ಹೈದರಾಬಾದ್ ಕರ್ನಾಟಕ

ಕನ್ನಡ ರಾಜ್ಯೋತ್ಸವದ ಕಲಾ ಸಂಭ್ರಮ | ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ

ಶಹಾಬಾದ :ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಮಕ್ಕಳನ್ನು ಕನ್ನಡ ಭಾಷೆ ಬದಲಾಗಿ ಇಂಗ್ಲೀಷ್ ಶಾಲೆಗೆ ಕಳುಹಿಸುತ್ತಿರುವುದು ದುರಂತ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಅವರು ನಗರದ ಬಾಲ ವಿದ್ಯಾಮಂದಿರ ಶಾಲೆಯ ಮೈದಾನದಲ್ಲಿ ಕರವೇಯಿಂದ ಆಯೋಜಿಸಲಾದ ಕಲಾ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಇಂದು ಕನ್ನಡದ ಬಗ್ಗೆ ಮಾತನಾಡುವ ಕನ್ನಡಿಗರಾದ ನಾವು ನಮ್ಮ ಮಕ್ಕಳನ್ನೇ ಕನ್ನಡ ಶಾಲೆಗೆ ಹಾಕಲು ಮುಂದಾಗುತ್ತಿಲ್ಲ.ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.ಅಲ್ಲದೇ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ.ರನ್ನ,ಪೊನ್ನ,ಜನ್ನರಂತಹ ಮಹಾನ ಕವಿಗಳು ಭಾಷೆಗೆ ಕೊಟ್ಟಂತಹ ಕೊಡುಗೆ ಅಪಾರ.ಬಸವಾದಿ ಶರಣರು ಕನ್ನಡ ಭಾಷೆಗೆ ವಚನ ಸಾಹಿತ್ಯದ ಮೂಲಕ ಶ್ರೀಮಂತಗೊಳಿಸಿದರು.ಅಣ್ಣ ಬಸವಣ್ಣನವರು ಅಚ್ಚ ಕನ್ನಡ ಭಾಷೆಯಲ್ಲಿಯೇ ವಚನಗಳನ್ನು ರಚಿಸುವ ಮೂಲಕ ಕನ್ನಡವನ್ನು ಜನಸಾಮನ್ಯರಿಗೆ ಮುಟ್ಟಿಸುವ ಕಾರ್ಯ ಮಾಡಿದರು.

ಅಂತಹ ವಚನ ಸಾಹಿತ್ಯವನ್ನು ಅರಿಯುವ ಅಗತ್ಯವಿದೆ.ಕೇವಲ ಕನ್ನಡದ ಬಗ್ಗೆ ಹೇಳುವಂತರಾಗದೇ, ಆಬಗ್ಗೆ ಕಾರ್ಯಪ್ರವೃತ್ತರಾದಾಗ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ಶಹಾಬಾದ: ನಗರದ ವಾಡಿ ವೃತ್ತದಲ್ಲಿ ಕರವೇಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ತಹಶೀಲ್ದಾರ ಜಗದೀಶ್.ಎಸ್.ಚೌರ ಹಾಗೂ ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಅವರು ಕನ್ನಡದ ನಾಡ ಧ್ವಜಾರೋಹಣ ನೇರವೇರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಗೌರಾವಾಧ್ಯಕ್ಷ ಬಸವರಾಜ ಮಯೂರ, ಕನ್ನಡ ಬಾಷೆಗೆ ತನ್ನದೇ ಸಂಸ್ಕøತಿಯನ್ನು ಹೊಂದಿದೆ.ಅದನ್ನು ಉಳಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅವರಲ್ಲಿ ಕನ್ನಡದ ಕಂಪನ್ನು ಹರಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಶಹಾಪೂರಿನ ಮಹಲ ರೋಜಾದ ಮಲ್ಲಿಕಾರ್ಜುನ ಮುತ್ಯಾ ಸಾನಿಧ್ಯ ವಹಿಸಿದ್ದರು. ಕರವೇ ಜಿಲ್ಲಾಧ್ಯಕ್ಷ ಪುನಿತರಾಜ ಕವಡೆ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಉದ್ದಿಮೆದಾರ ನರೇಂದ್ರ ವರ್ಮಾ, ಗುಂಡಪ್ಪ ಶಿರಡೋಣ, ಜಹೀರ ಅಹ್ಮದ ಪಟವೇಗಾರ, ನಿರ್ಮಲಾ ತಳವಾರ, ವಿಕ್ರಮಪ್ರಸಾದ ಮೂಲಿಮನಿ, ಹರೀಶ ಕರಣಿಕ, ಬಸವರಾಜ ಮದ್ದರಕಿ, ಶರಣಗೌಡ ಪಾಟೀಲ, ಶರಣಬಸಪ್ಪ ಕೋಬಾಳ, ಕಿರಣ ಚಹ್ವಾಣ, ಭಗವಾನ ದಂಡಗುಲಕರ ವೇದಿಕೆ ಮೇಲೆ ಇದ್ದರು.

ಬೆಳಗ್ಗೆ 10 ಗಂಟೆಗೆ ವಾಡಿ ಕ್ರಾಸ್ ನಲ್ಲಿ ತಾಲೂಕ ತಹಶೀಲ್ದಾರ ಜಗದೀಶ್ ಚೌರ ಹಾಗೂ ಗ್ರೇಡ್ 2 ತಹಸೀಲ್ದಾರ ಗುರುರಾಜ ಸಂಗಾವಿ ಯವರಿಂದ ಕನ್ನಡದ ನಾಡ ಧ್ವಜಾರೋಹಣ ನೇರವೇರಿಸಲಾಯಿತು.

ಕಲಾ ಸಂಭ್ರಮದಲ್ಲಿ ಸುಮಾರು ನೃತ್ಯ ಕಲಾ ತಂಡಗಳು ಭಾಗಿಯಾಗಿ ತಮ್ಮ ಹಾಡುಗಾರಿಕೆ, ನೃತ್ಯ ಕಲೆಯನ್ನು ಪ್ರದರ್ಶಿಸಿದರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಕರವೇ ತಾಲೂಕ ಅಧ್ಯಕ್ಷ ಯಲ್ಲಾಲಿಂಗ ಹೈಯಾಳಕರ ಸ್ವಾಗತಿಸಿದರು, ಮರಲಿಂಗ ಯಾದಗಿರಿ ನಿರೂಪಿಸಿದರು, ಶಿವಕುಮಾರ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

2 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago