್ಲದೆ ಸಮಾಜದ ಇತರರು ಪಾಲ್ಗೊಂಡಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…