ಕಲಬುರಗಿ: ಕೆಲವರಿಗೆ ಬಾಯಿಚಪಲ ಮಾತನಾಡುತ್ತಾರೆ. ದೇವರು ನಾಲಿಗೆ ಕೊಟ್ಟಿದ್ದಾನೆ ಉದ್ದ ಚಾಚುತ್ತಾರೆ, ಬಾಯಿ ಕೊಟ್ಟಿದ್ದಾನೆ ಆಗಲ ಮಾಡಿ ಏನೇನೋ ಮಾತನಾಡುತ್ತಾರೆ. ಆ ಬಗ್ಗೆ ನಾನು ಏನು ಹೇಳುವುದಿಲ್ಲ. ಯಾಕೆಂದರೆ, ನನ್ನ ಹಣೆಬರಹ ಬರೆಯುವವರು ನೀವು ನನ್ನ ಪರವಾಗಿವಾಗಿದ್ದೀರಿ. ಸಾಮೂಹಿಕ ಬೆಂಬಲ ಘೋಷಿಸಿದ್ದೀರಿ ಹಾಗಾಗಿ ನಿಮಗೆ ನಾನು ಆಭಾರಿಯಾಗಿದ್ದೇನೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಆರ್ಯ ಈಡಿಗ ಸಮದಾಯದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಸಂವಿಧಾನದ ಅಡಿಯಲ್ಲಿ ಎಲ್ಲ ಹಿಂದುಳಿದ, ದಲಿತ ಹಾಗೂ ಇತರೆ ಎಲ್ಲ ವರ್ಗಗಳಿಗೆ ಮೀಸಲಾತಿ ಒದಗಿಸಿದೆ. ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದರೆ ಎಲ್ಲ ಸೌಲಭ್ಯಗಳು ರದ್ದಾಗಲಿವೆ. ಈ ಬಗ್ಗೆ ಎಚ್ಚರವಹಿಸಿ, ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನನಗೆ ಮತ ನೀಡುವ ಮೂಲಕ ಸಂವಿಧಾನವನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.
ಸಚಿವೆ ಜಯಮಾಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದಲ್ಲಿ ಯಾರಿಗಾದರೆ ಹೆದರಿದ್ದರೆ ಅದು ಖರ್ಗೆ ಅವರಿಗೆ ಮಾತ್ರ. ಖರ್ಗೆ ಅವರು ಸಂಸತ್ತಿನಲ್ಲಿ ಮಾತನಾಡಿ ಸರಕಾರದ ಸಾಧನೆಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರೆ, ಮೋದಿ ಉತ್ತರಿಸುವುದೇ ಇಲ್ಲ ಎಂದು ಟೀಕಿಸಿದರು.
ಬಂಜಾರ ಸಮುದಾಯಕ್ಕೆ ಖರ್ಗೆ ಅವರ ಕೊಡುಗೆ ಏನು ಎಂದು ಜಾಧವ್ ಪ್ರಶ್ನೆ ಮಾಡ್ತಾರೆ. ನೀವೆ ಅಧಿಕಾರದಲ್ಲಿ ಇದ್ದರಲ್ಲ ಜಾಧವ್ ಅವರು ಚಿಂಚೋಳಿ ಯಲ್ಲಿ ಅದೇ ಬಂಜಾರ ಸಮುದಾಯ ಮಹಿಳೆಯರು ಹೊಟ್ಟೆ ಪಾಡಿಗೆ ದೂರದ ಊರುಗಳಿಗೆ ವಲಸೆ ಹೋಗುತ್ತಿದ್ದರೆ ನೀವೇನು ಕ್ರಮ ಕೈಗೊಂಡಿರಿ ಎಂದು ಪ್ರಶ್ನಿಸಿದರು.
ಕಳೆದ ಮೂರು ದಶಕಗಳಿಂದ ಅಧಿಕಾರದಲ್ಲಿದ್ದರಲ್ಲ ಅವರು ಈಡಿಗ ಸಮುದಾಯ ಭವನ ನಿರ್ಮಾಣ ಮಾಡಿಲ್ಲವಲ್ಲ ಯಾಕೆ? ಖರ್ಗೆ ಅವರನ್ನು ಕೇಳಿದ್ದರೆ ಕೊಡುತ್ತಿರಲಿಲ್ಲವೇ? ಎಂದು ಮಾಲೀಕಯ್ಯ ಗುತ್ತೇದಾರ ಹೆಸರು ಹೇಳದೆ ಕೇಳಿದರು.
ವೇದಿಕೆಯ ಮೇಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್, ಕೆ.ಬಿ.ಶಾಣಪ ಶರಣಪ್ಪ ಮಟ್ಟೂರು, ಶರಣಯ್ಯ ಗಾರಂಪಳ್ಳಿ, ಜಗದೇವ ಗುತ್ತೇದಾರ ಸೇರಿದಂತೆ ಮತ್ತಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…