ಕಲಬುರಗಿ: ಸಮಾಜ ಸ್ಪಂದಿಸುವ ನಿಟ್ಟಿನಲ್ಲಿ ಕವಿಗಳು ತನ್ನ ಕಾವ್ಯ ಹೊರಹಾಕಬೇಕು.ಒಟ್ಟಾರೆಯಾಗಿ ಸಾಮಾಜಿಕ ಪರಿವರ್ತನೆ ಒಬ್ಬ ಲೇಖಕನ ಮೂಲ ಉದ್ದೇಶವಾಗಿರಬೇಕು. ಲೇಖಕಿ ಕವಿತಾ ಪಿ ಮೋರಾ ಅವರು ತಮ್ಮ ಶಿಕ್ಷಕ ವೃತ್ತಿಯ ಜತೆಗೆ ಕವನಗಳು ರಚಿಸಿ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಮತ್ತು ಸಂಬಂಧಗಳಲ್ಲಿ ಬಿರುಕುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಂಬಂಧಗಳು ಬೆಸೆಯುವ ಸೂಜಿಯಾಗಿ ಇಂದಿನ ಕವಿಗಳು ಕಾರ್ಯ ಮಾಡಬೇಕಾಗಿದೆ ಎಂದು ಶಾಸಕ ಅಲ್ಲಮಪ್ರಬು ಪಾಟೀಲ ನೆಲೋಗಿ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಡಗಂಚಿಯ ಅಮರ್ಜಾ ಪ್ರಕಾಶನದ ಜಂಟಿ ಆಶ್ರಯದಲ್ಲಿ ರವಿವಾರ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ – ಲೇಖಕಿ ಕವಿತಾ ಪಿ ಮೋರಾ ಅವರ ವಿರಚಿತ `ಹೃದಯ ವೀಣೆ’ ಎಂಬ ಚೊಚ್ಚಲ ಕವನ ಸಂಕಲನವನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕೃತಿ ಪರಿಚಯಿಸಿದ ಹಿರಿಯ ಸಾಹಿತಿ-ಪತ್ರಕರ್ತ ಧರ್ಮಣ್ಣಾ ಹೆಚ್. ಧನ್ನಿ, ವೃತ್ತಿ ಮತ್ತು ಪ್ರವೃತ್ತಿಗಳು ಜೊತೆಯಾದಾಗ ಹೊಸ ಸೃಜನಶೀಲ ಕಾರ್ಯ ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಹೃದಯ ವೀಣೆ ಕವನ ಸಂಕಲನವೇ ಸಾಕ್ಷಿ. ಕನ್ನಡ ಸಾರಸ್ವತ ಲೋಕ್ಕೆ ಈ ಕೃತಿ ತನ್ನದೇ ಮೌಲ್ಯದಿಂದ ಕೂಡಿದೆ. ಕವಿಯ ಮನದೊಳಗೆ ಹುದುಗಿದ ವಿಚಾರಗಳು ಅಕ್ಷರ ರೂಪದಲ್ಲಿ ಅಭಿವ್ಯಕ್ತಿಗೊಳಿಸಿದಾಗ ಉತ್ತಮ ಕೃತಿ ಹೊರ ಬರಲು ಸಾಧ್ಯ ಎಂದು ಮಾರ್ಮಿಕವಾಗಿ ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ಹೊರಬರುತ್ತಿರುವ ಲೇಖಕ ರಚಿಸಿದ ಕವನಗಳು ಇಂದಿನ ಸಮಾಜದ ಪರಿವರ್ತನೆಗೆ ಪೂರಕವಾಗಿರಬೇಕು. ಮತ್ತು ಮೌಲ್ಯಗಳನ್ನು ತುಂಬಿದ್ದಾಗಿರಬೇಕು. ಇವತ್ತಿನ ದಿವಸ ಕಲುಷಿತಗೊಂಡ ಸಮಾಜವನ್ನು ಶುದ್ಧೀಕರಿಸುವಂಥ ಕಾವ್ಯ ಹೊರಬರಬೇಕಾಗಿದೆ. ಅಂದಾಗ ಮಾತ್ರ ಸಮಾಜದಲ್ಲಿ ತಮ್ಮ ಕವನಗಳಿಗೆ ವಿಶೇಷ ಮಹತ್ವ ಬರಲು ಸಾಧ್ಯ ಎಂದು ಹೇಳಿದರು.
ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ ಮಾತನಾಡಿ, ಸೃಜನಶೀಲ ಬರಹದಿಂದ ಸಮಾಜ ಪರಿವರ್ತನೆ ಸಾಧ್ಯ. ಜೀವನ ಯಶಸ್ಸಿಗೆ ಕವಿ ಮನಸ್ಸು ತುಡಿತದಿಂದ ಕೂಡಿರುತ್ತದೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕಮಲಾಪೂರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ ಓಕಳಿ, ಉತ್ತರ ವಲಯ ಬಿಇಓ ಸೋಮಶೇಖರ ಹಂಚನಾಳ, ಲೇಖಕಿ ಕವಿತಾ ಪಿ ಮೋರಾ ಮಾತನಾಡಿದರು.
ಪ್ರಮುಖರಾದ ಶಾಮರಾವ ಸೂರನ್, ಯಶ್ವಂತರಾಯ ಅಷ್ಠಗಿ, ಶರಣರಾಜ್ ಛಪ್ಪರಬಂದಿ, ಶ್ರೀಕಾಂತ ಪಾಟೀಲ ತಿಳಗೂಳ, ಮಂಜುನಾಥ ಕಂಬಾಳಿಮಠ, ಡಾ. ಶರಣಬಸಪ್ಪ ವಡ್ಡನಕೇರಿ, ಕಸ್ತೂರಿಬಾಯಿ ರಾಜೇಶ್ವರ, ವಿಶಾಲಾಕ್ಷಿ ಮಾಯಾಣ್ಣವರ್, ಹೆಚ್. ಎಸ್ ಬರಗಾಲಿ, ಸಿದ್ಧರಾಮ ಸರಸಂಬಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಮಹಾಂತೇಶ ಪಾಟೀಲ, ಶಿವಕುಮಾರ ಸಿ.ಹೆಚ್., ನರಸಪ್ಪಾ ಬಾವಗಿ, ಶಿವಾನಂದ ಪೂಜಾರಿ, ಗಂಗಮ್ಮ ನಾಲವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…