ಬೀದರ್; ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಡಿಸೆಂಬರ್ 13,14,15 ಈ ಮೂರು ದಿನಗಳಲ್ಲಿ ಎಂಟನೇ ವಾರ್ಷಿಕ ಕುರ್ಆನ್ ಪ್ರವಚನ ಕಾರ್ಯಕ್ರಮ ಬಹಳ ಅದ್ದೂರಿಯಿಂದ ಅತ್ಯಂತ ಯಶಸ್ವಿಯಾಗಿ ನಡೆಯಿತು.
ದೇಶದ ಪ್ರಗತಿ ಮತ್ತು ನೈತಿಕ ಮೌಲ್ಯಗಳು, ಸಂತೃಪ್ತ ಕುಟುಂಬ, ಯಶಸ್ವಿ ಜೀವನ ಈ ಮೂರು ವಿಷಯಗಳ ಮೇಲೆ ನಡೆದ ಕಾರ್ಯಕ್ರಮದಲ್ಲಿ ಪ್ರತಿ ದಿನವೂ ಸುಮಾರು ಆರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸರ್ವಧರ್ಮೀಯ ಬಾಂಧವರು ಭಾಗವಹಿಸಿದರು.
ಬೀದರ್ ಜಿಲ್ಲೆಯ ಅತ್ಯಂತ ಗೌರವಾನ್ವಿತ ಸ್ವಾಮೀಜಿಗಳು, ರಾಜಕೀಯ ಸಾಮಾಜಿಕ ಧಾರ್ಮಿಕ ನೇತಾರರು, ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, PROFESSIONALS, ವಿದ್ಯಾರ್ಥಿಗಳು, ಯುವಕರು, ಜನಸಾಮಾನ್ಯರು ಹೀಗೆ ಸಮಾಜದ ಎಲ್ಲ ಸ್ತರದ ಜನರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.
ನಿರಂತರ ಎಂಟು ವರ್ಷಗಳಿಂದ ಸಾವಿರಾರು ಜನರು ನಿರಂತರವಾಗಿ ಕುರ್ಆನ್ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನಿಜವಾಗಿಯೂ ಅಪರೂಪದ ಅನುಭವ ಹಾಗೂ ಕಾರ್ಯಕ್ರಮದ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.
ಸುಳ್ಳು, ಅಪಪ್ರಚಾರ, ತಪ್ಪು ಕಲ್ಪನೆಗಳು, ವೈಷಮ್ಯ ವ್ಯಾಪಕವಾಗಿರುವ ಸಮಾಜದಲ್ಲಿ ಸತ್ಯವನ್ನು, ವಾಸ್ತವಿಕತೆಯನ್ನು ತಿಳಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಎಲ್ಲೆಡೆ ನಡೆಯುತ್ತಲೇ ಇರಬೇಕಾಗಿದೆ ಎಂದು ಮುಖ್ಯ ಪ್ರವಚನಕಾರರಾದ ಮುಹಮ್ಮದ್ ಕುಂಞಿ ತಿಳಿಸಿದರು.
ಸತ್ಯವನ್ನು ತಿಳಿಯುವ, ವಾಸ್ತವಿಕತೆಯನ್ನು ಅರ್ಥ ಮಾಡುವ ಕುತೂಹಲ ಮತ್ತು ಆಸಕ್ತಿ ಜನರಲ್ಲಿ ಖಂಡಿತವಾಗಿಯೂ ಇದೆ ಎಂಬುದಕ್ಕೆ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಜನಸ್ತೋಮವೇ ಸಾಕ್ಷಿಯಾಗಿತ್ತು. ಕಾರ್ಯಕರ್ತರ ಪ್ರಾಮಾಣಿಕ ಮತ್ತು ಕಠಿಣ ಶ್ರಮ, ಆಧುನಿಕ ಮತ್ತು ಶಿಸ್ತುಬದ್ಧ ಪ್ರಚಾರ, ಅದ್ಭುತ Team work, Professionalism, ವ್ಯಾಪಕ ಜನಸಂಪರ್ಕ, ಮಾಧ್ಯಮ ಮಿತ್ರರ ಪೂರ್ಣ ಸಹಕಾರ ಇವೆಲ್ಲವೂ ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣವಾಗಿದೆ.
ಅದ್ಭುತವಾದ ಮಾದರಿ ಯೋಗ್ಯ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ಸುಗೊಳಿಸಲು ಹಗಲಿರುಳು ಶ್ರಮಿಸಿದ ಜಮಾಅತ್ ಕಾರ್ಯಕರ್ತರು, ಸ್ವಾಗತ ಸಮಿತಿ ಸದಸ್ಯರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಎಲ್ಲರೂ ಅಭಿನಂದನಾರ್ಹರು. ದಯಾಮಯನಾದ ದೇವನು ಅವರೆಲ್ಲರನ್ನೂ ಅನುಗ್ರಹಿಸಲಿ. ಅವರೆಲ್ಲರ ಮೇಲೆ ದೇವನ ಕರುಣೆ ಮತ್ತು ಕೃಪೆಯಿರಲಿ.ಆಮೀನ್ ಎಂದು ಮುಹಮ್ಮದ್ ಕುಂಞಿ ಆಶೀಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…