ಬಿಸಿ ಬಿಸಿ ಸುದ್ದಿ

ಇವ ನಮ್ಮವ, ಇವ ನಮ್ಮವ ಜಗತ್ತಿನ ಧ್ಯೇಯವಾಕ್ಯವಾಗಲಿ

ಕಲಬುರಗಿ: ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಬರುವ “ಭಾರತದ ಪ್ರಜೆಗಳಾದ ನಾವು” ಎನ್ನುವ ವಾಕ್ಯ ಈ ದೇಶದ ಬಹು ದೊಡ್ಡ ಧ್ಯೇಯ ವಾಕ್ಯ. ಅದರಂತೆ ಕಲ್ಯಾಣ ನಾಡಿನ ಶರಣರು ಬದುಕಿ ಬೋಧಿಸಿದ “ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ” ಎನ್ನುವ ವಾಕ್ಯ ಜಗತ್ತಿನ ಬಹು ದೊಡ್ಡ ಧ್ಯೇಯವಾಕ್ಯ ಎಂದು ಮೈಸೂರಿನ ಹಿರಿಯ ಅನುಭಾವಿ, ಅಪೂರ್ವ ಅಧ್ಯಾತ್ಮ ಸಾಧಕ ಶಂಕರ ದೇವನೂರ ಹೇಳಿದರು.

ನಗರದ ಕುಸನೂರ ರಸ್ತೆಯ ಕೃಷ್ಣ ನಗರದಲ್ಲಿರುವ ಡಾ. ಲಿಂಗಣ್ಣ ದೇವರಗೋನಾಲ ಅವರ ವೇಣುವನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ “ಅನುಭಾವಿಯೊಂದಿಗೆ ಅನೌಪಚಾರಿಕ ಸಂವಾದ” ಕಾರ್ಯಕ್ರಮದಲ್ಲಿ ಭಾಗವಹಿಸಿ “ಆಧುನಿಕ ಜಗತ್ತಿನ ನಡೆ ಯಾವ ಕಡೆ?” ಎನ್ನುವ ಕುರಿತು ಮಾತನಾಡಿದ ಅವರು, ಕಲ್ಯಾಣ ನಾಡಿನಲ್ಲಿ ನಡೆದ ಬಸವ ಚಳವಳಿ ಅಂತಃಕರಣ, ಸಹೋದರತೆ ಹಾಗೂ ತಾಯ್ತನದಿಂದ ಕೂಡಿದೆ ಎಂದು ತಿಳಿಸಿದರು.

ಶರಣರ ಚಿಂತನೆಗಳಲ್ಲಿ ಕರುಳ ಸಂಬಂಧವಿದೆ. ಆದರೆ ಇಂದು ಕೇವಲ ಕೊರಳ (ಮಾತು) ಸಂಬಂಧವಾಗಿ ಉಳಿದಿದೆ. ನಾವಾಡುವ ಮಾತುಗಳು ಗುಣವಾಚಕವಾಗಿರಬೇಕು. ಆಗ ಮಾತ್ರ ನಮ್ಮ ಸಂಸ್ಕøತಿ, ಪರಂಪರೆ ಅರ್ಥವಾಗಬಲ್ಲುದು. ಮಾತು ವಚನವಾದಾಗ ಮಾತ್ರ ಶರಣನಾಗಲು ಸಾಧ್ಯ. ನಾವಿಲ್ಲಿ ಇರುವುದಕ್ಕೆ ಬಂದಿಲ್ಲ. ಇರುವುದನ್ನು ಅರಿಯಲಿಕ್ಕೆ ಬಂದಿದ್ದೇವೆ ಎಂದು ವಿವರಿಸಿದರು.

ಆಧುನಿಕ ಜಗತ್ತಿನ ನಾವುಗಳು ತರಣಿಯ ಹುಳುವಿನಂತೆ ನಮಗೆ ನಾವೇ ಪಂಜರವನ್ನು ಹೆಣೆದುಕೊಂಡು ಅದರಿಂದ ಪಾರಾಗಿ ಬರಲು ಹೆಣಗಾಡುತ್ತಿದ್ದೇವೆ. ಅಂತೆಯೇ ಬುದ್ಧ ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದರು. ಅದರಂತೆ ಅತಿ ಆಸೆ ಗತಿ ಕೆಡಿಸಿತು ಎಂಬ ನಾಣ್ನುಡಿ ಕೂಡ ಇದೆ. ನಮ್ಮ ನಿತ್ಯದ ಬದುಕು ಹುಡುಕಾಟದೊಂದಿಗೆ ಆರಂಭವಾಗುತ್ತಿದ್ದು, ಧೂಳು ಮುಖದ ಮೇಲೆ ಇದೆ ಎಂಬುದನ್ನು ಅರಿಯದೆ ಕನ್ನಡಿಯನ್ನು ಒರೆಸುತ್ತಿದ್ದೇವೆ. ಶಾಂತಿ, ನೆಮ್ಮದಿ, ಸಮಾಧಾನವನ್ನು ಹೊರಗಡೆ ಹುಡುಕುವ ನಾವುಗಳು ಬಸವ-ಅಲ್ಲಮ, ಅಕ್ಕ ಹೇಳುವಂತೆ ನಮ್ಮೊಳಗಿಳಿದು ಹುಡುಕಬೇಕು. ಅಂತರಂಗ ಬಹಿರಂಗ ಶುದ್ಧಿಯಾದಾಗ ಮಾತ್ರ ನಮ್ಮನ್ನು ನಾವು ಕಾಣಲು ಸಾಧ್ಯ. ನಮ್ಮ ಪಯಣ ಅಧ್ಯಾತ್ಮದ ಕಡೆ, ಜ್ಞಾನದ ಕಡೆ ಸಾಗಬೇಕು ಎಂದು ಹೇಳಿದರು.

ಪ್ರೊ. ಕಲ್ಯಾಣರಾವ ಪಾಟೀಲ ನಿರೂಪಿಸಿದರು. ಡಾ. ಲಿಂಗಣ್ಣ ಗೋನಾಲ ಸ್ವಾಗತಿಸಿದರು. ಡಾ. ವಿಕ್ರಮ ವಿಸಾಜಿ ಚಾಲನೆ ನೀಡಿದರು. ಡಾ. ಅಪ್ಪಗೆರೆ ಸೋಮಶೇಖರ, ಡಾ. ಗವಿಸಿದ್ದಪ್ಪ ಪಾಟೀಲ, ಪ್ರೊ. ಎಸ್.ಎಲ್. ಪಾಟೀಲ, ಡಾ. ವಿಜಯಕುಮಾರ ಪರೂತೆ, ಡಾ. ಗುರುಸಿದ್ದಪ್ಪ, ಡಾ. ಶಿವರಂಜನ ಸತ್ಯಂಪೇಟೆ, ಡಾ. ಮಹೇಶ ಗಂವ್ಹಾರ, ಬಸವಲಿಂಗಪ್ಪ ಆಲ್ಹಾಳ, ಡಾ. ಜಯದೇವಿ ಗಾಯಕವಾಡ, ಶಿವಾನಂದ ವಾಲೀಕಾರ ಇತರರಿದ್ದರು.

ಮಕ್ಕಳಿಗೆ ಅವರಲ್ಲಿರುವ ಸಾಮಥ್ರ್ಯ ತೋರಿಸುವ ಬದಲಿಗೆ ಆರ್ಥಿಕ ಅವಿವೇಕದ ನೆಲೆಯನ್ನು ತೋರಿಸುತ್ತಿದ್ದೇವೆ. ಹೂರಣ ಮತ್ತು ಅದರ ಮೇಲಿನ ಹಿಟ್ಟಿನ ಕವಚದಿಂದ ಹೋಳಿಗೆ ತಯಾರಾಗುತ್ತದೆ. ಅದರಂತೆ ತೋರಣ ಕೇವಲ ಪದವಿ. ಹೂರಣ ಎನ್ನುವುದು ಸಂಸ್ಕಾರ. ಕೇವಲ ಪದವಿಯಿಂದ ಸಂಸ್ಕಾರ ದೊರೆಯುವುದಿಲ್ಲ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. -ಶಂಕರ ದೇವನೂರು, ಮೈಸೂರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

14 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

14 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

14 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

14 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

14 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

14 hours ago