ಬಿಸಿ ಬಿಸಿ ಸುದ್ದಿ

ಸಂಶೋಧನೆಯ ನೈತಿಕ ಅಂಶಗಳನ್ನು ಅನುಸರಿಸಿ

ಕಲಬುರಗಿ: ವಿದ್ಯಾರ್ಥಿಗಳು ಸಂಶೋಧನೆ ಕಾರ್ಯದಲ್ಲಿ ಯಶಸ್ವಿಯಾಗಲು ಪ್ರಬುದ್ಧತೆಯ ಆಲೋಚನೆ ಮತ್ತು ಸಂಶೋಧನೆಯ ನೈತಿಕ ಅಂಶಗಳನ್ನು ಅನುಸರಿಸಬೇಕು. ಯುಜಿಸಿ ನಿಯಮದಂತೆ ಶೈಕ್ಷಣಿಕ ಸಂಶೋಧನಾ ಗ್ರಂಥ ರಚನೆ ಅಥವಾ ಲೇಖನ ಬರೆಯುವಾಗ ಆಯಾ ಕ್ಷೇತ್ರದಲ್ಲಿನ ವಾಸ್ತವ ಸತ್ಯಾಂಶಗಳ ಮೇಲೆ ಬೆಳಕು ಚೆಲ್ಲಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ. ಶರಣಪ್ಪ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯದ ವತಿಯಿಂದ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ಸೈಂಟಿಫಿಕ್ ಪಬ್ಲಿಷಿಂಗ್ ಇನ್ ಯುಜಿಸಿ ಕೇರ್ – ಸ್ಕೂಪಸ್ ಜರ್ನಲ್ಸ್ ಅಂಡ್ ಹ್ಯಾಂಟಿ ಪ್ಲಾಗಿರಿಸಮ್” ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಮೂಲ ಲೇಖಕರ ಕೃತಿ ಮತ್ತು ಸಿದ್ಧಾಂತಗಳನ್ನು ಓದುವುದರಿಂದ ಹೊಸ ಅಂಶಗಳನ್ನು ಹುಡುಕಲು ಪ್ರೇರಣೆ ಸಿಗುವುದರ ಜೊತೆಗೆ ಹೊಸ ವಿಷಯಗಳ ಪುರಾವೆ ಮತ್ತು ಸಾಕ್ಷಿಗಳಿಂದ ಅತ್ಯುತ್ತಮ ಗುಣಮಟ್ಟದ ಸಂಶೋಧನ ಕಾರ್ಯ ಕೈಗೊಳ್ಳಬಹುದು. ವೈಜ್ಞಾನಿಕ ಸಂಶೋಧನೆಯಿಂದ ಉತ್ತಮ ಜ್ಞಾನ ವೃದ್ಧಿ ಜೊತೆಗೆ ಸತ್ಯವನ್ನು ಸಮಾಜದ ಮುಂದೆ ತರಲು ಸಾಧ್ಯವಿದೆ ಎಂದರು.

ಸಂಶೋಧನೆ ಬರವಣಿಗೆ ಸಾಹಿತ್ಯ, ಕಥೆ, ಕವಿತೆ, ಕಾವ್ಯ, ಸಿನಿಮಾ ಕಥೆ ಬರವಣಿಗೆಗಿಂತ ಭಿನ್ನವಾಗಿದ್ದು, ಸರಳ ಭಾಷೆ, ಸತ್ಯಾಧಾರಿತ ದಾಖಲೆ ಹಾಗೂ ಪುರಾವೆಗಳಿಂದ ಮಾತ್ರ ಪ್ರಬಂಧ ರಚನೆಯ ಉದ್ದೇಶ, ಬರವಣಿಗೆ ಕ್ರಮ, ಅಧ್ಯಯನ ವಿಧಾನ ಮತ್ತು ರಚನೆ ವಿನ್ಯಾಸ ಕ್ರಮವನ್ನು ಅರಿತುಕೊಂಡು ರಚಿಸಿದ ಕೃತಿ ಅಥವಾ ಲೇಖನಗಳು ಉತ್ತಮ ಸಂಶೋಧಕನ ವ್ಯವಸ್ಥಿತ ಪರಿಶ್ರಮವಾಗಿರುತ್ತವೆ.

2018ರ ಯುಜಿಸಿ ಕೇರ್‌ನಲ್ಲಿ ಪ್ರಕಟಿಸುವ ಲೇಖನಗಳು ಉತ್ಕೃಷ್ಠ ಸಂಶೋಧನಾ ಲೇಖನಗಳಾಗಿದ್ದು, ಬೇರೆ ಬೇರೆ ವಿಷಯಗಳ ಅತ್ಯುತ್ತಮ ಲೇಖನಗಳು ಅಂತರ್ಜಾಲದಲ್ಲಿ ಸುಲಭವಾಗಿ ಲಭ್ಯವಿದ್ದು, ಅವುಗಳ ಅಧ್ಯಯನದಿಂದ ಉತ್ತಮ ಜ್ಞಾನ ಸಿಗುತ್ತವೆ. ಅವುಗಳನ್ನು ಹೆಚ್ಚು ಆಸಕ್ತಿಯಿಂದ ಓದುವ ಮೂಲಕ ಸಂಶೋಧನಾ ಪರಿಣಿತಿ ಸಾಧಿಸಬಹುದು. ಇದರ ಹಿನ್ನೆಲೆಯಲ್ಲಿ ಆಯೋಜಿಸಿರುವ ವೈಜ್ಞಾನಿಕ ಸಂಶೋಧನಾ ಕಾರ್ಯಗಾರ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲದ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಮೊದಲ ತಾಂತ್ರಿಕ ಗೋಷ್ಠಿಯಲ್ಲಿ “ಯುಜಿಸಿ ಮತ್ತು ಸ್ಕೋಪಸ್‌ನಲ್ಲಿ ವೈಜ್ಞಾನಿಕ ಪ್ರಕಟಣೆ” ವಿಷಯ ಕುರಿತು ಉಪನ್ಯಾಸ ನೀಡಿದರು.

ವಿಶ್ವವಿದ್ಯಾಲಯದ ಉಪ ಗ್ರಂಥಪಾಲಕಿ ಡಾ. ಮಮತಾ ಮೇಸ್ತ್ರಿ ಎರಡನೇ ತಾಂತ್ರಿಕ ಗೋಷ್ಠಿಯಲ್ಲಿ ‘ಗ್ರಂಥಾಲಯ ಸಂಪನ್ಮೂಲಗಳು ಮತ್ತು ಹುಡುಕಾಟ ಕೌಶಲ್ಯಗಳು’ ವಿಷಯ ಕುರಿತು ಹಾಗೂ ಮೂರನೇ ತಾಂತ್ರಿಕ ಗೋಷ್ಠಿಯಲ್ಲಿ ಡಾ. ಪ್ರವೀಣ್ ಕುಮಾರ್‌ ‘ಕೃತಿ ಚೌರ್ಯದ ವಿರೋಧಿ ಪರಿಕರಗಳು’ ವಿಷಯ ಕುರಿತು ವಿವರಿಸಿದರು. ಕಾರ್ಯಗಾರದಲ್ಲಿ 80ಕ್ಕೂ ಹೆಚ್ಚು ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಇನ್ನಿತರ ಕಾಲೇಜುಗಳ ಉಪನ್ಯಾಸಕರು ಹಾಗೂ ಗ್ರಂಥಾಲಯ ಸಿಬ್ಬಂದಿಗಳು ಭಾಗವಹಿಸಿದ್ದರು. ಗ್ರಂಥಾಲಯ ಸಿಬ್ಬಂದಿ, ಬಹು ಮಾಧ್ಯಮ ಕೇಂದ್ರದ ಗುರು ಚೌಹಾಣ, ಶರಣು ನಾವಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ಕೆ. ಎಂ. ಕುಮಾರಸ್ವಾಮಿ ಮುಂತಾದವರಿದ್ದರು.

ಅತಿಥಿ ಗಣ್ಯರನ್ನು ಡಾ. ಕೇಮಣ್ಣ ಅಲ್ದಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಮತಾ ಮೇಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು. ಶರಣುಗೌಡ ಪಾಟೀಲ್ ವಂದಿಸಿದರು.

ಸಂಶೋಧನೆಯಲ್ಲಿ ಕಾರ್ಯಪ್ರವೃತ್ತರಾಗುವ ಯುವ ವಿದ್ಯಾರ್ಥಿಗಳು ಕೃತಿ ಚೌರ್ಯ ಕಾನೂನು ಬಗ್ಗೆ ಎಚ್ಚರಿಕೆ ವಹಿಸಬೇಕು. ಮೂಲ ಲೇಖಕರ ಕೃತಿ ಅಥವಾ ಸಂಪನ್ಮೂಲಗಳ ಹಕ್ಕನ್ನು ದುರ್ಬಳಕೆ ಅಥವಾ ನಕಲಿಸಿ ಬರೆದು ಪ್ರಕಟಿಸುವುದು ಅಪರಾಧ. ಆದರೆ ಸಂಶೋಧನೆ ಕಾರ್ಯಕ್ಕೆ ಪುರಾವೆಯಾಗಿ ಬಳಕೆ ಮಾಡಿಕೊಂಡು ಲೇಖಕರ ನಾಮ ಮತ್ತು ಗ್ರಂಥದ ಹೆಸರನ್ನು ದಾಖಲಿಸಿ ತಾವು ಶೋಧಿಸಿದ ಅಂಶಗಳನ್ನು ವಿಶ್ಲೇಷಿಸಿ ಪ್ರಕಟಿಸಬೇಕು. ಅಂದಾಗ ಮಾತ್ರ ಲೇಖರನ್ನು ಸ್ಮರಿಸಿ ಗೌರವಿಸಿದಂತಾಗುತ್ತದೆ. ಡಾ. ಬಿ. ಶರಣಪ್ಪ ಕುಲಸಚಿವರು ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

54 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

20 hours ago