ಕಲಬುರಗಿ; ಸಂಗೀತಕ್ಕೆ ಮನುಷ್ಯನ ಮನಸ್ಸನ್ನು ಹದಗೊಳಿಸಿ ಪರಿಪೂರ್ಣತೆಯ ಜೀವನಕ್ಕೆ ಕೊಂಡಯುತ್ತದೆ ಎಂದು ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಹೇಳಿದರು.
ನಗರದ ಕೆ ಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಶ್ರೀದೇವಿ ಸರಸ್ವತಿ ಕಲಾಬಳಗದ ವತಿಯಿಂದ ಹಮ್ಮಿಕೊಂಡಿರುವ ತತ್ವಪದ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಸಂಗೀತ ಕಲಾವಿದರಿಗೆ ಆಶ್ರಯ ನೀಡಿ ಸಂಗೀತ ಆಲಿಸುವುದರೊಂದಿಗೆ ಉತ್ತಮವಾದ ಆಡಳಿತ ನಡೆಸುತ್ತಿದ್ದರು.
ಇಂದಿನ ಕಾಲದಲ್ಲಿ ಸಮಾಜ ಹಾಗೂ ಸರ್ಕಾರ ಕಲಾವಿದರಿಗೆ ಆಶ್ರಯ ನೀಡುಬೇಕು. ಕಲಾವಿದರಿಗೆ ಸಹಕಾರ ನೀಡುವುದರೊಂದಿಗೆ ತತ್ವಪದ ಜಾನಪದ ಉಳಿಸುವ ಪ್ರಯತ್ನ ಮಾಡಬೇಕು. ಎಷ್ಟೋ ಜನ ಬಡ ಕಲಾವಿದರು ತಮ್ಮ ಆರ್ಥಿಕ ತೊಂದರೆಯಿಂದ ಕುಟುಂಬ ನಡೆಸುವುದೇ ಕಷ್ಟಕರವಾಗಿದೆ ಕಲಾವಿದರಿಗೆ ಸರ್ಕಾರ ಆರ್ಥಿಕ ನಿರ್ವಹಣೆಗಾಗಿ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದರೊಂದಿಗೆ ಕಲಾವಿದರ ಬಾಳಿಗೆ ಬೆಳಕಾಗಲಿ. ಕಲಾವಿದರಿಗಾಗಿ ಗ್ಯಾರಂಟಿ ಯೋಜನೆ ಜಾರಿಗೆ ಮಾಡಲಿ ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ರಮೇಶ ಕೋರಿಶೆಟ್ಟಿ, ಬಸವಕಲ್ಯಾಣ ತಾಲೂಕಿನ ಖ್ಯಾತ ಸಂಗೀತ ಕಲಾವಿದರಾದ ವಿಠ್ಠಲ ನಿಂಬಾಳೆ ಅಟ್ಟೂರ, ಕಲಾವಿದರಾದ ಬಸವರಾಜ ಕಿಣಗಿ, ವೀರೇಶ ವಿಶ್ವಕರ್ಮ, ರವೀಂದ್ರ ಗುತ್ತೇದಾರ, ಸಂಘದ ಅಧ್ಯಕ್ಷರಾದ ಶರಣು ಸಾಗನೂರ, ಚಂದ್ರಶೇಖರ ಹರವಾಳ, ಅಮೃತ ನಾಯಕ, ಸಂಗಮರಾಯ ಕುಲಕರ್ಣಿ ಸೇರಿದಂತೆ ಬಡಾವಣೆಯ ಜನರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…