ಬಿಸಿ ಬಿಸಿ ಸುದ್ದಿ

ಡಿ.17 ರಂದು ಜಯ ಕರ್ನಾಟಕ ಜನಪರ ವೇದಿಕೆಯಿಂದ ಗಡಿನಾಡ ಉತ್ಸವ

ಗುಣರಂಜನ್ ಶೆಟ್ಟಿ, ಜೆ.ಶ್ರೀನಿವಾಸ್, ಲೋಕೇಶ್ ಸಾರಥ್ಯದಲ್ಲಿ ಗಡಿನಾಡ ಉತ್ಸವ

ವರದಿ: ಮಂಜುನಾಥ ದಾಸನಪುರ

ಆನೇಕಲ್, ಡಿ 15: ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ನೇತೃತ್ವದಲ್ಲಿ ಡಿ.17ರಂದು ಬೆಳಗ್ಗೆ 10.30ಕ್ಕೆ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಗಡಿನಾಡು ಉತ್ಸವವನ್ನು ಆಯೋಜಿಸಲಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ ತಿಳಿಸಿದ್ದಾರೆ.

ಚಂದಾಪುರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು ನುಡಿ, ಸಂಸ್ಕೃತಿ, ಜಲ ಸಂಪನ್ಮೂಲ, ಪರಿಸರವನ್ನು ಸಂರಕ್ಷಿಸುವುದು ಹಾಗೂ ರಾಜ್ಯದ ಗಡಿ ಭಾಗಗಳ ಸರ್ವತೋಮುಖ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗಡಿನಾಡ ಉತ್ಸವವನ್ನು ಆಯೋಜಿಸಲಾಗಿದೆ. ಅತ್ತಿಬೆಲೆ ಸಮೀಪದ ಯಡವನಹಳ್ಳಿ ಮಹದೇಶ್ವರಸ್ವಾಮಿ ದೇವಸ್ಥಾನದಿಂದ ಕುಂಭ ಮೇಳ, ಜಾ‌ನಪದ ನೃತ್ಯಗಳ ಮೂಲಕ ಗಡಿನಾಡ ಉತ್ಸವಕ್ಕೆ ಚಾಲನೆ ಸಿಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗಡಿ ಸಂರಕ್ಷಣೆಗೆ ಆದ್ಯತೆ: ತಮಿಳುನಾಡು, ಮಹಾರಾಷ್ಟ್ರದ ಗಡಿ ಪ್ರದೇಶಗಳಲ್ಲಿ ಕನ್ನಡ ನಾಡು, ನುಡಿಯ ಅಸ್ಮಿತೆಯನ್ನು ಉಳಿಸುವುದು ಜಯ ಕರ್ನಾಟಕ ಜನಪರ ವೇದಿಕೆಯ ಬಹುಮುಖ್ಯ ಧ್ಯೇಯವಾಗಿದೆ. ಅದರ ಭಾಗದಲ್ಲಿ ಅತ್ತಿಬೆಲೆ ಗಡಿಯಲ್ಲಿ ತಾಯಿ ಭುವನೇಶ್ವರಿ ತಾಯಿ ಹಾಗೂ ಗ್ರಾಮ ದೇವತೆಗಳ ಮೆರವಣಿಗೆ ನಡೆಸುವ ಮೂಲಕ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭೂ ಗಳ್ಳರಿಂದ ಒತ್ತುವರಿಯಾಗಿರುವ ಗೋಮಾಳ ತೆರವು ಮಾಡಿ, ಅಲ್ಲಿ ಸಸಿಗಳನ್ನು ನೆಡುವುದು, ಕೆರೆ ಸಂರಕ್ಷಣೆ ಸೇರಿದಂತೆ ರಾಜ್ಯದ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದೇವೆ. ಮುಂದಿನ‌ ದಿನಗಳಲ್ಲೂ ಜಯ ಕರ್ನಾಟಕ ಜನಪರ ವೇದಿಕೆಯು, ರಾಜ್ಯದ ಏಳ್ಗೆಗಾಗಿ ಹಗಲಿರುಳು ಶ್ರಮಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಯ ಕರ್ನಾಟಕ ಜನಪರ ವೇದಿಕೆಯ ತಾಲ್ಲೂಕು ಅಧ್ಯಕ್ಷ ಗುಡ್ಡಹಟ್ಟಿ ಲೋಕೇಶ್ ಮಾತನಾಡಿ, ಆನೇಕಲ್ ತಾಲ್ಲೂಕಿನ ಗಡಿ ಭಾಗದ ಕನ್ನಡದ ಜನತೆಯ ಜೊತೆಗೂಡಿ ಗಡಿನಾಡ ಉತ್ಸವವನ್ನು ಆಚರಿಸುತ್ತಿರುವುದಕ್ಕೆ ಬಹಳ ಖುಷಿ ಆಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಡಿ.17 ರಂದು ನಡೆಯುವ ಗಡಿನಾಡ ಉತ್ಸವದ ದಿವ್ಯ ಸಾನಿಧ್ಯವನ್ನು ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಮಹಾಲಿಂಗ ಸ್ವಾಮೀಜಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಹೊಸೂರು ವಿಧಾನಸಭಾ ಕ್ಷೇತ್ರದ ಶಾಸಕ‌

ಈ ವೇಳೆ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ರಾಧಾ ಕೃಷ್ಣ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಲತಾ, ಬೆಂಗಳೂರು ಜಿಲ್ಲಾಧ್ಯಕ್ಷ ಲೋಕೇಶ್, ರಾಜ್ಯ ಕಾರ್ಯದರ್ಶಿ ಗುಡ್ಡಟ್ಟಿ ಗೋಪಿ, ಬೆಂಗಳೂರು ನಗರಾಧ್ಯಕ್ಷೆ ಸುನಂದ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

emedialine

Recent Posts

371 (ಜೆ) ವಿಧಿಯ ನಿಬಂಧನೆಗಳ ಪರಿಣಾಮಕಾರಿ ಅನುμÁ್ಠನಕ್ಕೆ ಒತ್ತಾಯ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…

6 hours ago

ಮರಗಮ್ಮ ದೇವಿ ಮೂರ್ತಿ ಗಂಗಾಸ್ನಾನ | ಎಂಟು ಗಂಟೆಗಳ ಕಾಲ ಮೆರವಣಿಗೆ

ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…

6 hours ago

ಒತ್ತಡ ನಿಭಾಯಿಸಲು ಪರಿಹಾರ ಒದಗಿಸುವುದು ಯುವ ಸ್ಪಂದನೆ ಉದ್ದೇಶ

ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…

6 hours ago

ಶಹಾಬಾದ: ಸಂಪೂರ್ಣತಾ ಅಭಿಯಾನ ಉತ್ಸವಕ್ಕೆ ಚಾಲನೆ

ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…

6 hours ago

ಗಿಡ-ಮರಗಳ ಸಂರಕ್ಷಣೆ ಮಾಡದಿದ್ದರೇ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ

ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…

6 hours ago

ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮ

ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…

6 hours ago