ಕಲಬುರಗಿ: ದೇಶದ ನಾಗರಿಕರಿಗೆ ಸಮಾನ ಅವಕಾಶ ಹಾಗೂ ಹಕ್ಕು ಒದಗಿಸುವ ಸಂವಿಧಾನವನ್ನು ತೆಗೆದುಹಾಕಲು ವಿಛಿದ್ರಕಾರಕ ಶಕ್ತಿಗಳು ಹವಣಿಸುತ್ತಿವೆ.ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದ್ದು ಈ ಕುರಿತು ಜನರು ಎಚ್ಚೆತ್ತುಕೊಳ್ಳಬೇಕು ಎಂದು ಕಲಬುರಗಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ನಗರದ ಸುಂದರ ನಗರದಲ್ಲಿ ಏರ್ಪಡಿಸಲಾಗಿದ್ದ ಡೋಹರಕಕ್ಕಯ್ಯ ಸಮಾಜದ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಸವಣ್ಣ, ಹರಳಯ್ಯ ಕಕ್ಕಯ್ಯರಂತ ಶರಣರು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿ ಅಲ್ಲಮಪ್ರಭು ಅವರ ಅನುಭವ ಮಂಟಪದಲ್ಲಿ ಇದನ್ನೇ ಪ್ರತಿಪಾದಿಸಿದರು. ಆದರೆ ಸಮಾಜವಿರೋಧಿ ಶಕ್ತಿಗಳು ಅವರನ್ನು ಬಲಿಪಡೆದವು. ಆಧುನಿಕ ಸಮಾಜಕ್ಕೆ ಅನುಗುಣವಾಗಿ ಸಂವಿಧಾನ ರಚನೆಯಾಯಿತು ಹಾಗಾಗಿ ಎಲ್ಲ ಪ್ರಜೆಗಳು ಸಮಾನ ಅವಕಾಶ ನೀಡಿದೆ. ಇದನ್ನೇ ಬದಲಾಯಿಸಿದರೆ ದೇಶದ ನಾಗರಿಕರಿಗೆ ಅಪಾಯ ತಂದೊಡ್ಡಲಿದೆ ಎಂದು ಎಚ್ಚರಿಸಿದರು.
ಆರ್ಟಿಕಲ್ 371 (ಜೆ) ಅನ್ವಯ ಈ ಭಾಗದ 31,000 ಅಭ್ಯರ್ಥಿಗಳಿಗೆ ಸರಕಾರಿ ನೌಕರಿ ಸಿಕ್ಕಿದೆ, 800 ಜನ ವೈದ್ಯಕೀಯ ಸೀಟು ಪಡೆದುಕೊಂಡಿದ್ದಾರೆ ಎಂದು ಜನರು ಪಡೆದ ಅನುಕೂಲವನ್ನು ವಿವರಿಸಿ, ನಾನು ಸಂಸದನಾದ ನಂತರ ಸಂವಿಧಾನದ ತಿದ್ದುಪಡಿಗೆ ಸರ್ವಪ್ರಯತ್ನ ಮಾಡಿ ಈ ಕೆಲಸ ಮಾಡಿಕೊಟ್ಟಿದ್ದೇನೆ ಎಂದರು. ನನ್ನ ಅವಧಿಯಲ್ಲಿ ಈ ಭಾಗದ ಅಭಿವೃದ್ದಿಗೆ ಸಾಕಷ್ಟು ಶ್ರಮವಹಿಸಿದ್ದೇನೆ. ಹಾಗಾಗಿ ನೀವು ಈ ಸಲ ಮತ್ತೊಮ್ಮೆ ಓಟು ಹಾಕುವ ಮೂಲಕ ಮತ್ತಷ್ಟು ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಅಶೋಕಕುಮಾರ ಮುನೋಳಿ ಮಾತಮಾಡಿ, ಖರ್ಗೆ ಅವರು ಪಾರದರ್ಶಕ ವ್ಯಕ್ತಿತ್ವ, ದಣಿವರಿಯದ ಕೆಲಸಗಾರ, ಅದ್ಭುತ ಆಡಳಿತಗಾರರು ಎಂದು ಪ್ರಶಂಸಿದರು. ಖರ್ಗೆ ಸಾಹೇಬರಂತ ಆಡಳಿತಗಾರ ಮತ್ತೊಮ್ಮೆ ಗೆದ್ದು ಬಂದು ಸಂಸತ್ತಿನಲ್ಲಿ ಕಲಬುರಗಿಯನ್ನು ಪ್ರತಿನಿಧಿಸಿ ಈ ಭಾಗವನ್ನು ಮತ್ತಷ್ಟು ಅಭಿವೃದ್ದಿ ಮಾಡಲು ನೀವು ಅವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ಅತ್ಯಂತ ಹೆಚ್ಚಿನ ಅನುದಾನ ಬಳಕೆ ಮಾಡಿಕೊಂಡು ತಾವು ನಿರ್ವಹಿಸಿದ ಖಾತೆಗಳ ಅಡಿಯಲ್ಲಿ ಅಭಿವೃದ್ದಿಗೊಳಿಸಿ ಆಡಳಿತವನ್ನು ಜನರ ಬಳಿಗೆ ಕೊಂಡ್ಯೊಯ್ದದಿದ್ದಾರೆ ಎಂದರು. ವೇದಿಕೆಯ ಮೇಲೆ ನರೇಶ ಕಟ್ಕೆ, ಬಾಬುರಾವ ಒಂಟಿ, ಶ್ರೀಕಾಂತ್ ಕಟ್ಕೆ, ದತ್ತಾರಾಮ ಕಟ್ಕೆ, ಬಾಬು ಪವಾರ್ ಸೇರಿದಂತೆ ಮತ್ತಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…