ವಾಡಿ: ಕೇವಲ ಕೆಲವೇ ಜನಸಂಖ್ಯೆ ಹೊಂದಿರುವ ಪುಟ್ಟ ಹಳ್ಳಿಗಳಿಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ಯ ಮೂಲಕ ಸಂಪರ್ಕ ಕಲ್ಪಿಸಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ, ಪ್ರತಿ ಗ್ರಾಮದ ಜನರ ಮನದಲ್ಲಿ ಅಟಲ್ ಜೀ ಮನೆ ಮಾಡಿದ್ದಾರೆ ಎಂದು ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಉತ್ತಮ ಆಡಳಿತ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು.
ರಸ್ತೆಗಳು ಕೇವಲ ಮೂಲಭೂತ ಸೌಕರ್ಯ ವಲ್ಲ ಬದಲಿಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪಥ ಎಂದು ಅವರು ಸುವರ್ಣ ಚತುಷ್ಪಥ ಯೋಜನೆ’ ಮೂಲಕ ಸಾಧಿಸಿ ತೋರಿಸಿದರು.
ಈ ಯೋಜನೆ ಮುಖಾಂತರ ತಮ್ಮದೇ ಅಭಿವೃದ್ಧಿ ಎಂದು ಕೆಲವರು ತಮ್ಮ ಬೆಳೆ ಬೇಯಿಸಿ ಕೋಳ್ಳುತ್ತಿದ್ದಾರೆ,ವಿಶ್ವದ ಪ್ರಭಾವಿ ರಾಷ್ಟ್ರಗಳ ವಿರೋಧಕ್ಕೆ ಮಣಿಯದೇ ಪೋಕ್ರಾನಿನಲ್ಲಿ ಅಣು ಪರೀಕ್ಷೆ ನಡೆಸಿದ ಅವರ ದಿಟ್ಟತನ ಭಾರತದ ಪ್ರತಿ ನಾಗರಿಕನ ಸ್ವಾಭಿಮಾನ ಮೆರೆದಿದ್ದು ಎಂದು ಮರೆಯದಂತಾಗಿದೆ. ಮಕ್ಕಳು ಶಾಲೆಯತ್ತ ತೆರಳಲಾಗದೆ ಇದ್ದರೆ ಶಾಲೆಯೇ ಮಕ್ಕಳ ಬಳಿ ತೆರಳಬೇಕು ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯನ್ನು ಸಾಧಿಸಿದ್ದು ಅಟಲ್ ಜಿ ಸರ್ಕಾರ ಜಾರಿಗೆ ತಂದ ಸರ್ವಶಿಕ್ಷಾ ಅಭಿಯಾನ.
ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧಗಳ ಸುಧಾರಣೆ ಗಾಗಿ ಯತ್ನ ಮತ್ತು ಅವರಿಗೆ ಬುದ್ದಿ ಕಲಿಸಿದ್ದು,ಕಾರ್ಗಿಲ್ ವಿಜಯ ಇತ್ಯಾದಿ ಮಹತ್ವದ ನಿರ್ಧಾರ ಅಟಲ್ ಜೀ ಆಡಳಿತದ ಸಾಧನೆಯಾಗಿದೆ ಆದ್ದರಿಂದ ಇವರ ಜನ್ಮದಿನಾಚರಣೆಯನ್ನು 2014 ರಲ್ಲಿ ಮೋದಿ ಜೀ ಅವರು ಉತ್ತಮ ಆಡಳಿತ ದಿನವಾಗಿ ಘೋಷಿಸಿದ್ದಾರೆ ಅದರಂತೆ ನಾವು ಆಚರಣೆ ಮಾಡುತ್ತಾ ಬರುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಉಪಾಧ್ಯಕ್ಷ ಅಶೋಕ ಪವಾರ,ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ ಮುಖಂಡರಾದ ರಾಮಚಂದ್ರ ರೆಡ್ಡಿ,ಅಶೋಕ ಹರನಾಳ,ಭೀಮರಾವ ದೊರೆ,ಶರಣಗೌಡ ಚಾಮನೂರ, ಶಿವಶಂಕರ ಕಾಶೆಟ್ಟಿ,ಕಿಶನ ಜಾದವ, ಸುಬಾಷ ವರ್ಮ,ರಾಜು ಕೋಲಿ,ಅಯ್ಯಣ್ಣ ದಂಡೋತಿ,ಜಯಂತ ಪವಾರ,ಮಹೇಂದ್ರ ಕುಮಾರ,ಯಂಕಮ್ಮ ಗೌಡಗಾಂವ,ನಿರ್ಮಲಾ ಇಂಡಿ,ಶರಣಮ್ಮ ಯಾದಗಿರಿ,ಉಮಾದೇವಿ ಗೌಳಿ,ಹೀರಾ ನಾಯಕ,ಮಲ್ಲಿಕಾರ್ಜುನ ಸಾತಖೇಡ,ಪ್ರೇಮ ರಾಠೋಡ,ಬನಶಂಕರ ಮುಸ್ತುರ,ಅಜಯ ಸೂಗುರ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…