ಬಿಸಿ ಬಿಸಿ ಸುದ್ದಿ

ಸುರಪುರ: ಪಿಎಲ್‍ಡಿ ಬ್ಯಾಂಕ್‍ನ ನೂತನ ಅಧ್ಯಕ್ಷರಾಗಿ ಬಸನಗೌಡ ಹೆಚ್.ಪಾಟೀಲ್ ಆಯ್ಕೆ

ಸುರಪುರ :ನಗರದ ಪ್ರಾಥಮಿಕ ಸಹಕಾರ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ (ಪಿಎಲ್‍ಡಿ ಬ್ಯಾಂಕ್) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಸನಗೌಡ ಹಣಮಂತ್ರಾಯಗೌಡ ಪಾಟೀಲ್ ದೇವಪುರ ಅವರು ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಯಾದಗಿರಿಯ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ಶಂಕರ ಗೋಪಾಲ ಅವರು, ಅಧ್ಯಕ್ಷ ಸ್ಥಾನದ ಚುನಾವಣೆಗೆ ಬಸನಗೌಡ ಹಣಮಂತ್ರಾಯಗೌಡ ಪಾಟೀಲ್ ದೇವಪುರ ಒಬ್ಬರೆ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಘೋಷಿಸಿದರು.

ಒಟ್ಟು ಹನ್ನೊಂದು ಜನ ನಿರ್ದೇಶಕರ ಪೈಕಿ ಏಳು ಜನ ನಿರ್ದೇಶಕರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಬ್ಯಾಂಕ್‍ನ ನಿರ್ದೇಶಕರಾದ ರಾಜಾ ಸುಭಾಶ್ಚಂದ್ರ ನಾಯಕ, ರಾಮಚಂದ್ರ ಪೂಜಾರಿ, ವಾಮನರಾವ್ ದೇಶಪಾಂಡೆ, ನಿಂಗಣ್ಣ ಕೆಂಗೂರಿ, ಶೆಟ್ಟಿನಾಯಕ, ಬಸಣ್ಣ ಕಮತಗಿ ಮತ್ತು ಬ್ಯಾಂಕ್ ವ್ಯವಸ್ಥಾಪಕ ರಾಜಶೇಖರ ದಾಯಗೋಡಿ ಇದ್ದರು.

ಅಧ್ಯಕ್ಷರ ಹೆಸರು ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬ್ಯಾಂಕ್ ಆವರಣದಲ್ಲಿ ಪಟಾಕಿ ಸಿಡಿಸಿ, ಗುಲಾಲ್ ಎರಚಿ, ಸಿಹಿ ತಿನ್ನಿಸಿ ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಸಂಭ್ರಮಿಸಿದರು.

ಕಾಂಗ್ರೆಸ್ ಮುಖಂಡರಾದ ವಿಠ್ಠಲ ಯಾದವ, ಶಾಸಕ ಆರ್‍ವಿಎನ್ ಅವರ ಆಪ್ತ ಸಹಾಯಕ ಹಣಮಂತ್ರಾಯ ಮಕಾಶಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

emedialine

Recent Posts

ಭಕ್ತರು ಹೆಚ್ಚಿನ ಸಹಾಯ ಸಹಕಾರ ಮನೋಭಾವನೆ ಹೊಂದಲು ಕರೆ

ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ…

2 hours ago

ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಹಕರಿಸಲು ಶಾಸಕ ಅಲ್ಲಪ್ರಭು ಪಾಟೀಲ ಸಲಹೆ

ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ…

3 hours ago

ಕಲಬುರಗಿ; ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ; ಕಲಬುರಗಿ ಜಿಲ್ಲೆಯ ಒಂಭತ್ತು ಶಿಶು ಅಭಿವೃದ್ಧಿ ಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ…

3 hours ago

ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರ ತೆಗೆದುಕೊಳ್ಳಿ; ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…

4 hours ago

ಅಖಿಲ ಭಾರತ ವೀ.ಲಿಂ ಮಹಾಸಭಾ ನೂತನ ಅಧ್ಯಕ್ಷ ನಿದೇರ್ಶಕರ ನೇಮಕ

ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…

4 hours ago

ಡೆಂಘೀ ವಿರೋಧಿ ಮಾಸಾಚರಣೆ | ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಯಾವ ಕಾಯಿಲೆ ಬರದು

ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…

4 hours ago