ಬಿಸಿ ಬಿಸಿ ಸುದ್ದಿ

ಕವನ ಕಸೂತಿ ಕೃತಿ ಬಿಡುಗಡೆ

ಕಲಬುರಗಿ: ಒಂದು ಕಾವ್ಯವನ್ನು ಕಟ್ಟು ವಾಗ ಕೇವಲ ಕಲ್ಪನೆಯಲ್ಲಿ ಮೂಡಿ ಬರುವ ಪದ ಪುಂಜಗಳಿದ್ದರೆ ಸಾಲದು ಅದರೊಂದಿಗೆ ಭಾಷೆ, ಚಂದಸು, ವಿಚಾರಗಳು, ಪ್ರಾಸಗಳು ಸೇರಿ ವಿಷಯದ ಮೇಲೆ ರಚನೆಗೊಳ್ಳುವ ರೀತಿಯೇ ಕಾವ್ಯವಾಗಿ ಹೊರಹೊಮ್ಮುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಜೀಂ ಪ್ರೇಮಜಿ ಶಾಲೆ ಕಲಬುರಗಿಯವರು ಹಮ್ಮಿಕೊಂಡ ಕವನ ಕಸೂತಿ ಕೃತಿ ಬಿಡುಗಡೆಯಲ್ಲಿ ಕೃತಿಯ ಕುರಿತು ಸಿ.ಎಸ್.ಮಾಲಿಪಾಟೀಲ ಕನ್ನಡ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕವನ ಕಸೂತಿ ಸಂಕಲನದ ಕವಿತ್ರಿ ಎಂಟನೆಯ ತರಗತಿಯಲ್ಲಿ ಓದುತ್ತಿರುವ ಕು.ಅದ್ವಿಕಾ ಕಾಡದೇವರ ಮಠ ವಿರಚಿತ ಸಂಕಲನವು ಮಕ್ಕಳ ಕವನ ಸಂಕಲನವಾಗಿದೆ. ಅವಳಲ್ಲಿ ಅಡಗಿರುವ ವಿವೇಚನಗಳೆ ಕವನ ಕಸೂತಿಯಾಗಿ ಹೊರಹೊಮ್ಮಿದ ಇದೊಂದು ಉತ್ತಮ ಕೃತಿ ಎಂದರು.
ಸಾಹಿತಿ ಎ. ಕೆ.ರಾಮೇಶ್ವರ ಅವರು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ ಕು.ಅದ್ವಿಕಾಳ ಭಾವನೆಗಳು ಹೊರಹೊಮ್ಮಿ ಕವನ ಕಸೂತಿಯಾಗಲು ಅವಳ ಗುರುಗಳಾದ ರಮೇಶ ರಾಠೋಡ ಅವರ ಪಾತ್ರವಿದೆ ಎಂದರು.

ಕವನಗಳು ರಚಿಸುವಾಗ ಉತ್ತಮ ಜ್ಞಾನ ಹೊಂದಿರಬೇಕು ಅರಿತುಕೊಳ್ಳುವ ಸಾಮಥ್ರ್ಯ ಹೊಂದಿರಬೇಕಾಗುತ್ತದೆ. ಆಜ್ಞಾನ ಅವಳಲ್ಲಿದೆ ಎಂದರು. ಕು.ಅದ್ವಿಕಾಳ ಕುರಿತು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಕ್ರೆಪ್ಪಗೌಡ ಬಿರಾದಾರ ಮಾತನಾಡುತ್ತ ಆಟ ಆಡುವ ವಯಸ್ಸಿನಲ್ಲಿ ಮಕ್ಕಳು ಓದುವಂತಹ ಒಂದು ಉತ್ತಮ ಕವನ ಸಂಕಲನ ತಂದಿರೋದು ನನಗೆ ಬಹಳ ಖುಷಿ ತಂದಿರುವ ವಿಚಾರವಾಗಿದೆ ಎಂದರು.

ಈ ಕೃತಿಯ ಬಿಡುಗಡೆಯ ಕುರಿತು ಅಜೀಂ ಪ್ರೇಮಜಿ ಫೌಂಡೇಶ ಷನ್‍ದ ರಾಜ್ಯ ಮುಖ್ಯಸ್ಥರಾದ ರುದ್ರೇಶ.ಎಸ್. ಮಾತನಾಡಿ ಮಕ್ಕಳಿಗೆ ಸೂಪ್ತವಾದ ಜ್ಞಾನವನ್ನು ಹೊರ ಹಾಕಿ ಅದಕ್ಕೆ ಸೂಕ್ತವಾದ ವೇದಿಕೆಯನ್ನು ನೀಡಿದರೆ ಅವರ ಸೃಜನಾತ್ಮಕತೆಯನ್ನು ಹೊರಗೆ ಹಾಕಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ರಾಜಶ್ರೀ ನಾಯಕ ತರಗತಿಯ ಕಲಿಕಾ ಫಲಗಳನ್ನು ಶಿಕ್ಷಕರು ಸರಿಯಾಗಿ ಅರ್ಥೈಸಿಕೊಂಡು ಅದಕ್ಕೆ ಸೂಕ್ತವಾದ ಮಾರ್ಗದರ್ಶನವನ್ನು ಕೊಟ್ಟರೆ ಸಾಕು ಮಗುವಿನಲ್ಲಿರುವ ಅಭಿಪ್ರಾಯಗಳು ಕೃತಿಯಾಗಿ ಹೊರಬರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಾಹಿತಿಗಳಾದ ಡಾ.ಕೆ.ಎಸ್.ಬಂಧು, ಪ್ರಕಾಶ ರಾಠೋಡ, ಸಂತೋಷ ಮಟ್ಟಿ, ಶಾಂತಾ ಪಸ್ತಾಪೂರ, ಶಿಕ್ಷಕ ರಮೇಶ ರಾಠೋಡ, ಅದ್ವಿಕಾಳ ಅಜ್ಜ, ರೇವಯ್ಯ ಅಜ್ಜಿ, ಅನ್ನಪೂರ್ಣ ಕುರ್ತಿಕೋಟಿ, ತಂದೆ ಮಹಾಂತೇಶ ತಾಯಿ ಉಮಾ ಅವರ ಬಂಧು ಬಳಗ ಹಾಗೂ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಶಿಕ್ಷಕರಾದ ಮಲ್ಲಿಕಾರ್ಜುನ ಮತ್ತು ಶ್ವೇತಾರವರು ನಿರೂ ಪಿಸಿದರು.ಶಿವಶರಣಪ್ಪರವ ರು ಸ್ವಾಗತಿಸಿದರು ಹಾಗೂ ಯಕ್ಷಿತರವರು ವಂದಿಸಿದರು.

emedialine

Recent Posts

ನಾಡೋಜ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ: ಜುಲೈ 7ರಂದು

ಬೆಂಗಳೂರು: ಜಗತ್ತಿನ ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡುವ ಪತ್ರಕರ್ತರು ಹಗಲುರಾತ್ರಿ ಎನ್ನದೇ ಕಷ್ಟವಾದರೂ ಇಷ್ಟಪಟ್ಟು ವರದಿ ಮಾಡುವ ಮಾಧ್ಯಮ ಮಿತ್ರರಿಗೆ,…

26 mins ago

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

11 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

11 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

11 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

12 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

12 hours ago