ಬಿಸಿ ಬಿಸಿ ಸುದ್ದಿ

ಹಳಿ ದಾಟುವಾಗಲೇ ದಿಢೀರ್ ಬಂದ ರೈಲು: ಪವಾಡ ಸದೃಶ್ಯ ಅಜ್ಜಿ ಪಾರು

ಕಲಬುರಗಿ (ಚಿತ್ತಾಪುರ): ವೃದ್ಧೆಯೊಬ್ಬಳು ರೈಲು ಹಳಿ ದಾಟುವಾಗಲೇ ರೈಲು ಅಡಿ ಸಿಲುಕಿ ಹಳಿಗಳ ಮಧ್ಯೆ ಮಲಗಿಕೊಂಡು ಅಚ್ಚರಿ ಹಾಗೂ ಪವಾಡ ಸದೃಶ್ಯ ರೀತಿಯಲ್ಲಿ ಕೊನೆಗೂ ಅಜ್ಜಿ ಪಾರಾದ ಘಟನೆ ಜಿಲ್ಲೆಯ ಚಿತ್ತಾಪೂರ್ ಪಟ್ಟಣದ ರೈಲು ನಿಲ್ದಾಣದಲ್ಲಿ ಗಣೇಶ್ ಚತುರ್ಥಿಯ ದಿನವಾದ ಸೋಮವಾರದಂದು ವರದಿಯಾಗಿದೆ.

ಚಿತ್ತಾಪೂರ್ ಸ್ಟೇಷನ್ ತಾಂಡಾದ ನಿವಾಸಿ ಮಾನಿಬಾಯಿ ಚಂದರ್ ಎಂಬ ಅಜ್ಜಿಯೇ ಯಮಲೋಕದ ಬಾಗಿಲು ತಟ್ಟಿ ಸುರಕ್ಷಿತವಾಗಿ ಮರಳಿ ಬಂದ ಅದೃಷ್ಟವಂತೆ.

ಮಾನಿಬಾಯಿ ಗೂಡ್ಸ್ ರೈಲು ಬರುವುದನ್ನು ಗಮನಿಸದೇ ತಾಂಡಕ್ಕೆ ಹೋಗಲು ರೈಲು ಹಳಿ ದಾಟುವಾಗ ದಿಡೀರ್ ಅಂತ ರೈಲು ಪ್ರತ್ಯಕ್ಷವಾಗಿದೆ. ತಕ್ಷಣ ಸ್ಥಳೀಯರು ಆಕೆಯನ್ನು ರಕ್ಷಿಸಲು ಕಿರುಚಾಡತೊಡಗಿದರು. ಹಳಿಗಳ ಮಧ್ಯೆ ಮಲಗಿ ಜೀವ ರಕ್ಷಿಸಿಕೊಳ್ಳಲು ಎಲ್ಲರೂ ಕೂಗಿ, ಕೂಗಿ ಹೇಳಿದರು. ಅವರು ಹೇಳಿದಂತೆ ಅಜ್ಜಿ ತನ್ನ ಜೀವ ಉಳಿಸಿಕೊಳ್ಳಲು ರೈಲು ಹಳಿಗಳ ಮಧ್ಯೆ ಮಲಗಿಬಿಟ್ಟಳು. ಒಂದು ಹಂತದಲ್ಲಿ ರೈಲು ಬೋಗಿಗಳು ಒಂದೊಂದೇ ಆಕೆಯನ್ನು ದಾಟಿ ಹೋಗುತ್ತಿದ್ದಾಗ ವೃದ್ಧ ಮಹಿಳೆ ಕತ್ತು ಮೇಲಕ್ಕೆ ಎತ್ತುವುದನ್ನು ಕಂಡ ಸ್ಥಳೀಯರು ರೈಲು ದಾಟುವವರೆಗೂ ಮಿಸುಕಾಡದಿರಲು ಎಚ್ಚರಿಕೆ ಕೊಟ್ಟರು. ಪರಿಣಾಮ ರೈಲು ದಾಟುವವರೆಗೂ ಅಜ್ಜಿ ರೈಲು ಹಳಿಗಳೆರಡರ ಮಧ್ಯೆ ಮಲಗಿದಳು. ಪರಿಣಾಮ ಆಕೆ ಜೀವ ಉಳಿಯಿತು.

ಮಾನಿಬಾಯಿಯ ಪ್ರಾಣ ಕಂಟಕದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಘಟನೆಯಿಂದ ಗಾಬರಿಯಾಗಿದ್ದ ಮಾನಿಬಾಯಿ ನಂತರ ಚೇತರಿಕೊಂಡಿದ್ದಾಳೆ. ಇನ್ನು ಸ್ಟೇಚನ್‌ನ ಪಕ್ಕದಲ್ಲಿಯೇ ಇರುವ ತಾಂಡಾಕ್ಕೆ ಹೋಗಬೇಕಾದರೆ ಅಲ್ಲಿನ ನಿವಾಸಿಗಳು ನಿತ್ಯ ಪ್ರಾಣ ಪಣಕ್ಕಿಟ್ಟು ರೈಲು ಹಳಿ ದಾಟಬೇಕಾಗಿದೆ. ಮೇಲ್ಸೆತುವೆ ನಿರ್ಮಾಣ ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಟೇಷನ್‌ನಿಂದ ತಾಂಡಾ ಸೇರಲು ಈಗಲಾದರೂ ಮೇಲ್ಸೆತುವೆ ನಿರ್ಮಾಣ ಮಾಡುವ ಮೂಲಕ ಅಪಾಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ತಾಂಡಾ ನಿವಾಸಿಗಳು ಒತ್ತಾಯಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

36 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

38 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

40 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago