ಪ್ರಜಾಕೀಯ

ದೇಶದ ಜನರ ಆಶೋತ್ತರ ಈಡೇರಿಸುವಲ್ಲಿ ಮೋದಿ ವಿಫಲ: ಗುಲಾಂ ನಬಿ ಆಜಾದ್.

ಕಲಬುರಗಿ: ಕೇಂದ್ರ ಸರಕಾರ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಆರೋಪಿಸಿದರು‌

ಶಹಾಬಾದ್ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಹಿಂದೂ ಮುಸ್ಲಿಂ, ಹಿಂದುಳಿದವರ ಬೇರೆ ಬೇರೆ ಸಮುದಾಯಗಳ ನಡುವೆ ಅಡ್ಡಗೋಡೆ ನಿರ್ಮಿಸಿ ದೇಶದಲ್ಲಿ ಭ್ರಾತೃತ್ವದ ವಾತವಾರಣಕ್ಕೆ ಭಂಗ ತರುವ ಕೆಲಸ ನಡೆಯುತ್ತಿದೆ. ಈ ದೇಶದ ಸಮಗ್ರ ನಾಗರಿಕರು ಒಂದೇ ಎಂದು ಹೇಳುತ್ತಿದ್ದ ಜಾಗದಲ್ಲಿ ಈಗ ಧರ್ಮ ಧರ್ಮಗಳ ನಡುವೆ ಅಸಮಧಾನ ಹುಟ್ಟು ಹಾಕಲಾಗಿದೆ. ಮೋದಿ ಪ್ರಧಾನಿಯಾದ ಮೇಲೆ ದೇಶದ ಗತಿ ಬದಲಾಗಲಿಲ್ಲ. ಬಿಜೆಪಿ ನಾಯಕರು ನನಗೆ ಹಾಗೂ ಖರ್ಗೆ ಅವರಿಗೆ ದೇಶಭಕ್ತಿ ಪಾಠ ಹೇಳಿಕೊಡುತ್ತಾರೆ. ದೇಶಕ್ಕಾಗಿ ಮಡಿದ ಆರ್ ಎಸ್ ಎಸ್, ಬಿಜೆಪಿಯ ಯಾವುದಾದರೂ ನಾಯಕರ ಹೆಸರು ಹೇಳಲಿ ಎಂದು ಸವಾಲ್ ಹಾಕಿದರು‌.

ಬಿಜೆಪಿ ಮನುಷ್ಯತ್ವದ, ಪ್ರೀತಿಯ, ಮಾನವೀಯತೆಯ ಭ್ರಾತೃತ್ವಸ ವಿರೋಧಿಯಾಗಿದ್ದು ಧರ್ಮದ ಹೆಸರಲ್ಲಿ ಬೇಳೆ ಬೇಯಿಸಿಕೊಂಡು ಮತ ಕೇಳುತ್ತಿದೆ. ” ನಮ್ಮ ಇಚ್ಛೆಯಂತೆ ಮಾತನಾಡಲು, ಊಟ ಮಾಡಲು, ಬಟ್ಟೆ ತೊಡಲು, ಮಾಧ್ಯಮ ಮುಕ್ತವಾಗಿ ವರದಿ ಮಾಡದಂತ ಸ್ಥಿತಿ ನಿರ್ಮಾದವಾಗಿದೆ ಇದು ದೇಶದ ಅಖಂಡತೆಗೆ ಮಾರಕವಾಗಲಿದೆ” ಎಂದ ಎಚ್ಚರಸಿದರು. ನಮ್ಮ ತೆರಿಗೆ ಹಣ ಬಳಸಿ ದೇಶ ವಿದೇಶಗಳಲ್ಲಿ ತಿರುಗಾಡಿ ಬಿಜೆಪಿ ಪ್ರಚಾರ ಮಾಡುತ್ತಾರೆ. ಆದರೆ, ರೈತರಿಗಾಗಿ, ದಲಿತರಿಗಾಗಿ, ಮಹಿಳೆಯರಿಗಾಗಿ, ಕೂಲಿ ಕಾರ್ಮಿಕರಿಗಾಗಿ, ಹಿಂದುಳಿದವರಿಗಾಗಿ ಏನು ಮಾಡಿದ್ದಾರೆ ಅವರೇ ಹೇಳಲಿ.

ಇವಿಎಂ ನಲ್ಲಿ ಮತಗಳನ್ನು ಚೋರಿ ಮಾಡುವ ಮೂಲಕ ಅಧಿಕಾರಕ್ಕೆ ಬಂದ ಮಾತ್ರಕ್ಕೆ ಅದನ್ನು ಒಪ್ಪಲಾಗದು. ಟೆಲಿವಿಷನ್‌ಗಳಲ್ಲಿ ಗಂಟೆಗಟ್ಟಲೆ ಮುಖ ತೋರಿಸುವುದರಿಂದ ಬಡವರ, ನಿರುದ್ಯೋಗಿಗಳ, ಮಹಿಳೆಯರ, ದಲಿತ ಅಲ್ಪಸಂಖ್ಯಾತರ ಹಾಗೂ ಹಿಂದುಳಿದವರ ಸಮಸ್ಯೆ ಬಗೆಹರಿಸುವುದಿಲ್ಲ ಮಾನ್ಯ ಪ್ರಧಾನಿಗಳೆ ಎಂದು ವ್ಯಂಗ್ಯವಾಡಿದರು. ಈ‌ ಚುನಾವಣೆ ಕೇವಲ ಖರ್ಗೆ ಅವರನ್ನಾಗಲಿ ಅಥವಾ ರಾಹುಲ್ ಗಾಂಧಿ ಅವರನ್ನಾಗಲಿ ಗೆಲ್ಲಿಸಿ ಸಂಸತ್ ಗೆ ಕಳಿಸುವದಕಷ್ಟೇ ಸೀಮಿತವಲ್ಲ ಬದಲಿದೆ ದೇಶದ ಭವಿಷ್ಯ ರೂಪಿಸುವ ಚುನಾವಣೆಯಾಗಿದ್ದು ನೀವೆಲ್ಲ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವ ಮೂಲಕ ದೇಶದ ಸಮಗ್ರತೆ ಕಾಪಾಡಲು ಅನುವು ಮಾಡಿಕೊಡಬೇಕು ಎಂದರು.

ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಯಾದ ಎಂ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ,  ಸಂಸತ್ತಿನಲ್ಲಿ ಮೋದಿ ಅವರ ಕಾರ್ಯವೈಖರಿ ಬಗ್ಗೆ ನಾನು ಹಲವಾರು ಬಾರಿ ಎತ್ತಿ ತೋರಿಸಿದ್ದೇನೆ. 80,000 ಸಾವಿರ ಕೋಟಿ ಕಪ್ಪುಹಣ ತಂದು ಪ್ರತಿಯೊಬ್ಬರಿಗೆ ಹದಿನೈದು ಲಕ್ಷ ಕೊಡುವುದಾಗಿ ಹೇಳಿದ್ದರು, ಐದು ವರ್ಷದಲ್ಲಿ ಹತ್ತು ಕೋಟಿ‌ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು. ರೈತರ ಉತ್ಪನ್ನ ಹಾಗೂ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು‌. ನೀವೆ ಹೇಳಿ ಇದರಲ್ಲಿ ಯಾವ ಭರವಸೆ ಈಡೇರಿದೆ? ಬರೀ ಸುಳ್ಳು ಬರೀ ಮೋಸ ಮೋಸ. ರೈತರಿಗೆ ಮೋಸ, ಜನರಿಗೆ ಮೋಸ, ನಿರುದ್ಯೋಗಿಗಳಿಗೆ ಮೋಸ, ಹೀಗೆ ಮೋದಿ ಎಲ್ಲರಿಗೂ ಮೋಸ ಮಾಡಿದ್ದಾರೆ ಎಂದು ಹೇಳಿದರು.

ದೇಶಕ್ಕಾಗಿ ಒಂದು ಹನಿ ರಕ್ತ ಹರಿಸದ ಮೋದಿ ಹಾಗೂ ಅವರ ಪಕ್ಷದವರು ತಾವೇ ದೇಶಭಕ್ತರು ಎಂದು ಹೇಳುತ್ತಾರೆ, ಸೈನಿಕರ ಶವದ ಮೇಲೆ ಓಟು ಕೇಳುತ್ತಾರೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೋನಿಯಾಗಾಂಧಿ ಅವರು ಕೊಟ್ಟ ಮಾತಿನಂತೆ ಸಂವಿಧಾನದ 371 ಕಲಂಗೆ ತಿದ್ದುಪಡಿ ತಂದು ಜೆ ಸೇರಿಸಿ ಈ ಭಾಗದ ಜನರ ಶೈಕ್ಷಣಿಕ ಹಾಗೂ ಔದ್ಯೋಗಿಕ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದು ಸ್ಮರಿಸಿದರು. ಮೋದಿಯನ್ನು ತೋರಿಸಿ ಓಟು ಕೇಳುವ ಜಾಧವ್, ಅಪ್ಪನನ್ನು ತೋರಿಸಿ ಮಗನಿಗೆ ಹೆಣ್ಣು ಕೇಳಿದಂತೆ ಎಂದು ಹೇಳಿದ ಖರ್ಗೆ ಅವರು ಇಲ್ಲೇನು ಮೋದಿ ಸ್ಪರ್ಧೆ ಮಾಡಿದ್ದಾರ? ಇದು ಶೋಷಿತ ವರ್ಗದವರಿಗೆ ಮೀಸಲು ಕ್ಷೇತ್ರ. ಅವನು ಇಲ್ಲಿ ಸ್ಪರ್ಧೆಸಲು ಬರುವುದಿಲ್ಲ‌. ಗುಲಾಂ ನಬಿ ಆಜಾದ್ ಅವರೇನಾದರೂ ನನಗೆ ಟಿಕೇಟ್ ಕೊಟ್ಟರೇ ನಾನು ವಾರಣಾಸಿಯಲ್ಲಿ ಸ್ಪರ್ಧಿಸಬಹುದು.

ಚೌಕಿದಾರ ಆರ್ ಎಸ್ ಎಸ್ ನ‌ ನಶೆಯಲ್ಲಿದ್ದು ಸಾವಿರಾರು ಕೋಟಿ ಹಣ ದೋಚಿ ಕೆಲವರು ದೇಶ ಬಿಟ್ಟು ಹೋದಾಗ ಮಲಗಿದ್ದರು ಎಂದರು. ಈ ಸಲ ಶಹಾಬಾದ್ ನಲ್ಲಿ ಶೇ 100 ಮತದಾನ ಮಾಡಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿ ಈ ಚುನಾವಣೆ ನಿಮ್ಮ ಅಳಿವು ಉಳಿವಿನ ಪ್ರಶ್ನೆ. ಹಾಗಾಗಿ ಎಚ್ಚರಿಕೆಯಿಂದ ಮತ ನೀಡಿ ಎಂದು ಕರೆ ನೀಡಿದರು‌. ವೇದಿಕೆಯ ಮೇಲೆ ಕೆ.ಬಿ.ಶಾಣಪ್ಪ, ಶರಣಪ್ಪ ಮಟ್ಟೂರು ಮತ್ತಿತರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago