ಕಲಬುರಗಿ: ಬರ ನಿರ್ವಾಹಣೆ ಸೇರಿದಂತೆ ರಾಜ್ಯದ ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ಹಿಂದೇಟು ಹಾಕಿರುವ ರಾಜ್ಯ ಸರ್ಕಾರ ಕೇಂದ್ರದತ್ತ ಬೆರಳು ತೋರಿಸದೆ, ತನ್ನ ಪಾಲಿನ ಕರ್ತವ್ಯ ನಿರ್ವಹಿಸದೇ ಕಾಲಹರಣ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಅವರು ಇಂದಿಲ್ಲಿ ಹರಿಹಾಯ್ದರು.
ತಾಲೂಕಿನ ಕಡಗಂಚಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಪರಿಶೀಲಿಸಿದರು ಅಲ್ಲದೆ ಈ ಸಂದರ್ಭಧಲ್ಲಿ ರೈತರು ತೋಡಿಕೊಂಡ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.
ವಿಪಕ್ಷನಾಯಕನಾಗಿ ಮೊದಲು ಬಾರಿಗೆ ಕಲಬುರಗಿ ಜಿಲ್ಲೆ ಒಳಗೊಂಡು ಆಳಂದ ತಾಲೂಕು ಕಡಗಂಚಿಗೆ ಬಂದಿದ್ದು, ಬರ ಆವರಿಸಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಈ ಕುರಿತು ರೈತರು ಬೇಡಿಕೆಗಳನ್ನು ಪೂರೈಸುವಂತೆ ಮುಂಬರುವ ಬೆಳಗಾವಿ ಅಧೀವೇಶನದಲ್ಲಿ ಪ್ರಸ್ತಾಪಿಸಿ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ನಾನೂ ರೈತ ಕುಟುಂಬದಲ್ಲೇ ಬೆಳೆದ ಬಂದವನು ರೈತರ ಸಮಸ್ಯೆ ನನಗೆ ಅರಿವಿದೆ. ಈ ಭಾಗದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಮಾಹಿತಿ ಕಲೆಹಾಕಲಾಗುವುದು ಎಂದು ನುಡಿದರು.
ಬೆಳೆ ಹಾನಿ ಪರಿಹಾರ ವಿಳಂಬ ಮಾಡದೇ ತಕ್ಷಣವೇ ಜಾರಿಗೊಳಿಸಬೇಕು. ಪಂಪಸೆಟ್ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಹಿಂದೇಟು ಹಾಕುವುದು ಸರಿಯಲ್ಲ. ಕಿಂಚಿತ್ತಾದರು ರಾಜ್ಯದ ರೈತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದರೆ ಬಿಜೆಪಿ ಹೋರಾಟ ಕೈಗೊಳ್ಳುವ ಮೊದಲೇ ಬೇಡಿಕೆಗೆ ಸ್ಪಂದಿಸಲಿ ಎಂದು ಅವರು ಆಗ್ರಹಿಸಿದರು.
ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವನಾಗಿ ರೈತರಿಗೆ ಬೆಳೆ ಪರಿಹಾರ ದುಪ್ಪಟ್ಟು ಕೊಡಲಾಗಿದೆ. ಈ ಬಾರಿ ಕೊಡಲು ಏನಾಗಿದೆ ಎಂದು ಪ್ರಶ್ನಿಸಿದ ಅವರು, ಬರುವ ಅಧಿವೇಶನದಲ್ಲಿ ಬೆಳೆ ಪರಿಹಾರ, ಪಂಪಸೆಟ್‍ಗಳಿಗೆ ಸಮಪರ್ಕ ವಿದ್ಯುತ್ ಪೂರೈಕೆ ಹಾಗೂ ರೈತರ ಬೆಳೆ ಸಾಲಮನ್ನಾಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರೈತರಿಗೆ ನ್ಯಾಯ ಕೊಡಿಸಲು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಬಲಗೂಡಿಸಿ ವಿಧಾನಸಭೆ ಒಳ ಮತ್ತು ಹೊರಗೂ ಹೋರಾಟ ರೂಪಿಸಲಾಗುವುದು ಎಂದು ಅವರು ಹೇಳಿದರು.
ಮಾಜಿ ಶಾಸಕರಿಂದ ವಿವರಣೆ: ವಿಪಕ್ಷ ನಾಯಕ ಆರ್. ಅಶೋಕ ಅವರು ತಾಲೂಕಿನ ಕಡಗಂಚಿಗೆ ಆಗಮಿಸಿದ್ದ ವೇಳೆ ಜೊತೆಯಲ್ಲಿದ್ದ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು, ಮಳೆ ಬೆಳೆ ಇಲ್ಲದೆ ಜನ ಜಾನುವಾರು ಸಮಸ್ಯೆ ಎದುರಾಗಿದೆ. ಬೆಳೆ ಪರಿಹಾರ, ಬೆಳೆ ವಿಮೆ ಪಂಪಸೆಟ್ ರೈತರಿಗೆ ಸಮಪರ್ಕ ವಿದ್ಯುತ್ ಪೂರೈಕೆ, ಬರ ಕಾಮಗಾರಿಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಕುಲಂಕಶವಾಗಿ ಗುತ್ತೇದಾರ ವಿವರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶರಣು ಸಲಗರ, ಬಸವರಾಜ ಮತ್ತಿಮಡು, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಪಕ್ಷದ ಮುಖಂಡರಾದ ಅಮರನಾಥ ಪಾಟೀಲ, ಚಂದು ಪಾಟೀಲ ಶಿವರಾಜ ಪಾಟೀಲ ರದ್ದೇವಾಡಗಿ, ಸುರೇಶ ಸಜ್ಜನ, ವಿದ್ಯಾಸಾಗರ ಕುಲಕರ್ಣಿ, ವೀರಣ್ಣಾ ಮಂಗಾಣೆ, ಸಂತೋಷ ಹಾದಿಮನಿ, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಕೆಕೆಆರ್‍ಟಿಸಿ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್, ಮಂಡಲ ಅಧ್ಯಕ್ಷ ಆನಂದ ಪಾಟೀಲ ಸೇರಿ ಜಿಲ್ಲೆಯ ಬಿಜೆಪಿ ಶಾಸಕರು, ಮಾಜಿ ಶಾಸಕರು ಬಿಜೆಪಿ ಮುಖಂಡರು ಸ್ಥಳೀಯ ರೈತ ಬಾಂಧವರು ಉಪಸ್ಥಿತರಿದ್ದರು.
ಅಧಿಕಾರಿಗಳಿಂದ ಮಾಹಿತಿ: ಕಡಗಂಚಿಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ ಅವರು ಬೆಳೆ ಸಮೀಕ್ಷೆ ಕೈಗೊಂಡ ಕುರಿತು ಹಾಗೂ ಪರಿಹಾರದ ಬಗ್ಗೆ ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಜಿಲ್ಲಾ ಕೃಷಿ ಅಧಿಕಾರಿ ಸಮದ್ ಪಟೇಲ್ ಅವರಿಂದ ಮಾಹಿತಿ ಪಡೆದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…