ಸುರಪುರ: ಸಂಗೀತ ಕೇಳುವುದರಿಂದ ಮನುಷ್ಯನ ಮನಸ್ಸು ಉಲ್ಲಷಿತಗೊಳ್ಳುತ್ತದೆ ಎಂದು ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಸೂಗೂರೇಶ ವಾರದ ಹೇಳಿದರು.
ಪಟ್ಟಣದ ಶ್ರೀ ಸುಗೂರೇಶ್ವರ ದೇವಸ್ಥಾನದಲ್ಲಿ 55ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಸಂಗೀತ ಧರ್ಬಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಸುಗುರೇಶ್ವರರ ಶಕ್ತಿಯು ಅನನ್ಯವಾಗಿದೆ, ಸಂಗೀತ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಹರ್ಷ ತಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸಪ್ಪ ಯಾಳವಾರ ಅವರು ಮಾತನಾಡಿ, ಸುರಪುರದಲ್ಲಿ ಪ್ರಪ್ರಥಮ ಸಂಗೀತ ಪಾಠಶಾಲೆಯನ್ನು ಪ್ರಾರಂಭಿಸುವ ಮೂಲಕ ಸಗರನಾಡಿನಲ್ಲಿ ಸಂಗೀತದ ಪರಿಮಳ ಹರಡಲು ಲಿಂಗೈಕ್ಯ ಚನ್ನಮಲ್ಲಯ್ಯ ಸ್ವಾಮಿ ಬಳ್ಳುಂಡಗಿ ಮಠ ಅವರ ಶ್ರಮ ಅಪಾರವಾಗಿದ್ದು ಮುಂಗಾರು ಬಿತ್ತನೆಯ ಸಮಯ ಕೋರಿಗೆಗೆ ಉಡಿ ತುಂಬುವ ಸಂದರ್ಭದಲ್ಲಿ ಕೂರಿಗೆಗೆ ಪೂಜೆ ಮಾಡಿ ಬಿತ್ತನೆ ಮಾಡುವ ಸಂದರ್ಭಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದುದು ಈ ನಾಡಿನ ಹೆಮ್ಮೆ ಎಂದರು. ಸಂಗೀತ ಆಲಿಸುವುದರಿಂದ ಮನುಷ್ಯನಿಗೆ ಬರುವ ರೋಗಗಳನ್ನು ತಡೆಗಟ್ಟಬಹುದಾಗಿದೆ ಕೆಲವೊಂದು ಸಂದರ್ಭದಲ್ಲಿ ವೈದ್ಯರು ಕೂಡ ಶಾಸ್ತ್ರೀಯ ಸಂಗೀತವನ್ನು ಆಲಿಸಲು ಸಲಹೆ ನೀಡುತ್ತಾರೆ ಎಂಬುದು ಗಮನಾರ್ಹ ಸಂಗತಿ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಬಸವರಾಜ ಬಂಟನೂರ ಮತ್ತು ಚೆನ್ನಬಸವರಾಜೇಶ್ವರಿ ಪಾಣಿ ಮಾತನಾಡಿದರು. ಕೊಟ್ರಯ್ಯ ಸ್ವಾಮಿ ಬಳುಂಡಗಿಮಠ ಸಾನಿಧ್ಯ ವಹಿಸಿದ್ದರು. ಸುನಿಲ ಸರಪಟ್ಟಣಶಟ್ಟರು ಅಧ್ಯಕ್ಷತೆ ವಹಿಸಿದ್ದರು. ಶಶಿಕುಮಾರ್ ಬೆನಕನಾಳಮಠ ಶಿವಶರಣಯ್ಯ ಸ್ವಾಮಿ ಬಳುಂಡಗಿಮಠ ಯಮುನೇಶ ಯಾಳಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಶಿವಶರಣಯ್ಯ ಸ್ವಾಮಿ ಬಳ್ಳುಂಡಗಿ ಮಠ ಪ್ರಾರ್ಥನೆ ಮಾಡಿದರು. ಹೆಚ್.ವಾಯ್.ರಾಠೋಡ ನಿರೂಪಿಸಿದರು, ರಮೇಶ್ ಕುಲಕರ್ಣಿ ಸ್ವಾಗತಿಸಿದರು, ವಿನೋದ ಬಳುಂಡಗಿಮಠ ವಂದಿಸಿದರು.
ಮಾಜಿ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾದ ಬಸವರಾಜ ಬಂಟನೂರ ಅವರ ಅಧ್ಯಕ್ಷತೆಯಲ್ಲಿ ಸಂಗೀತ ದರ್ಬಾರ್ ಕಾರ್ಯಕ್ರಮದ ಜರುಗಿತು. ಸಂಗೀತ ಕಲಾವಿದರಾದ ಶಿವಶರಣಯ್ಯಸ್ವಾಮಿ ಬಳ್ಳುಂಡಗಿ ಮಠ, ಪ್ರಾಣೇಶ್ ರಾವ್ ಕುಲಕರ್ಣಿ, ಮೋಹನ್ ರಾವ್ ಮಾಳದಕರ, ಯಮುನೇಶ ಯಾಳಗಿ, ಶರಣಕುಮಾರ್ ಯಾಳಗಿ, ದೀಪಕ್ ಸಿಂಗ್ ಹಜಾರೆ ತಾಳಿಕೋಟೆ, ಶಂಕರ್ ಅಲ್ಲೂರ, ಉಮೇಶ್ ಯಾದವ್ ರಂಗಂಪೇಟೆ, ಪ್ರಿಯಾಂಕ ವಿಶ್ವಕರ್ಮ, ಶರಣಬಸವ ಕೊಂಗಂಡಿ, ಶಿವಲಿಂಗಯ್ಯ ಸ್ವಾಮಿ ಬಳ್ಳುಂಡಗಿ ಮಠ,ಸೂಗಮ್ಮ ಕೊಂಗಂಡಿ ಅನನ್ಯ ಸ್ಥಾವರಮಠ, ಭೂಮಿಕಾ ಸ್ಥಾವರಮಠ, ಅಕ್ಷರ ಮಠ, ದೀಪಿಕಾ ಸ್ಥಾವರ ಮಠ, ಪ್ರಗತಿ, ಮನೋಜ್ ವಿಶ್ವಕರ್ಮ, ಮಹಾಂತೇಶ ಶಹಪೂರಕರ್ ಹಸನಾಪುರ, ಜಗದೀಶ ಮಾನು, ಶರಣಪ್ಪ ಕಮ್ಮಾರ, ಶರಣಕುಮಾರ ತಾಳಿಕೋಟಿ, ಪ್ರಭುಗೌಡ ದೇವಾಪುರ, ಸೋಮಶೇಖರ ಅಕ್ಕಿ, ವೀರೇಶ ಬಡಿಗೇರ, ಜಗದೀಶ ಪತ್ತಾರ,ಗೀತ ಗಾಯನಕ್ಕೆ ಈಶ್ವರ್ ಬಡಿಗೇರ್, ರಾಜಶೇಖರ್ ಗೆಜ್ಜಿ, ಉಮೇಶ್ ಯಾದವ್, ಸುರೇಶ್ ಅಂಬುರೆ, ರಮೇಶ ಕುಲಕರ್ಣಿ ತಬಲಾ ಸಾಥ್ ನೀಡಿದರು.
ಪ್ರಮುಖರಾದ ರಾಜು ಲಡ್ಡಾ, ಚಂದ್ರಶೇಖರ ಆಜಾದ್, ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪ ಮಠ, ಸುಗೂರೇಶ ಮಡ್ಡಿ, ಚಂದ್ರಕಾಂತ ಬಳುಂಡಗಿಮಠ, ಶಿವಶರಣಬಸವ ದಿಗ್ಗಾವಿ, ಸುನಿಲ್ ಮಡ್ಡಿ, ಆನಂದ ಗಡಗಡೆ,ಶ್ರೀಕಾಂತ ದಿಗ್ಗಾವಿ,ಓಂಪ್ರಕಾಶ ಗಡಗಡೆ ಸೇರಿದಂತೆ ಹಲವಾರು ಭಕ್ತವೃಂದದವರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…