ಬಿಸಿ ಬಿಸಿ ಸುದ್ದಿ

ವೈಜ್ಞಾನಿಕ ಸಂಶೋಧನೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ: ಪ್ರೊ. ಎಸ್. ಆರ್. ನಿರಂಜನ

ಕಲಬುರಗಿ: ಭವಿಷ್ಯದ ಜಗತ್ತು ಮತ್ತು ಸುಸ್ಥಿರ ಮಾನವ ಕಲ್ಯಾಣ ಸಾಧನೆಗೆ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣ, ಹೊಸ ಅವಿಷ್ಕಾರ, ಸಂಶೋಧನಾ ಪ್ರಕಟಣೆಗಳು ಹಾಗೂ ಕೌಶಲ್ಯ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಒತ್ತು ನೀಡಬೇಕಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ಎಸ್. ಆರ್. ನಿರಂಜನ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯವು ಭಾರತೀಯ ವಿಜ್ಞಾನ ಕಾಂಗ್ರೇಸ್ ಅಸೋಷಿಯೇಶನ್ ಬೆಂಗಳೂರು ಚಾಪ್ಟರ್ ಇವರುಗಳ ಸಹಯೋಗದೊಂದಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರದಿಂದ ಆಯೋಜಿಸಿದ ಎರಡು ದಿನದ “ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ದೃಷ್ಟಿಕೋನ” ರಾಷ್ಟ್ರೀಯ ಸಮ್ಮೇಳನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ವೃತ್ತಿ ಕೌಶಲ್ಯ ತಂತ್ರಜ್ಞಾನ ತರಬೇತಿ ಹಾಗೂ ಸಂಶೋಧನೆ ಸಾಧನೆಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಕಾರ್ಯಕ್ರಮ ಮತ್ತು ಯೋಜನೆ ರೂಪಿಸುತ್ತಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಗಳು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿವೆ. ಭಾರತೀಯ ವಿಜ್ಞಾನಿಗಳು ತಮ್ಮ ವೈಜ್ಞಾನಿಕ ಸಂಶೋಧನಾ ಕೊಡುಗೆಗಳಿಂದ ಇಡೀ ಜಗತ್ತನ್ನೇ ಬೆರಗುಗೊಳಿಸಿದ್ದಾರೆ. ಸ್ವಾತಂತ್ರ್ಯ ನಂತರ ಕೃಷಿ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ ಮತ್ತು ಪರಮಾಣು ಶಕ್ತಿಯಂತಹ ಕ್ಷೇತ್ರಗಳಲ್ಲಿನ ಸಾಧನೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನೂ ಉತ್ತಮ ಪ್ರಗತಿ ಸಾಧಿಸಲು ತಂತ್ರಜ್ಞಾನದ ಸ್ವದೇಶೀಕರಣಕ್ಕೆ ಉತ್ತೇಜನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹ ಹೂಡಿಕೆಯ ಅಗತ್ಯವಿದೆ. ಭಾರತವು ಇನ್ನೂ ನುರಿತ ಕೌಶಲ್ಯ ವೃತ್ತಿಪರರ ಸಮಸ್ಯೆ ಎದುರಿಸುತ್ತಿದೆ. ಕೊರತೆಯನ್ನು ಎದುರಿಸುತ್ತಿದೆ. ಅನೇಕ ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳಿಗೆ ಆಮದುಗಳ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡಬೇಕಿದೆ.

ಅಧಿಕಾರಶಾಹಿ ವರ್ಗ ಚುರುಕಾಗಿ ಕಾರ್ಯನಿರ್ವಹಿಸಬೇಕಿದೆ. ಆವಿಷ್ಕಾರ ಮತ್ತು ಉದ್ಯಮಶೀಲತೆಯಲ್ಲಿ ಬೆಳೆವಣಿಗೆಗೆ ಒಂದು ಪೋಷಕ ಪರಿಸರ ವ್ಯವಸ್ಥೆಯ ಅಗತ್ಯವಿದೆ. ಈ ಸಮಸೆಗಳನ್ನು ಮೆಟ್ಟಿ ನಿಂತಲ್ಲಿ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಲಿದೆ ಎಂದು ಪ್ರೊ. ಎಸ್.ಆರ್.ನಿರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತವು ಇಂದು “ವಿಶ್ವದ ಔಷಧಾಲಯ” ಎಂಬ ಬಿರುದನ್ನು ಹೊಂದಿದೆ. ಕೈಗೆಟುಕುವ, ಪರಿಣಾಮಕಾರಿ ಔಷಧಗಳು ಮತ್ತು ಲಸಿಕೆಗಳ ಜಾಗತಿಕ ಪೂರೈಕೆಗೆ ಭಾರತದ ಕೊಡುಗೆ ಅಪಾರವಾದದ್ದು.. ಕೋವಿಡ್ ಕಾಲದಲ್ಲಿ ದೇಶದಲ್ಲಿಯೇ ಲಸಿಕೆ ತಯ್ಯಾರಿಸಿದಲ್ಲದೆ ವಿಶ್ವಕ್ಕೆ ಪೂರೈಸಿದ ಹೆಮ್ಮ ದೇಶಕ್ಕಿದೆ. ಲಸಿಕೆ ತಯ್ಯಾರಿಕೆಯಲ್ಲಿ ರಾಜ್ಯದ ಪ್ರೊ. ಕೆ.ಎಸ್.ರಂಗಪ್ಪ ಅವರ ಕೊಡುಗೆಯೂ ಇದೆ ಎಂದು ದೇಶದ ವಿಜ್ಞಾನಿಗಳ ಸೇವೆಯನ್ನು ಅವರು ಕೊಂಡಾಡಿದರು.

ವೈಜ್ಞಾನಿಕ ಪ್ರಕಟಣೆಗಳಲ್ಲಿ ಭಾರತವು 7ನೇ ಸ್ಥಾನದಿಂದ 3ನೇ ಜಾಗತಿಕ ಶ್ರೇಯಾಂಕಕ್ಕೆ ಜಿಗಿದಿದೆ. ಕಳೆದ ಮಾರ್ಚ್ 23ರ ವರದಿ ಪ್ರಕಾರ ಭಾರತದ ಸಂಶೋಧನಾ ಉತ್ಪಾದನೆಯು ವಿಶ್ವದಲ್ಲಿಯೇ 4ನೇ ಅತ್ಯಧಿಕ ರಾಷ್ಟ್ರವಾಗಿದೆ. 2017 ಮತ್ತು 2022ರ ನಡುವೆ 1.3 ಮಿಲಿಯನ್ ಶೈಕ್ಷಣಿಕ ಪತ್ರಿಕೆಗಳನ್ನು ಹೊರತರಲಾಗಿದೆ. ಚೀನಾ-4.5 ಮಿಲಿಯನ್, ಯು.ಎಸ್.ಎ-4.4 ಮಿಲಿಯನ್, ಯುಕೆ-1.4 ಮಿಲಿಯನ್ ನಂತರ ಭಾರತವು 1.3 ಮಿಲಯನ್ ದೊಂದಿಗೆ ಸ್ಥಾನ ಆಲಂಕರಿಸಿದೆ ಎಂದರು.

ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳಿದಂತೆ ಭಾರತದ 600 ಮಿಲಿಯನ್ ಜನಸಂಖ್ಯೆ ಯುವ ಸಮೂಹವೇ ದೇಶದ ಶಕ್ತಿಯಾಗಿದೆ. 2022ಕ್ಕೆ 13 ಲಕ್ಷ ವಿದ್ಯಾರ್ಥಿಗಳು ಹೊರದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದರೆ ಇದರ ಸಂಖ್ಯೆ 2024ರಲ್ಲಿ 18 ಲಕ್ಷ ತಲುಪಲಿದೆ. ಭಾರತದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೊರ ದೇಶಕ್ಕೆ ಹೋಗುತ್ತಿದ್ದಾರೆ. ಹೆಚ್ಚಿನ ಜ್ಞಾನಾರ್ಜನೆ ಪಡೆಯುತ್ತಿದ್ದಾರೆ. ಭವಿಷ್ಯದ ದೃಷ್ಠಿಕೋನ ಇಲ್ಲದಿರುವುದೇ ದೊಡ್ಡ ಕೊರತೆಯಾಗಿದ್ದು, ಯುವ ಸಮೂಹ ಇದನ್ನರಿತು ಮುಂದೆ ಸಾಗಿದಲ್ಲಿ ಭಾರತ ವಿಶ್ವದ ಭೂಪಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತನ್ನದೆ ಆದ ಚಾಪು ಮೂಡಿಸಲು ಯಾವ ಶಕ್ತಿ ಅಡ್ಡ ಬಾರದು ಎಂದರು.

ಸಮ್ಮೇಳನ ಉದ್ಘಾಟಿಸಿದ ಭಾರತೀಯ ವಿಜ್ಞಾನ ಕಾಂಗ್ರೇಸ್ ಅಸೋಷಿಯೇಶನ್ ನಿಕಟಪೂರ್ವ ಅಧ್ಯಕ್ಷೆ ಡಾ.ವಿಜಯಲಕ್ಷ್ಮಿ ಸಕ್ಸೆನಾ ಮಾತನಾಡಿ ಕೃಷಿ, ಆರೋಗ್ಯ, ಶಿಕ್ಷಣ, ಸಾರಿಗೆ, ಐ.ಟಿ-ಬಿ.ಟಿ. ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡು ಬಹಳಷ್ಟು ದೇಶ ಸಾಧನೆ ಮಾಡಿದೆ. ಬಾಹ್ಯಾಕಾಶದಲ್ಲಿ ಇತ್ತೀಚೆಗೆ ಚಂದ್ರಯಾನ ಯಶಸ್ವಿ ಇದಕೆಲ್ಲ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.

ಮೂಲಸೌಕರ್ಯ ಕಲ್ಪಿಸಿದಲ್ಲಿ ಸಾಧನೆ ಸಾಧ್ಯ:

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಶೋಧನೆಗೆ ಹೆಚ್ಚಿನ ಹೂಡಿಕೆ ಮಾಡಿ ಮೂಲಸೌಕರ್ಯ ಒದಗಿಸಿದಲ್ಲಿ ಸಾಧನೆ ಕಾಣಬಹುದಾಗಿದೆ. ಗುಲಬರ್ಗಾ ವಿ.ವಿ. ವಿದೇಶಿ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಗುಣಮಟ್ಟದ ಸಂಶೋಧನೆ ಚಟುವಟಿಕೆ ಮುಂದುವರೆಸಿದೆ. ಮೇಲಾಗಿ ಈ ರೀತಿಯ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಸೆಮಿನಾರ್, ಕಾರ್ಯಾಗಾರ, ಸಮ್ಮೇಳನ ಆಯೋಜಿಸಿ ಸ್ಥಳೀಯ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದರು.

ಮೈಸೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ರಂಗಪ್ಪ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಎರಡು ದಿನಗಳ ಈ ಸಮ್ಮೇಳನದಲ್ಲಿ ಭಾಗವಹಿಸಲು ವಿವಿಧ ರಾಜ್ಯಗಳಿಂದ ಸುಮಾರು 150 ಜನ ಶೈಕ್ಷಣಿಕ ಪ್ರವರ್ತಕರು, ಪ್ರಾಧ್ಯಾಪಕರು, ಪರಿಣಿತರು, ಸಂಶೋಧನಾ ವಿದ್ಯಾರ್ಥಿಗಳು, ಪ್ರತಿನಿಧಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸಮ್ಮೇಳನದ ಸವಿನೆನಪಿನ ಸ್ಮರಣಿಕೆಯಾಗಿ ಸಿ.ಡಿ. ಗಳನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಕಾಂಗ್ರೇಸ್ ಅಸೋಷಿಯೇಶನ್ ಮಾಜಿ ಅಧ್ಯಕ್ಷ ಡಾ.ಅಶೋಕ ಕುಮಾರ ಸಕ್ಸೆನಾ, ಕೋಲ್ಕತಾ ಚಾಪ್ಟರ್ ಕಾರ್ಯಕಾರಿ ಕೌನ್ಸಿಲ್ ಸದಸ್ಯೆ ಪ್ರೊ.ಎಸ್.ಶ್ರೀಕಾಂತಸ್ವಾಮಿ, ಇಸ್ಕಾ ಮಾಜಿ ಕಾರ್ಯದರ್ಶಿ ಪ್ರೊ.ಎಸ್.ರಾಮಕೃಷ್ಣ, ಗುಲಬರ್ಗಾ ವಿವಿ. ಕುಲಸಚಿವ ಡಾ.ಬಿ.ಶರಣಪ್ಪ, ಡೀನ್ ಪ್ರೊ. ಕೆ.ಲಿಂಗಪ್ಪ ಇದ್ದರು. ಸಂಚಾಲಕ ಪ್ರೊ.ಗಂಗಾಧರ ಸ್ವಾಗತಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಪ್ರೊ ಕೆ.ವಿಜಯಕುಮಾರ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago