ಅಲ್ಟ್ರಾಟೆಕ್ ಐ.ಟಿ.ಎಫ್ ಕಲಬುರಗಿ ಓಪನ್ ಮೆನ್ಸ್ ಪುರುಷರ ಕ್ರೀಡಾಕೂಟಕ್ಕೆ ಚಾಲನೆ

ಕಲಬುರಗಿ,ನ.27; ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ US $25000 ಡಾಲರ್ ಮೊತ್ತದ ಅಲ್ಟ್ರಾಟೆಕ್ ಪ್ರಾಯೋಜಕತ್ವದ ಐ.ಟಿ.ಎಫ್ ಕಲಬುರಗಿ ಓಪನ್-2023 ಮೆನ್ಸ್ ಪುರುಷರ ಕ್ರೀಡಾಕೂಟದ ಮುಖ್ಯ ಪಂದ್ಯಗಳಿಗೆ ಮಂಗಳವಾರ ಇಲ್ಲಿ ಚಾಲನೆ ನೀಡಲಾಯಿತು.

ಚಂಪಾ ಕ್ರೀಡಾಂಗಣದ ಟೆನಿಸ್ ಕೋರ್ಟ್ ಒಂದರಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಬಲುನ್ ಗಳನ್ನು ಹಾರಿಬಿಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ವಿಧಾನ ಪರಿಷತ್ ಶಾಸಕ ಶಶೀಲ ಜಿ‌. ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಆಕಾಶ ಶಂಕರ, ಕೆ.ಎಸ್.ಎಲ್.ಟಿ.ಎ ಟೂರ್ನಾಮೆಂಟ್ ಪೀಟರ್ ವಿಜಯಕುಮಾರ, ಐ.ಟಿ.ಎಫ್ ಸೂಪರವೈಸರ್ ಪಂದ್ಯಾವಳಿಯ ಮೇಲ್ವಿಚಾರಕ ಶ್ರೀಲಂಕಾದ ಧಾರಕ ಎಲ್ಲವಾಲಾ ಅವರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ನಂತರ ಶಾಸಕ-ಅಧಿಕಾರಿ ಗಣ್ಯರು ಮುಖ್ಯ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾಪಟುಗಳು, ಅಂಪೈರ್, ಲೈನ್ ಅಂಪೈರ್, ಬಾಲ್ ಬಾಯ್ಸ್ ಗಳಿಗೆ ಹಸ್ತಲಾಘವ ಮಾಡಿ ಪಂದ್ಯಕ್ಕೆ ಶುಭ ಕೋರಲಾಯಿತು.

ಭಾರತದ ಆದಿಲ್ ಶಾ ಮತ್ತು ಆದಿಲ್ ಕಲ್ಯಾಣಪುರ ನಡುವಿನ ಮೊದಲನೇ ಮುಖ್ಯ ಪಂದ್ಯಕ್ಕೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಟಾಸ್ ಹಾರಿಸಿದರು. ಆದಿಲ್ ಕಲ್ಯಾಣಪುರ ಅವರು ಟಾಸ್ ಗೆದ್ದು ಸರ್ವ್ ಮಾಡುವುದರೊಂದಿಗೆ ಅಂತರಾಷ್ಟ್ರೀಯ ಐ.ಟಿ.ಎಫ್ ಅಧಿಕೃತ ಪಂದ್ಯಾವಳಿಗಳು ಅರಂಭವಾಯಿತು.

ನಂತರ ನಡೆದ ಸರಳ ಸಮಾರಂಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ದೇಶಗಳ ನಡುವೆ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳು ಸಹಕಾರಿಯಾಗಲಿವೆ. ಗೆಲುವು-ಸೋಲು ಕ್ರೀಡೆಯಲ್ಲಿ ಸಹಜ ಎಂದ ಅವರು ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜಿಸಿದ ಜಿಲ್ಲಾಡಳಿತದ‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಶಶೀಲ ಜಿ. ನಮೋಶಿ ಮಾತನಾಡಿ, ಸ್ಥಳೀಯ ಕ್ರೀಡಾಪಟುಗಳ ಉತ್ತೇಜನಕ್ಕೆ ಕೆ.ಕೆ.ಆರ್.ಡಿ.ಬಿ. ಮಂಡಳಿ ಅನುದಾನ ನೀಡಿ ಕೋಚ್ ನೇಮಿಸುವ ಮೂಲಕ ಪ್ರದೇಶದಲ್ಲಿ ಟೆನಿಸ್ ಬೆಳವಣಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಕೆ.ಪಿ‌.ಟಿ.ಸಿ.ಎಲ್ ಎಂ.ಡಿ. ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಮಾತನಾಡಿ, ಈ ಹಿಂದೆ ತಾವು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ 2002, 2007ರಲ್ಲಿ ಐ.ಟಿ.ಎಫ್. ಟೂರ್ನಿ ಆಯೋಜಿಸಲಾಗಿತ್ತು. ಕೋರ್ಟ್ ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯ ಇದೀಗ ಮತ್ತಷ್ಟು ಉತ್ತಮಗೊಂಡಿದೆ. ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ಪ್ರಾಯೋಜಕತ್ವದ ಅವಶ್ಯವಿರುವ ಕಾರಣ ಸ್ಥಳೀಯ ಸಿಮೆಂಟ್ ಕಂಪನಿಗಳು ಮುಂದೆ ಬರಬೇಕು ಎಂದರು.

ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಅಂತಾರಾಷ್ಟ್ರೀಯ ಟೂರ್ನಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ವಸತಿ‌ ನಿಲಯದ ಮಕ್ಕಳಿಗೆ 3 ದಿನ‌ ವಿಶೇಷ ತರಬೇತಿ ನೀಡಿ ಬಾಲ್ ಬಾಯ್ಸ್ ಆಗಿ ನಿಯೋಜಿಸಿದೆ. ಪಂದ್ಯ ವೀಕ್ಷಣೆ ಉಚಿತವಾಗಿ ಜಿಲ್ಲೆಯ ಸಾರ್ವಜನಿಕರು, ಶಾಲಾ-ಕಾಲೇಜು ಮಕ್ಕಳು ಬಂದು ಕ್ರೀಡಾಪಟುಗಳನ್ನು ಹುರಿದುಂಬಿಸಬೇಕು ಎಂದರು.

ಕಲಬುರಗಿ‌ ನಗರ ಪೊಲೀಸ್ ಆಯುಕ್ತ ಚೇತನಕುಮಾರ್ ಆರ್. ಮಾತನಾಡಿ ಬೆಂಗಳೂರು ಹೊರತುಪಡಿಸಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಹೆಚ್ಚಿನ ಟೆನಿಸ್ ಕ್ರೀಡಾಪಟುಗಳು ಇದ್ದಾರೆ ಎಂದರು.

32 ಜನ ಕ್ರೀಡಾಟಪಟುಗಳು ಕಲಬುರಗಿ ಓಪನ್ ಕಿರೀಟಕ್ಕೆ ತೀವ್ರ ಜಿದ್ದಾಜಿದ್ದಿನ ಆಟ ಇಂದಿನಿಂದ ಆರಂಭವಾಗಿದ್ದು, 8 ಜನ ಕ್ವಾಲಿಪೈ ಪಂದ್ಯವಾಡಿ ಪ್ರಮುಖ ಘಟಕ್ಕೆ ತಲುಪಿದರೆ, 20 ಜನ ಅಟಗಾರರು ಐ.ಟಿ.ಎಫ್. ರ‌್ಯಾಂಕಿಂಗ್ ಮತ್ತು 4 ಜನ ವೈಲ್ಡ್ ಕಾರ್ಡ್ ಪಡೆದು ಮುಖ್ಯ ಪಂದ್ಯಗಳಿಗೆ ನೇರ ಪ್ರವೇಶ ಪಡೆದಿದ್ದಾರೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

3 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

6 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

6 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

6 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

6 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420