ಬಿಸಿ ಬಿಸಿ ಸುದ್ದಿ

ಹಳಕರ್ಟಿ ಗ್ರಂಥಾಲಯದಲ್ಲಿ ಮಕ್ಕಳ ಹಕ್ಕು ಜಾಗೃತಿ

ವಾಡಿ: ಸಮೀಪದ ಹಳಕರ್ಟಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಮಕ್ಕಳಿಗೆ ಅವರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಯಿತು. ಶುಕ್ರವಾರ ವಾಚನಾಲಯದಲ್ಲಿ ವಿಶ್ವ ಮಕ್ಕಳ ಹಕ್ಕು ದಿನ ಆಚರಿಸುವ ಮೂಲಕ ಸಂವಿಧಾನ ನೀಡಿದ ಮಕ್ಕಳ ಹಕ್ಕುಗಳನ್ನು ಓದಿ ವಿವರಿಸಲಾಯಿತು.

ಮಕ್ಕಳಿಗಾಗಿ ಇರುವ ವಿಶೇಷ ಕಾನೂನುಗಳನ್ನು ಗಣಕಯಂತ್ರ ಪ್ರದರ್ಶಿಸಿ ಪರಿಚಯ ಮಾಡಿಕೊಡುವ ಮೂಲಕ ಮಾತನಾಡಿದ ಗ್ರಂಥಪಾಲಕ ಪ್ರಕಾಶ ಚಂದನಕೇರಿ, ಜನಿಸಿದ ಪ್ರತಿಯೊಬ್ಬ ಮಗು ಕಡ್ಡಾಯವಾಗಿ ಶಾಲೆಗೆ ದಾಖಲಾಗಬೇಕು. ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾದರೆ ಬಾಲಕಾರ್ಮಿಕರಾಗುವ ಅಪಾಯವಿರುತ್ತದೆ. ಬಾಲಕಾರ್ಮಿಕ ಪದ್ದತಿ ಕಾನೂನು ಬಾಹಿರವಾಗಿದೆ. ಪೋಷಕರು ಮಕ್ಕಳನ್ನು ದುಡಿಮೆಗೆ ಹಚ್ಚುವಂತಿಲ್ಲ.

ಅಕ್ಷರ ಜ್ಞಾನ ಪಡೆದರೆ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗಲು ಸಾಧ್ಯ. ಪೌಷ್ಠಿಕ ಆಹಾರ ಮತ್ತು ಆರೋಗ್ಯಯುತ ಜೀವನ ನಡೆಸುವುದು ಮಕ್ಕಳ ಹಕ್ಕಾಗಿದೆ. ಸಾಮಾಜಿಕ ಶೋಷಣೆ, ದೌರ್ಜನ್ಯ, ಬಲತ್ಕಾರ ಹಾಗೂ ಹಿಂಸಾತ್ಮಕ ಕೃತ್ಯಗಳಿಂದ ರಕ್ಷಣೆ ಪಡೆಯಲು ಸಂವಿಧಾನದಲ್ಲಿ ಅಗತ್ಯ ಕಾನೂನುಗಳನ್ನು ಒದಗಿಸಲಾಗಿದೆ. ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವವರು ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದರು.

ಗ್ರಾಮದ ಯುವ ಮುಖಂಡ ಸಿದ್ದು ಮುಗುಟಿ ಮಾತನಾಡಿ. ನಮ್ಮೂರಿನ ಗ್ರಂಥಾಲಯ ಸಾಹಿತ್ಯ ಕೃತಿಗಳ ಕಣಜವಾಗಿ ಗಮನ ಸೆಳೆಯುತ್ತಿದೆ. ಸಾವಿರಾರು ಪುಸ್ತಕಗಳು ಗ್ರಾಮದ ಓದುಗರ ಜ್ಞಾನ ಹೆಚ್ಚಿಸುತ್ತಿವೆ. ಗ್ರಂಥಾಲಯದಲ್ಲಿ ಶಾಲಾ ಮಕ್ಕಳಿಗಾಗಿ ನಿರಂತರವಾಗಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆ ಮೂಲಕ ಮಕ್ಕಳಿಗೆ ಗ್ರಂಥಾಲಯ ಸದ್ಬಳಕೆಯಾಗುತ್ತಿದೆ.

ಗ್ರಾಮದ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಗಂಟೆಗಟ್ಟಲೆ ಹರಟೆ ಹೊಡೆಯುವ ಬದಲು ಗ್ರಂಥಾಲಯಕ್ಕೆ ಬಂದು ಸಮಯ ಕಳೆದರೆ ಮನಸ್ಸಿಗೆ ನೆಮ್ಮದಿ ಜತೆಗೆ ಹಲವು ವಿಚಾರಗಳ ಪರಿಚಯವಾಗುತ್ತದೆ ಎಂದರು. ಇದೇ ವೇಳೆ ಗ್ರಾಮದ ವಿವಿಧ ಶಾಲೆಗಳ ಮಕ್ಕಳು ಕಂಪ್ಯೂಟರ್ ಮೂಲಕ ಗ್ರಂಥಾಲಯದಲ್ಲಿ ಮಕ್ಕಳ ಹಕ್ಕುಗಳ ಉಪನ್ಯಾಸ ಆಲಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago