ಕಲಬುರಗಿ: ಅಪಘಾತವಾಗಿ ರಸ್ತೆ ಮಧ್ಯೆ ಸಾವು ಬದುಕಿನ ಮಧ್ಯ ಹೋರಾಡುತ್ತಿದ ವ್ಯಕ್ತಿಗೆ ತಮ್ಮ ERV-2 ವಾಹನ ಕೇವಲ 4 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ತಲುಪಿ ಗಾಯಾಳುಗೆ ತಮ್ಮ 112 ವಾಹನದಲ್ಲೇ ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ 112 ವಾಹನದ ಫರತಾಹಬಾದ್ ಉಸ್ತುವಾರಿ ಚಂದ್ರಕಾಂತ್ ಅವರಿಗೆ ಬುಧವಾರ ಕಚೇರಿಯಲ್ಲಿ ಪೋಷಕರು ಸನ್ಮಾನಿಸಲಾಯಿತು.
ಬಿದ್ದಾಪುರ ಕಾಲೋನಿಯ ನಿವಾಸಿ ಡಾ. ರಮೇಶ್ ಬಾಬು ಅವರ ಪುತ್ರರಾದ ಪ್ರವಿಣ ಸಣ್ಣೂರ್, ಎಂ.ಆರ್.ಎಂ.ಸಿ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ. ತಂದೆ ತಾಯಿ ಇಬ್ಬರು ವೈದ್ಯಕೀಯ ವೃತಿಯಲ್ಲಿದ್ದಾರೆ.
ಸೆಪ್ಟೆಂಬರ್ 20 ರಂದು ರಾಮ ಮಂದಿರ ಹತ್ತಿರ ಬೆಳಿಗ್ಗೆ 7 ಗಂಟೆಗೆ ಹಂದಿ ಅಡ್ಡ ಬಂದು ಅಪಘಾತವಾಗಿ ರಸ್ತೆ ಮಧ್ಯೆ ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದ ವೇಳೆ ಗಸ್ತಿನಲ್ಲಿದ 112 ವಾಹನ ಇಂಚಾರ್ಜ್ ಫರತಾಹಬಾದ್ ಚಂದ್ರಕಾಂತ ಸಿಪಿಸಿ 140 ಮಾನವಿಯತೆ ದೃಷ್ಠಿಯಿಂದ ತಕ್ಷಣ ತಮ್ಮ ERV-2 ವಾಹನ ಕೇವಲ 4 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ತಲುಪಿ ಗಾಯಾಳುಗೆ ತಮ್ಮ 112 ವಾಹನದಲ್ಲೇ ಕರೆದುಕೊಂಡು ಜೀವ ಉಳಿಸುವ golden hour ನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ನೆರವಾಗಿದರು.
ಎರಡು ತಿಂಗಳ ಬಳಿಕ ಇದೀಗ ಪ್ರವಿಣ ತನ್ನ ಶಿಕ್ಷಣ ಮುಂದುವರೆಸಿದ್ದಾರೆ. ಪ್ರವಿಣ ಅವರ ತಂದೆಯಾದ ಡಾ. ಬಾಬುರಾವ್ ಅವರು ಆಯುಕ್ತರ ಕಚೇರಿಗೆ ಇಂದು ಭೇಟಿ ನೀಡಿ ಜೀವ ಉಳಿಸಿದ ಪೊಲೀಸ್ ಅಧಿಕಾರಿ ಚಂದ್ರಕಾಂತ ಸಿಪಿಸಿ 140 ಅಧಿಕಾರಿಗಳ ಮದ್ಯ ಸನ್ಮಾನಿಸಿ ಬೆಳ್ಳಿ ಮೂರ್ತಿ ಕಾಣಿಕೆಯಾಗಿ ನೀಡಿ ಪೊಲೀಸ್ ಇಲಾಖೆ ಹಾಗೂ 112 ಸೇವೆಗೆ ಹೊಗಳಿ ಹಾರೈಸಿ, ಇದಕ್ಕೆ ಸಹಕರಿಸಿದ ಸಮಸ್ತ ಸಿಟಿ ಕಂಟ್ರೋಲ್ ರೂಮ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ವ್ಯಕ್ತಪಡಿಸಿದರು.
ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಜೀವನ ಉಳಿಸಿದ ಚಂದ್ರಕಾಂತ ಪೊಲೀಸ್ ಕೃಜ್ಞೆತೆ ಸಲ್ಲಿಸಿದ ಅವರು ಈಡಿ ಪೊಲೀಸ್ ಇಲಾಖೆ ನಮ್ಮ ಪಾಲಿಗೆ ದೇವರ ಸ್ವರೂಪವಾಗಿದೆ ಎಂದು ಅಭಿನಂದನೆಗಳು- ಡಾ. ಬಾಬುರಾವ್, ವೈದ್ಯರು ಬಿದ್ದಾಪುರ ಕಾಲೋನಿ ಕಲಬುರಗಿ.
ಸೆಪ್ಟೆಂಬರ್ 20ರಂದು ರಾಮ ಮಂದರ ಹತ್ತಿರ ನೂರಾರು ಮಂದಿ ಜಮಗೊಂಡು ಫೋಟೋ ತೆಗೆಯುತ್ತಿದ್ದರು. ತಕ್ಷಣಕ್ಕೆ ಇಳಿದು ನಮ್ಮ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶದಿಂದ ವ್ಯಕ್ತಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಅವರ ಪೋಷಕರು ಬುಧವಾರ ಕಚೇರಿಗೆ ಬಂದು ಸನ್ಮಾನಿಸಿ ಇಲಾಖೆಗೆ ಗೌರವ ಸೂಚಿಸಿದಕ್ಕೆ ಸಂತೋಷವಾಗಿದೆ. ಚಂದ್ರಕಾಂತ ಸಿಪಿಸಿ 140 ಫರತಹಬಾದ್ ಪೊಲೀಸ್ ಠಾಣೆ