ಕಲಬುರಗಿ: ಅಪಘಾತವಾಗಿ ರಸ್ತೆ ಮಧ್ಯೆ ಸಾವು ಬದುಕಿನ ಮಧ್ಯ ಹೋರಾಡುತ್ತಿದ ವ್ಯಕ್ತಿಗೆ ತಮ್ಮ ERV-2 ವಾಹನ ಕೇವಲ 4 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ತಲುಪಿ ಗಾಯಾಳುಗೆ ತಮ್ಮ 112 ವಾಹನದಲ್ಲೇ ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ 112 ವಾಹನದ ಫರತಾಹಬಾದ್ ಉಸ್ತುವಾರಿ ಚಂದ್ರಕಾಂತ್ ಅವರಿಗೆ ಬುಧವಾರ ಕಚೇರಿಯಲ್ಲಿ ಪೋಷಕರು ಸನ್ಮಾನಿಸಲಾಯಿತು.
ಬಿದ್ದಾಪುರ ಕಾಲೋನಿಯ ನಿವಾಸಿ ಡಾ. ರಮೇಶ್ ಬಾಬು ಅವರ ಪುತ್ರರಾದ ಪ್ರವಿಣ ಸಣ್ಣೂರ್, ಎಂ.ಆರ್.ಎಂ.ಸಿ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ. ತಂದೆ ತಾಯಿ ಇಬ್ಬರು ವೈದ್ಯಕೀಯ ವೃತಿಯಲ್ಲಿದ್ದಾರೆ.
ಸೆಪ್ಟೆಂಬರ್ 20 ರಂದು ರಾಮ ಮಂದಿರ ಹತ್ತಿರ ಬೆಳಿಗ್ಗೆ 7 ಗಂಟೆಗೆ ಹಂದಿ ಅಡ್ಡ ಬಂದು ಅಪಘಾತವಾಗಿ ರಸ್ತೆ ಮಧ್ಯೆ ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದ ವೇಳೆ ಗಸ್ತಿನಲ್ಲಿದ 112 ವಾಹನ ಇಂಚಾರ್ಜ್ ಫರತಾಹಬಾದ್ ಚಂದ್ರಕಾಂತ ಸಿಪಿಸಿ 140 ಮಾನವಿಯತೆ ದೃಷ್ಠಿಯಿಂದ ತಕ್ಷಣ ತಮ್ಮ ERV-2 ವಾಹನ ಕೇವಲ 4 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ತಲುಪಿ ಗಾಯಾಳುಗೆ ತಮ್ಮ 112 ವಾಹನದಲ್ಲೇ ಕರೆದುಕೊಂಡು ಜೀವ ಉಳಿಸುವ golden hour ನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ನೆರವಾಗಿದರು.
ಎರಡು ತಿಂಗಳ ಬಳಿಕ ಇದೀಗ ಪ್ರವಿಣ ತನ್ನ ಶಿಕ್ಷಣ ಮುಂದುವರೆಸಿದ್ದಾರೆ. ಪ್ರವಿಣ ಅವರ ತಂದೆಯಾದ ಡಾ. ಬಾಬುರಾವ್ ಅವರು ಆಯುಕ್ತರ ಕಚೇರಿಗೆ ಇಂದು ಭೇಟಿ ನೀಡಿ ಜೀವ ಉಳಿಸಿದ ಪೊಲೀಸ್ ಅಧಿಕಾರಿ ಚಂದ್ರಕಾಂತ ಸಿಪಿಸಿ 140 ಅಧಿಕಾರಿಗಳ ಮದ್ಯ ಸನ್ಮಾನಿಸಿ ಬೆಳ್ಳಿ ಮೂರ್ತಿ ಕಾಣಿಕೆಯಾಗಿ ನೀಡಿ ಪೊಲೀಸ್ ಇಲಾಖೆ ಹಾಗೂ 112 ಸೇವೆಗೆ ಹೊಗಳಿ ಹಾರೈಸಿ, ಇದಕ್ಕೆ ಸಹಕರಿಸಿದ ಸಮಸ್ತ ಸಿಟಿ ಕಂಟ್ರೋಲ್ ರೂಮ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ವ್ಯಕ್ತಪಡಿಸಿದರು.
ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಜೀವನ ಉಳಿಸಿದ ಚಂದ್ರಕಾಂತ ಪೊಲೀಸ್ ಕೃಜ್ಞೆತೆ ಸಲ್ಲಿಸಿದ ಅವರು ಈಡಿ ಪೊಲೀಸ್ ಇಲಾಖೆ ನಮ್ಮ ಪಾಲಿಗೆ ದೇವರ ಸ್ವರೂಪವಾಗಿದೆ ಎಂದು ಅಭಿನಂದನೆಗಳು- ಡಾ. ಬಾಬುರಾವ್, ವೈದ್ಯರು ಬಿದ್ದಾಪುರ ಕಾಲೋನಿ ಕಲಬುರಗಿ. ಸೆಪ್ಟೆಂಬರ್ 20ರಂದು ರಾಮ ಮಂದರ ಹತ್ತಿರ ನೂರಾರು ಮಂದಿ ಜಮಗೊಂಡು ಫೋಟೋ ತೆಗೆಯುತ್ತಿದ್ದರು. ತಕ್ಷಣಕ್ಕೆ ಇಳಿದು ನಮ್ಮ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶದಿಂದ ವ್ಯಕ್ತಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಅವರ ಪೋಷಕರು ಬುಧವಾರ ಕಚೇರಿಗೆ ಬಂದು ಸನ್ಮಾನಿಸಿ ಇಲಾಖೆಗೆ ಗೌರವ ಸೂಚಿಸಿದಕ್ಕೆ ಸಂತೋಷವಾಗಿದೆ. ಚಂದ್ರಕಾಂತ ಸಿಪಿಸಿ 140 ಫರತಹಬಾದ್ ಪೊಲೀಸ್ ಠಾಣೆ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…