ಶಹಾಪುರ: ವಿದ್ಯುತ್ ಸರಬರಾಜು ಮಾಡಲೆಂದು ಹೊಲಹೊಂದರಲ್ಲಿ ವಿದ್ಯುತ್ ಕಂಬವನ್ನು ಹತ್ತಿದ್ದ ಲೈನಮ್ಯಾನೊರ್ವನಿಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಸಾವನ್ನಪ್ಪಿದ ಘಟನೆ ಶಹಾಪುರ ತಾಲುಕಿನ ಹಯ್ಯಾಳ ಬಿ ಗ್ರಾಮದಲ್ಲಿ ನೆಡದಿದೆ.
ಚಂದ್ರಶೇಖರ ತಂದೆ ಸಂಗನಗೌಡ ಪಾಟೀಲ್(24), ಉಕ್ಕಿನಾಳ ನಿವಾಸಿಯಾದ ಇತನೆ ಮೃತಪಟ್ಟ ದುರ್ದೈವಿ. ಕಳೆದ ಎರೆಡು ಮೂರು ವರ್ಷಗಳಿಂದ ಜೆಸ್ಕಾಮ ಇಲಾಖೆಯಲ್ಲಿ ಲೈನಮ್ಯಾನ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಎಂದಿನಂತೆ ಚಂದ್ರಶೇಖರ ತನ್ನ ಕರ್ತವ್ಯಕ್ಕೆ ಹಾಜರಿಯಾಗಿದ್ದಾನೆ.
ನೆರೆಯ ಹಾವಳಿಯಿಂದ ತತ್ತರಿಸಿದ್ದ ನದಿ ತಟದ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜನರು ಪರದಾಡುವಂತಾಗಿದ್ದಾಗ ಅನೇಕ ಕಡೆಗಳಲ್ಲಿ ಹೊಲಗಳಲ್ಲಿ ನಿಲುಗಡೆ ಮಾಡಲಾಗಿದ್ದ ಕಂಬಗಳ ತಂತಿ ಮುಗಚಿಕೊಂಡು ಬಿದ್ದಿದ್ದರಿಂದ, ಶಹಾಪುರ ಜೆಸ್ಕಾಮ ಇಲಾಖೆಯವರು ಇಲ್ಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ನಿಡುವ ಸದುದ್ದೇಶದಿಂದ ಹಲವಾರು ಜೆಸ್ಕಾಮ ಇಲಾಖೆ ಅಧಿಕಾರಿಗಳನ್ನು ಇಲ್ಲಿನ ಕರ್ತವ್ಯಕ್ಕೆ ವಹಿಸಲಾಗಿತ್ತು, ಚಂದ್ರಶೇಖರ ಲೈನಮ್ಯಾನರವರು ಹೈಯಾಳ ಬಿ ಗ್ರಾಮದ ಹೊರಹೊಲಯದ ಹೊಲಯೊಂದರಲ್ಲಿ ವಿದ್ಯುತ್ ಕಂಬವನ್ನು ಹತ್ತಿಕೊಂಡು ವಿದ್ಯುತ್ ತಂತಿ ಸಂಪರ್ಕ ಜೊಡಣೆ ಮಾಡುತ್ತಿದ್ದಾಗ ಅಕಸ್ಮೀಕ ವಿಧ್ಯುತ್ ಸಂಪರ್ಕದ ತಂತಿ ಸ್ಪರ್ಶದಿಂದ ಚಂದ್ರಶೇಖರ ತೀವ್ರ ಗಾಯಗೊಂಡು ಚಂದ್ರಶೇಕರ ಲೈನಮ್ಯಾನನನ್ನು ಶಹಾಪುರ ಆಸ್ಪತ್ರೆಗೆ ಕರೆ ತರಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಚಂದ್ರಶೇಖರ ಸಾವನ್ನಪಿದ್ದಾನೆ.
ಶಹಾಪುರ ಜೆಸ್ಕಾಮ ಅಧಕಾರಿಗಳು ಭೇಟಿ ನೀಡಿ ಘಟನೆ ಮಾಹಿತಿ ಪಡೆದುಕೊಂಡು ಸಂಭಂಧಪಟ್ಟ ಮೇಲಾಧಿಕಾರಿಗಳಿಗೆ ಪ್ರಸ್ತಾಪನೆ ಸಲ್ಲಿಸುವದಾಗಿ ತಿಳಿಸದರು. ಈ ಕುರಿತು ಶಹಾಪುರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…